ಭಾಗ್ಯಲಕ್ಷ್ಮೀ ಸೀರಿಯಲ್ ನ ತಾಂಡವ್ ಗೆ ರಿಯಲ್‌ನಲ್ಲಿ ಲೇಡೀಸ್ ಫ್ಯಾನ್ಸ್ ಜಾಸ್ತಿ ಯಾಕೆ ಗೊತ್ತಾ?
ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಮತ್ತು ತಾಂಡವ್ ನಡುವಿನ ಕಥೆಯು ಸಮಾಜದಲ್ಲಿ ಗೌರವವನ್ನು ಗಳಿಸುವ ಮಹಿಳೆಯ ಹೋರಾಟವನ್ನು ಎತ್ತಿ ತೋರಿಸುತ್ತದೆ. ಆದರೆ, ಸೀರಿಯಲ್‌ನಲ್ಲಿ ಕಾಣುವುದಕ್ಕಿಂತ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಭಿನ್ನವಾಗಿದ್ದು, ಅವರ ನಿಜ ಜೀವನದ ವ್ಯಕ್ತಿತ್ವವು ಅನೇಕ ಮಹಿಳಾ ಅಭಿಮಾನಿಗಳನ್ನು ಸೆಳೆದಿದೆ.
ಕಲರ್ಸ್ ಕನ್ನಡದಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್ ಅಂದರೆ ಹಲವರಿಗೆ ಇಷ್ಟ. ಇದಕ್ಕೆ ಕಾರಣ ಸಾಕಷ್ಟಿದೆ. ಈ ಸೀರಿಯಲ್‌ನಲ್ಲಿ ಭಾಗ್ಯ ನಾಯಕಿ, ತಾಂಡವ್ ಅವಳ ಗಂಡ. ಸದ್ಯಕ್ಕೆ ಅವನೇ ಖಳನಾಯಕನ ಥರ ಆಕ್ಟ್ ಮಾಡ್ತಾ ಇದ್ದಾನೆ. ಇದರ ನಡುವೆ ಅವನಿಗೆ ಶ್ರೇಷ್ಠಾ ಅನ್ನೋ ಕೊಲೀಗ್ ಜೊತೆ ರಿಲೇಶನ್‌ಶಿಪ್ ಇದೆ. ಅದುವೇ ಸದ್ಯದ ಇಶ್ಯೂ. ಈ ಕಾರಣವೂ ಸೇರಿ ಭಾಗ್ಯ, ತಾಂಡವ್ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ಭಾಗ್ಯಳಿಗೆ ತಾಂಡವ್ ಅಪ್ಪ, ಅಮ್ಮನ ಫುಲ್ ಸಪೋರ್ಟ್ ಇದೆ. ಹಾಗೆ ನೋಡಿದರೆ ಅವರಿಗೆ ಮಗನಿಗಿಂತ ಸೊಸೆಯೇ ಹೆಚ್ಚು ಹತ್ತಿರ. ಅದಕ್ಕೆ ಸರಿಯಾಗಿ ಸೊಸೆಯೂ ಅತ್ತೆ ಮಾವನ ಪರವಾಗಿಯೇ ಇರುತ್ತಾಳೆ. ಅವರ ಬೆಂಬಲದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾಳೆ. ಅಷ್ಟೇ ಅಲ್ಲ, ತನ್ನ ಅಡುಗೆಯ ಸ್ಕಿಲ್ ಬಳಸಿಕೊಂಡು ಫೈವ್ ಸ್ಟಾರ್ ಹೊಟೇಲಿನಲ್ಲಿ ಪ್ರಖ್ಯಾತ ಶೆಫ್ ಆಗಿದ್ದಾಳೆ. ಇಷ್ಟು ಮಾತ್ರವಲ್ಲದೇ, ತಾನು ಇಂಗ್ಲೀಷ್ ಕಲಿಯುವ ಉದ್ದೇಶದಿಂದ ಮಕ್ಕಳಿಂದಲೇ ಪಾಠ ಹೇಳಿಸಿಕೊಳ್ಳುತ್ತಿದ್ದಾಳೆ. ಇದನ್ನು ನೋಡುವಾಗ ಕೆಲವೊಮ್ಮೆ ಶ್ರೀದೇವಿ ನಟನೆಯ 'ಇಂಗ್ಲೀಷ್ ವಿಂಗ್ಲೀಷ್' ಸಿನಿಮಾ ನೆನಪಾಗುತ್ತೆ.
ಈ ಸಿನಿಮಾದಲ್ಲಿ ಆದಂತೆ ಏನೂ ಅರಿಯದ ಲೋಕಜ್ಞಾನವಿಲ್ಲದ ಮನೆ, ಮಕ್ಕಳೇ ತನ್ನ ಜಗತ್ತು ಎಂದುಕೊಂಡ ಭಾಗ್ಯ ಅದು ಹೇಗೆ ತನ್ನೆಲ್ಲ ಸಮಸ್ಯೆಗಳನ್ನು ಮೀರಿ ನಿಂತು ಸಮಾಜದಲ್ಲಿ ಗೌರವಯುತ ಸ್ಥಾನ ಗಿಟ್ಟಿಸಿಕೊಳ್ಳುತ್ತಾಳೆ ಅನ್ನೋದೆ ಸೀರಿಯಲ್ ಕಥೆ. ಆದರೆ ಈ ಸೀರಿಯಲ್ ನೋಡೋರೆಲ್ಲ ಭಾಗ್ಯನ ಪಾತ್ರವನ್ನು ಅಳುಬುರುಕಿ ಅಂತ ಬೈಯ್ಯುತ್ತಾ ತಾಂಡವ್‌ನ ವಿಲನ್ ಥರ ನೋಡಿ ಸದಾ ಬೈಯುತ್ತಾ ಇರುತ್ತಾರೆ. ಆದರೆ ರೀಲ್‌ನಲ್ಲೇನೋ ರಿಯಲ್‌ನಲ್ಲಿ ಅದರ ಉಲ್ಟಾ ಅನ್ನೋದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ವ್ಯಕ್ತವಾಗುತ್ತದೆ.
ಕೆಲವು ಕಲಾವಿದರೇ ಹಾಗೇ ತಮ್ಮ ರಿಯಲ್ ಕ್ಯಾರೆಕ್ಟರ್‌ಗೆ ತದ್ವಿರುದ್ಧವಾದ ಪಾತ್ರವನ್ನೇ ತೆರೆಮೇಲೆ ಮಾಡುತ್ತಾರೆ. ತೆರೆ ಮೇಲಿನ ತಾಂಡವ್‌ಗೂ ತೆರೆ ಹಿಂದಿನ ಸುದರ್ಶನ್ ರಂಗಪ್ರಸಾದ್‌ಗೂ ಎಷ್ಟೆಲ್ಲಾ ವ್ಯತ್ಯಾಸವಿದೆ ಗೊತ್ತಾ? ರಿಯಲ್ ತಾಂಡವ್‌ಗೆ ಮಹಿಳೆಯರೇ ಫ್ಯಾನ್ಸ್ ಆಗೋಗಿದ್ದಾರೆ. ಸೀರಿಯಲ್ ಕಲಾವಿದರು ಕ್ಯಾಮೆರಾ ಆಫ್ ಆದಾಗ ಹೇಗೆಲ್ಲಾ ಇರ್ತಾರೆ ಅನ್ನೋದನ್ನ ಎಷ್ಟೋ ರೀಲ್‌ಗಳು, ವೀಡಿಯೋಗಳು ರಿವೀಲ್ ಮಾಡ್ತಾನೇ ಇರುತ್ತವೆ. ಜೊತೆಗೆ ಈಗ ಸೋಷಿಯಲ್ ಮೀಡಿಯಾ ಸ್ಟ್ರಾಂಗ್ ಇರೋದ್ರಿಂದ, ಶೂಟಿಂಗ್ ಸ್ಪಾಟ್‌ನಲ್ಲಿ ಗ್ಯಾಪ್ ಸಿಕ್ಕಿದ್ರೆ ಸಾಕು ವಿಲನ್ಸ್-ಹೀರೋಯಿನ್ ಸೇರಿ ರೀಲ್ಸ್ ಮಾಡೋದೂ ಸಖತ್ ವೈರಲ್ ಆಗ್ತಿದೆ. ಅದೇ ಥರ ತಾಂಡವ್ ಹಾಗೂ ಭಾಗ್ಯ ನಡುವೆ ಒಂದೊಳ್ಳೆ ಫ್ರೆಂಡ್‌ಶಿಪ್ ಇದೆ ಅನ್ನೋದಕ್ಕೆ ಭಾಗ್ಯಾ ಅರ್ಥಾತ್ ಸುಷ್ಮಾ ರಾವ್ ಹಂಚಿಕೊಂಡಿರುವ ವಿಡಿಯೋ ಸಾಕ್ಷಿ.
ಯೆಸ್. ಭಾಗ್ಯಾ ಪಾತ್ರಧಾರಿ ಸುಷ್ಮಾ ರಾವ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಇಬ್ಬರು ಕಿತ್ತಾಡುತ್ತಿದ್ದಾರೆ. 'ನಾನೇ ಗ್ರೇಟು, ನಾನ್ಯಾವತ್ತಾದ್ರೂ ಜಗಳ ಆಡಿದ್ದೀನಾ' ಎಂದು ಇಬ್ಬರೂ ಜಗಳ ಆಡುತ್ತಿದ್ದಾರೆ. ಈ ನಡುವೆ ತಾಂಡವ್ ನನ್ನದು ಮಗುವಿನಂತ ಮನಸ್ಸು ಎಂದಿದ್ದಾರೆ. ಆಗ ಭಾಗ್ಯಾ ಹೌದು ಮಗುವಿನಂತ ಮನಸ್ಸು ನಾಯಿ ಬುದ್ದಿ ಎಂದಿದ್ದಾರೆ. ಇದನ್ನು ಒಪ್ಪದ ತಾಂಡವ್ ಯಾವುದಾದರೂ ಒಂದೊಳ್ಳೆ ಪ್ರಾಣಿ ಹೋಲಿಕೆ ಮಾಡಿ ಎಂದಿದ್ದಾರೆ. ಆಗ ಒಂದಷ್ಟು ಕಾಮಿಡಿ ನಡೆದಿದ್ದು, ಹುಲಿ, ಚಿರತೆ ಜೊತೆ ತಮ್ಮನ್ನು ಹೋಲಿಕೆ ಮಾಡಿ ಈ ಆರ್ಟಿಸ್ಟ್ ಮನಸಾರೆ ನಕ್ಕಿದ್ದಾರೆ.
lakshmi baramma : ಲಕ್ಷ್ಮಿ ದೇಹದಲ್ಲಿ ಕೀರ್ತಿ ಆತ್ಮ..? ಲಕ್ಷ್ಮಿ ಬಾರಮ್ಮ ಸೀರಿಯಲ್ ಗೆ ಹೊಸ ಟ್ವಿಸ್ಟ್
ಈ ವೀಡಿಯೋದಲ್ಲಿ ಕಾಮಿಡಿ ಮಾಡ್ತಾ ಎಲ್ಲ ಜೊತೆ ಸ್ನೇಹದಿಂದಿರೋ ತಾಂಡವ್ ಈ ಸೀರಿಯಲ್ ನೋಡೋ ಲೇಡೀಸ್ ಫ್ಯಾನ್ಸ್ ಗೆ ಸಖತ್ ಇಷ್ಟವಾಗಿದೆ. ಅವರು ತಾಂಡವ್‌ನ ರಿಯಲ್ ರೂಪ, ಸ್ವಭಾವಕ್ಕೆ ಮಾರುಹೋಗಿದ್ದಾರೆ. ಇದನ್ನು ಅವರ ಹೆಂಡತಿ ಸಂಗೀತ ನೋಡಿದರೆ ಏನ್ ಕಥೆ ಅಂತ ಕೆಲವರು ಕಾಲೆಳೆದರೂ ಅದಕ್ಕೂ ತಮಗೂ ಸಂಬಂಧ ಇಲ್ಲ ಅನ್ನೋ ಥರ ರಿಯಲ್ ತಾಂಡವ್‌ಗೆ ಲೇಡೀಸ್ ಫ್ಯಾನ್ಸ್ ಅಭಿಮಾನ ಮುಂದುವರಿದಿದೆ.