ಕನ್ನಡ ಚಿತ್ರರಂಗದ ಸೂಪರ್‌ ಹಿಟ್ ಸಾಂಗ್ 'ಕೇಳಿ ಕೃಷ್ಣ ಹೇಳು ಪಾರ್ಥ ಕೇಳು ಕೃಷ್ಣ ಹೇಳು ಪಾರ್ಥ'  ಯಾರಿಗೆ ಜ್ಞಾಪಕ ಇಲ್ಲ ಹೇಳಿ? ಅದರಲ್ಲೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ 'ಅಲ್ಲೆಲ್ಲೆ ಅವಳ ನಗುವ' ಹಾಡು ಕೇಳಿದ ಕೂಡಲೇ ಕಣ್ಣೆದುರು ಬರುವುದು ಗಾಯಕ ವಾಸುಕಿ ವೈಭವ್‌.

ಶೈನ್‌ ಶೆಟ್ಟಿ ಕೈ ಸೇರಿದ್ದು 50 ಲಕ್ಷವಲ್ಲ,61 ಲಕ್ಷ ಮತ್ತು ದುಬಾರಿ ಕಾರು!

ಬಿಗ್ ಬಾಸ್‌ ಮನೆಯ ವಿಶೇಷವೇ ಹಾಗೆ. ಪ್ರತಿಯೊಂದು ಸೀಸನ್‌ನಲ್ಲೂ ಒಬ್ಬ ಗಾಯಕರನ್ನು ಜನರಿಗೆ ಪರಿಚಯಿಸುತ್ತಾರೆ. ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಿ ಉತ್ತಮ ಮಟ್ಟಕ್ಕೆ ಕೊಂಡೊಯ್ಯುತ್ತಾರೆ. ಚಂದನ್ ಶೆಟ್ಟಿ, ನವೀನ್ ಸಜ್ಜು ಅವರದ್ದೇ ಹಾದಿಯಲ್ಲಿ ಈಗ ವಾಸುಕಿ ವೈಭವ್ ಇದ್ದಾರೆ.  

ಬಿಗ್ ಬಾಸ್‌ ಸೀಸನ್‌-7 ಫಿನಾಲೆಯಲ್ಲಿ ವಾಸುಕಿ ವೈಭವ್ ಟ್ರೋಫಿ ಗೆಲ್ಲುವ ಭರವಸೆಯನ್ನು ಪ್ರೇಕ್ಷಕರಲ್ಲಿ ಮೂಡಿಸಿದವರು.  ಆದರೆ ವೋಟಿಂಗ್‌ನಲ್ಲಿ ಶೈನ್‌ ಹಾಗೂ ಕುರಿ ವಾಸುಕಿ ಅವರನ್ನು ಹಿಂದಿಕ್ಕಿದರು.  ಮನೆಯಿಂದ ಹೊರ ಬಂದ ವಾಸುಕಿ ಅವರನ್ನು ಸುದೀಪ್‌ ಪ್ರಶ್ನಿಸಿದಾಗ 'ಗೆದ್ದಾಗ ಯಾಕೆಂದು ಪ್ರಶ್ನಿಸಿಲ್ಲ, ಸೋತಾಗ ಯಾಕೆಂದು ಪ್ರಶ್ನಿಸುವುದಿಲ್ಲ' ಎಂದು ಹೇಳುವ ಮೂಲಕ ಜನರ ಪ್ರೀತಿ ಗಿಟ್ಟಿಸಿಕೊಂಡರು.

ಬುಸುಗುಡುವ ನಾಗಿಣಿ ದೀಪಿಕಾ ದಾಸ್ ಬಿಗ್ ಬಾಸ್‌ನಲ್ಲಿ ಪಡೆದ ಸಂಭಾವನೆ ಲೀಕ್!  

ಬಿಗ್ ಬಾಸ್‌ ಮನೆಯೊಳಗಿದ್ದಾಗ ರಚಿಸಿದ ಹಾಡು 'ಮನಸ್ಸಿಂದ ಯಾರೂನೂ ಕೆಟ್ಟೋರಲ್ಲ' ಹಾಡೂ ಸೂಪರ್‌ ಹಿಟ್‌ ಆಗಿದೆ. ಅದನ್ನು ಕಿಚ್ಚ ಸುದೀಪ್‌ ಹಾಡಿದ್ದಾರೆ. ಅಷ್ಟೇ ಅಲ್ಲದೆ ವಾಸುಕಿ ಜೊತೆ ಒಂದು ಚಿತ್ರ ಮಾಡಬೇಕು ಎಂದು ಮನದ ಆಸೆಯನ್ನು ವ್ಯಕ್ತಪಡಿಸಿಕೊಂಡಿದ್ದಾರೆ ಕಿಚ್ಚ ಸುದೀಪ್.