ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬಿಗ್ ಬಾಸ್‌ ಸೀಸನ್-7'ರಲ್ಲಿ 113 ದಿನಗಳನ್ನು ಪೂರೈಸಿರು ಶೈನ್‌ ಶೆಟ್ಟಿ ವಿಜೇತರಾಗಿದ್ದಾರೆ. 

ಕಿರುತೆರೆ ಹಾಗೂ ಬೆಳ್ಳಿತೆರೆ ಮೇಲೆ ನಾಯಕ ನಟನಾಗಿ ಮಿಂಚಿರುವ ಶೈನ್‌ ವೃತ್ತಿ ಜೀವನದಲ್ಲಿ ಬಿಗ್ ಬಾಸ್‌ ಟರ್ನಿಂಗ್ ಪಾಯಿಂಟ್‌ ಆಗಲಿದೆ. ಬಿಗ್ ಬಾಸ್‌ ವಿಜೇತರಿಗೆ 50 ಲಕ್ಷ ನಗದು ಬಹುಮಾನ ನೀಡುವುದಾಗ ಘೋಷಣೆ ಮಾಡಲಾತ್ತು ಈಗ ಅದನ್ನು ಶೈನ್‌ ಶೆಟ್ಟಿ ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ .

ಮನೆಗೆ ಬಂದ ಶೈನ್ ಶೆಟ್ಟಿ ಅಮ್ಮನ ಕಾಲಿಗೆ ಬಿದ್ದ ದೀಪಿಕಾ!

ಶೈನ್‌ ಶೆಟ್ಟಿ ಬಿಗ್ ಬಾಸ್‌ಯಿಂದ ಪಡೆದ ಒಟ್ಟು ಮೊತ್ತವೆಷ್ಟು? 

ಬಿಗ್‌ ಬಾಸ್‌ ವಿನ್ನರ್‌ಗೆ 50 ಲಕ್ಷ ಮತ್ತು ಟ್ರೋಫಿ, ಇಂಡಸ್ಟ್ರಿ 555 ಡಿ.ಟಿಎಂಟಿ ಕಂಪನಿಯಿಂದ 1 ಲಕ್ಷ ಹಾಗೂ 7 ಅಪ್‌ ಕಡೆಯಿಂದ 10 ಲಕ್ಷ ರೂ ಬಹುಮಾನವಾಗಿ ಸಿಕ್ಕಿದೆ. ಒಟ್ಟಾಗಿ 61 ಲಕ್ಷ ಹಣ ಪಡೆದುಕೊಂಡಿದ್ದಾರೆ.  ಇದಲ್ಲದೆ  ಟಾಟಾ ಆಲ್ಟ್ರೋಜ್‌ ಕಾರು ಶೈನ್‌ಗೆ ದೊರಕಿದೆ. 

BB7:ಕಿರುತೆರೆ ನಟ ರಸ್ತೆಯಲ್ಲಿ ದೋಸೆ ಮಾರಿ ಜೀವನ ಮಾಡುತ್ತಿದ್ದಾರೆ!

ಬೆಳ್ಳಿ ತೆರೆ ಮೇಲೆ ಲಕ್ ಕಾಣದ ಕಾರಣ ಶೈನ್‌ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಫುಡ್‌ ಟ್ರಕ್‌ವೊಂದನ್ನು ನಡೆಸುತ್ತಿದ್ದರು. ಬಿಗ್‌ ಬಾಸ್‌ ಮನೆಗೆ ಶೈನ್‌ ಎಂಟ್ರಿ ಕೊಟ್ಟಾಗಿನಿಂದಲೂ ಶೈನ್‌ ತಾಯಿ ಅದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಿಗ್ ಬಾಸ್‌ ಗೆದ್ದರೆ ಅದರಲ್ಲಿ ಪಡೆಯುವ ಹಣದಿಂದ ದೊಡ್ಡ ಹೋಟಲ್‌ ತೆರೆಯಬೇಕು ಎಂಬುವುದು ಶೈನ್‌  ಕನಸಾಗಿತ್ತು. 

ಕಾಮಿಡಿ ಸ್ಟಾರ್ ಕುರಿ ಪ್ರತಾಪ್‌ ಎರಡನೇ ಸ್ಥಾನ ಪಡೆದುಕೊಂಡರೆ ವಾಸುಕಿ ವೈಭವ್‌ ಮೂರನೇ ಸ್ಥಾನ ಪಡೆದುಕೊಂಡಿರು.

ಫೆಬ್ರವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ