ಮುಂಗೋಪಿ ಆದ್ರೂ ಸುಂದ್ರಿ, ಇಂತಾ ವಿಲನ್ ನಮ್ಮ ಲೈಫಲ್ಲೂ ಇರಬಾರದಾ ಅನ್ನೋ ಫೀಲ್‌ ಬರಿಸುವಂತಹ ಏಕೈಕ ವಿಲನ್‌ ಅಗ್ನಿಸಾಕ್ಷಿ ಚಂದ್ರಿಕಾ ಅಲಿಯಾಸ್‌ ಪ್ರಿಯಾಂಕಾ. ಬಿಗ್‌ ಬಾಸ್‌ ಎಂಟ್ರಿ ಕೊಡುವ ಮುನ್ನ ಏನೆಲ್ಲಾ ಮಾತಾಡಿದ್ರೂ ನೋಡಿ.

ಕಲರ್ಸ್‌ ಕನ್ನಡದ ಖ್ಯಾತ ಧಾರಾವಾಹಿ 'ಅಗ್ನಿಸಾಕ್ಷಿ' ವಿಲನ್‌ ಚಂದ್ರಿಕಾ ಅಲಿಯಾಸ್‌ ಪ್ರಿಯಾಂಕಾ ಬಿಗ್‌ ಬಾಸ್‌ ಸೀಸನ್‌-7 ರ ಎರಡನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದಾರೆ.

ವೇದಿಕೆ ಮೇಲೆ ಬರುತ್ತಿದ್ದಂತೆ 'ಇಂತಹ ವಿಲನ್‌ ಯಾಕ್ರಿ ನಮ್ ಫೀಲ್ಮ್‌ಗಳಲ್ಲಿ ಇಲ್ಲ? ಬರೀ ಹುಡುಗರನ್ನು ವಿಲನ್‌ ಮಾಡ್ತಾರೆ ಇಲ್ಲ ಅಂದ್ರೆ ನಮ್ಮನ್ನೇ ವಿಲನ್ ಮಾಡ್ತಾರೆ' ಎಂದು ಸುದೀಪ್‌ ಹೇಳುತ್ತಾ ಪ್ರಿಯಾಂಕರನ್ನು ವೀಕ್ಷಕರಿಗೆ ಇಂಟ್ರಡ್ಯೂಸ್ ಮಾಡಿಸುತ್ತಾರೆ.

ಇಬ್ಬರ ಹೆಂಡಿರ ಮುಂದಿನ ಗಂಡ;ಮಕ್ಕಳನ್ನು ಎಣಿಸಿದ ಸುದೀಪ್‌ ಸುಸ್ತೋಸುಸ್ತು!

ನೆಗೆಟಿವ್‌ ಶೇಡ್‌ ಪಾತ್ರಗಳನ್ನೇ ಸಿಕ್ಕಾಪಟ್ಟೆ ಇಷ್ಟಪಡುವ ಪ್ರಿಯಾಂಕಾ ಜೀವನದಲ್ಲಿ ತಾಳ್ಮೆ ಕಮ್ಮಿ ಕೋಪ ಜಾಸ್ತಿ. ಕೋಪ ಬಂದ್ರಂತೂ ಕೈಗೆ ಸಿಕ್ಕಿದ ವಸ್ತುಗಳನ್ನು ಬಿಸಾಡುತ್ತಾರಂತೆ. ಅಪ್ಪನ ವಿಚಾರದಲ್ಲಿ ಸ್ವಲ್ಪ ಸೆನ್ಸಿಟಿವ್‌ ಇರುವ ಪ್ರಿಯಾಂಕಾ ಅಳುವುದು ತಂದೆಯ ವಿಚಾರಕ್ಕೆ ಮಾತ್ರ.

BB7:ಕಾಗೆ ಹಾರಿಸೋ ಕಿನ್ನರಿಗ್ಯಾಕೆ 'Royal Shetty'ಪಟ್ಟ, ಬೀಡಿ ತಿನ್ನೋ ಚಟ?

ಒಂದು ನಿಮಿಷ ಗ್ಯಾಪ್‌ ಸಿಕ್ಕರೆ ತಕ್ಷಣ ನಿದ್ದೆ ಮಾಡುತ್ತಾರಂತೆ ಅಷ್ಟೇ ಅಲ್ಲದೇ BB ಮನೆಗೆ ಬರುವ ಮುನ್ನ ಟಾಯ್ಲೆಟ್‌ ಕ್ಲೀನ್‌ ಮಾಡುವುದನ್ನು ಕಲಿತುಕೊಂಡು ಬಂದಿದ್ದಾರೆ. ಪ್ರಿಯಾಂಕಾ ಬಿಗ್‌ ಬಾಸ್‌ ಮನೆಯಲ್ಲಿ ಎಷ್ಟು ದಿನಗಳ ಕಾಲ ಉಳಿಯುತ್ತಾರೆಂದು ಕಾದು ನೋಡಬೇಕಿದೆ.