ಸ್ಯಾಂಡಲ್‌ವುಡ್‌ ಟ್ಯಾಲೆಂಟೆಡ್‌ ನಟ, ನಿರೂಪಕ ಹಾಗೂ ಬಿಗ್ ಬಾಸ್ ಸ್ಪರ್ಧಿ ಹರೀಶ್‌ ರಾಜ್‌ ದಂಪತಿ ಕುಟುಂಬಕ್ಕೆ ಎರಡನೇ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. 

ಗುಡ್‌ ನ್ಯೂಸ್ ಕೊಟ್ಟ ಬಿಗ್ ಬಾಸ್ ಹರೀಶ್ ರಾಜ್ ದಂಪತಿ! 

ಪ್ರೆಗ್ನೆಂಸಿ ಫೋಟೋ ಶೋಟ್‌ ಮೂಲಕ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ ಹರೀಶ್ ರಾಜ್‌ ಡಿಸೆಂಬರ್ 17ರಂದು ಬೆಳಗ್ಗಿನ ಜಾವ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. 'Love of Daughters can never be matched' ಎಂದು ಬರೆಯುವ ಮೂಲಕ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. 

ಗುಡ್‌ ನ್ಯೂಸ್ ಕೊಟ್ಟ ಬಿಗ್ ಬಾಸ್ ಹರೀಶ್ ರಾಜ್ ದಂಪತಿ! 

ಹರೀಶ್ ಹಾಗೂ ಶ್ರುತಿಯ ಮೊದಲು ಮಗು ಹೆಣ್ಣಾಗಿದ್ದು, ಎರಡನೇ ಮಗುವೂ ಹೆಣ್ಣಾಗಿದೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಮಜಾಭಾರತ ಕಾಮಿಡಿ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಲೇ ಹರೀಶ್ ರಾಜ್‌ ಸ್ಟಾರ್ ಸುವರ್ಣ ವಾಹಿನಿಯಲ್ಲಿ  'ಯಡಿಯೂರು ಸಿದ್ದಲಿಂಗೇಶ್ವರ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Harish Raj (@harishrajactor)