'ಕಿನ್ನರಿ' ಧಾರಾವಾಹಿ ಮೂಲಕ ಕಿರುತೆರೆ ಮನೋರಂಜನೆ ಕ್ಷೇತ್ರದಕ್ಕೆ ಕಾಲಿಟ್ಟ ಎಂಜಿನಿಯರಿಂಗ್ ಹುಡುಗಿ, ಕುಂದಾಪುರದ ಮೀನು ಭೂಮಿ ಶೆಟ್ಟಿ. ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಹೆಚ್ಚಿನ ಜನಪ್ರಿಯತೆ ಪಡೆದ ಈ ಚೆಲುವೆ 'ಮಜಾ ಭಾರತ' ರಿಯಾಲಿಟಿ ಶೋ ಮೂಲಕ ನಿರೂಪಕಿಯಾಗಿ ಗುರುತಿಸಿಕೊಂಡರು. ಆದರೀಗ ಅದರಿಂದಲ್ಲೂ ಹೊರ ಬಂದಿರುವುದನ್ನು ಕೇಳಿ ಕೇಳಿ ನೆಟ್ಟಿಗರು ಗೊಂದಲದಲ್ಲಿದ್ದಾರೆ.

ನಾನು ಏನನ್ನೂ ಪ್ಲ್ಯಾನ್ ಮಾಡುವುದಿಲ್ಲ: ಭೂಮಿ ಶೆಟ್ಟಿ 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಭಾರತ ಕಾಮಿಡಿ ಶೋನಿಂದ ಭೂಮಿ ಅಧಿಕೃತವಾಗಿ ಹೊರ ಬಂದಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 'ಇಂದು ನನ್ನ ಮಜಾ ಭಾರತ ಶೋನ ಕಡೆಯ ಶೋ. ನಾನು ಈ ಶೋ ನಿರೂಪಣೆ ನಿಲ್ಲಿಸುತ್ತಿದ್ದೇನೆ. ಅಧಿಕೃತ ಕಡೆ ಎಪಿಸೋಡ್ ಚಿತ್ರೀಕರಣ. ನೀವೆಲ್ಲರೂ ನನ್ನ ನಿರೂಪಣೆಯನ್ನು ಎಂಜಾಯ್ ಮಾಡಿದ್ದೀರಾ ಎಂದು ಭಾವಿಸಿರುವೆ.  ನಾನೀಗೊಂದು ನಿಲುವು ತೆಗೆದುಕೊಂಡಿರುವೆ. ನೀವೆಲ್ಲರೂ ಇಷ್ಟು ದಿನಗಳ ಕಾಲ ಪ್ರೋತ್ಸಾಹ ನೀಡಿರುವುದಕ್ಕೆ ಧನ್ಯವಾದಗಳು. ರಚಿತಾ ರಾಮ್ ಹಾಗೂ ಗುರು ಕಿರಣ್ ಸರ್ ನೀವಿಬ್ಬರೂ ರತ್ನಗಳು. ಹರೀಶ್ ರಾಜ್‌ ನನ್ನಗೆ ಒಳ್ಳೆಯ ಪಾರ್ಟ್‌ನರ್‌ ಆಗಿದ್ದರು' ಎಂದು ಭೂಮಿ ಸ್ಟೋರಿ ಹಾಕಿದ್ದಾರೆ.

ಹೊರ ಬರಲು ಕಾರಣ?
ಭೂಮಿ ಶೆಟ್ಟಿ ಶೋನಿಂದ ಹೊರ ಬರುತ್ತಿರುವ ವಿಚಾರ ಮಾತ್ರ ಬಹಿರಂಗ ಮಾಡಿದ್ದಾರೆ. ಆದರೆ ಯಾವ ಕಾರಣಕ್ಕೆ ಎಂದು ಕ್ಲಾರಿಟಿ ನೀಡಿಲ್ಲ. ಕೆಲವು ಮೂಲಗಳ ಪ್ರಕಾರ ಭೂಮಿಗೆ ತೆಲುಗು ಧಾರಾವಾಹಿಯೊಂದರಲ್ಲಿ ಪ್ರಮುಖ ಪಾತ್ರಧಾರಿಯಾಗಿ ಅವಕಾಶ ಪಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಹೊರ ನಡೆದಿದ್ದಾರೆ ಎನ್ನಲಾಗಿದೆ.

ತಂದೆಯಾದ ಸಂಭ್ರಮದಲ್ಲಿ ಮಜಾಭಾರತ ಹರೀಶ್; ಮನೆಗೆ ಬಂದಿದ್ದಾಳೆ ಪುಟಾಣಿ!