Asianet Suvarna News Asianet Suvarna News

ಶೀಘ್ರ ಮದ್ವೆಗೆ ಶ್ರೇಷ್ಠಾ ಪಟ್ಟು! ಡಿವೋರ್ಸ್​ ಕೊಡ್ದೇ ನಿನ್ನ ಕಟ್ಟಿಕೊಳ್ಳಲು ಅವ್ನೇನು ರಾಜಕಾರಣಿನಾ ಎನ್ನೋದಾ ನೆಟ್ಟಿಗರು?

ಭಾಗ್ಯ ಮಾಡಿರೋ ಅವಮಾನಕ್ಕೆ ಕುದಿಯುತ್ತಿರೋ ಶ್ರೇಷ್ಠಾ ಕೂಡಲೇ ಮದ್ವೆಗೆ ರೆಡಿಯಾಗಿದ್ದಾಳೆ. ನಾಳೆನೇ ಮದ್ವೆ ಎಂದು ತಾಂಡವ್​ಗೆ ಹೇಳಿದ್ದಾಳೆ. ಇದನ್ನು ನೋಡಿ ನೆಟ್ಟಿಗರು ಏನೆಲ್ಲಾ ಹೇಳ್ತಿದ್ದಾರೆ ಕೇಳಿ! 
 

Nagavalli Shreshta become wants to marry immediately with Tandav in Bhagyalakshmi suc
Author
First Published Aug 25, 2024, 11:53 AM IST | Last Updated Aug 25, 2024, 11:53 AM IST

ಶ್ರೇಷ್ಠಾ ಅಕ್ಷರಶಃ ನಾಗವಲ್ಲಿಯಾಗಿದ್ದಾಳೆ. ಏನಾದರೂ ಮಾಡಿ ಭಾಗ್ಯಳಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. ಭಾಗ್ಯಳಿಗೆ ಈಕೆ ಮದ್ವೆಯಾಗ್ತಿರೋದು ತನ್ನ ಗಂಡನೇ ಎನ್ನೋ ವಿಷ್ಯನೇ ಗೊತ್ತಿಲ್ಲ, ಆದರೂ ಇಬ್ಬರು ಮಕ್ಕಳ ಅಪ್ಪನ ಜೊತೆ  ಮದ್ವೆಯಾಗ್ತಿದ್ದಾಳೆ ಅನ್ನೋದು ಮಾತ್ರ ಗೊತ್ತಿದೆ. ಅಷ್ಟೇ ಅಲ್ಲದೇ ಯಾರೋ ಒಬ್ಬಳಿಗೆ ದುಡ್ಡು ಕೊಟ್ಟು ತನ್ನ ವಿರುದ್ಧ ವಿಡಿಯೋ ಹರಿಬಿಟ್ಟ ಶ್ರೇಷ್ಠಾಳಿಗೆ ಬುದ್ಧಿ ಕಲಿಸಿದ್ದಾಳೆ ಭಾಗ್ಯ. ಅಷ್ಟಕ್ಕೂ ಸ್ಟಾರ್​ ಹೊಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡು ಅಳುಮುಂಜಿಯಿಂದ ಸ್ವಾವಲಂಬಿಯಾಗಿದ್ದಾಳೆ ಭಾಗ್ಯ.  ಇದರ ಹೊರತಾಗಿಯೂ ಶ್ರೇಷ್ಠಾಳ ಕುತಂತ್ರದಿಂದ ಮತ್ತೆ ಭಾಗ್ಯ ನೋವು ಪಡುವಂತಾಗಿತ್ತು.  ಭಾಗ್ಯಳ ವಿರುದ್ಧ ಇಲ್ಲಸಲ್ಲದ ವಿಡಿಯೋಗಳನ್ನು ದುಡ್ಡು ಕೊಟ್ಟು ವೈರಲ್​  ಮಾಡಿಸಿದ್ದಳು ಶ್ರೇಷ್ಠಾ.  ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು, ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡು ಒಂದರ್ಥದಲ್ಲಿ ಸೆಲೆಬ್ರಿಟಿಯಾಗಿದ್ದ ಭಾಗ್ಯಳ ಮಾನವನ್ನು ಹರಾಜು ಮಾಡುವಲ್ಲಿ ಅವಳು ಯಶಸ್ವಿಯಾಗಿದ್ದಾಳೆ. ನೌಕರಿ ಸಿಕ್ಕ ಕೂಡಲೇ ಡಿವೋರ್ಸ್​ ಕೊಡಲು ಮುಂದಾಗಿದ್ದಾಳೆ ಎಂದೆಲ್ಲಾ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಇನ್ನು ತಾಂಡವ್​ ಕೇಳಬೇಕೆ? ಹಿಗ್ಗಾಮುಗ್ಗ ಭಾಗ್ಯಳಿಗೆ ಬೈದಿದ್ದ.
 
ನಂತರ  ಭಾಗ್ಯಳಿಗೆ  ತನ್ನ ವಿರುದ್ಧ ವಿಡಿಯೋ ಹರಿಬಿಡುವಂತೆ  ಮಾಡಿದ್ದು ಶ್ರೇಷ್ಠಾಳೇ ಎನ್ನುವ ಸತ್ಯ ಭಾಗ್ಯಳಿಗೆ ತಿಳಿಯಿತು. ಭಾಗ್ಯ ಇನ್ನು ತನ್ನ ತಂಟೆಗೆ ಬರುವುದಿಲ್ಲ ಎಂದು ಮದುವೆಗೆ ರೆಡಿ ಮಾಡಿಕೊಂಡಿದ್ದಳು ಶ್ರೇಷ್ಠಾ. ಮದುಮಗಳಂತೆ ಸಿಂಗರಿಸಿಕೊಂಡು ಕೂತಿದ್ದಳು.  ಮದುವೆಗೂ ಮನ್ನ ನಡೆಯುವ ಸಂಪ್ರದಾಯಕ್ಕೆ ಶ್ರೇಷ್ಠಾಳ ಅಪ್ಪ-ಅಮ್ಮನೂ ಬಂದಿದ್ದರು.  ಆದರೆ ಇದರ ನಡುವೆಯೇ ಭಾಗ್ಯ ಅಲ್ಲಿಗೆ ಬಂದು ತಾನೇ ಕನ್ಯಾಶುದ್ಧಿ ಮಾಡುತ್ತೇನೆ ಎಂದಿದ್ದಳು. ಕೊನೆಗೆ ರೆಡಿಯಾಗಿ ಕುಳಿತಿದ್ದ ಶ್ರೇಷ್ಠಾಳಿಗೆ ಬಿಂದಿಗೆಯಿಂದ ನೀರು ಹೊಯ್ದಿದ್ದಳು. ಇದಾದ ಬಳಿಕವೂ ಎಲ್ಲಾ ಶಾಸ್ತ್ರವನ್ನೂ ನಾನೇ  ಮಾಡುತ್ತೇನೆ ಎಂದು ಶ್ರೇಷ್ಠಾಳನ್ನು ಸಿಂಗರಿಸಿದ್ದಳು. ಕೊನೆಗೆ ಅಪ್ಪ-ಅಮ್ಮನ ಎದುರೇ ಎಲ್ಲ ಸತ್ಯ ಹೇಳಿ ಶ್ರೇಷ್ಠಾಳ ಮರ್ಯಾದೆ ತೆಗೆದಳು.

55 ಲಕ್ಷದ ಕಾರಿಗೆ ತಮಾಷೆಗೆಂದು ಹೀಗೆ ಕಲ್ಲು ಹೊಡೆಯೋದಾ ದಿವ್ಯಾ ಉರುಡುಗ: ಮುಂದೇನಾಯ್ತು ನೋಡಿ

ತನ್ನ ಮಗಳ ಇಂಥ ಕೆಟ್ಟ ವರ್ತನೆ ನೋಡಿ ಅಪ್ಪ-ಅಮ್ಮನೂ ಮಗಳಿಗೆ ಬೈದರು. ಆದರೆ ಶ್ರೇಷ್ಠಾಳಿಗೆ ಅವಮರ್ಯಾದೆಯಾಗಿ ಅಪ್ಪ-ಅಮ್ಮನನ್ನೇ ಬೈದು ಕಳಿಸಿದಳು. ಇಷ್ಟೆಲ್ಲಾ ಆದ ಮೇಲೆ ತನ್ನ ಮದುವೆ ನಡೆದೇ ನಡೆಯುತ್ತದೆ. ಭಾಗ್ಯ ಅದನ್ನು ಹೇಗೆ ತಡೆಯುತ್ತಾಳೆ ಎಂದು ಚಾಲೆಂಜ್​  ಮಾಡಿದ್ದಾಳೆ. ಸ್ಥಳಕ್ಕೆ ಕುಸುಮಾನೂ ಬಂದಿದ್ದಳು. ಆದರೆ ಬುದ್ಧಿವಂತೆ ಕುಸುಮಾಗೂ ಈಕೆ ಮದ್ವೆಯಾಗ್ತಿರೋದು ತನ್ನ ಮಗನನ್ನೇ ಅನ್ನೋ ಸತ್ಯ ಗೊತ್ತೇ ಇಲ್ಲ. ಭಾಗ್ಯಳಿಗೂ ತಿಳಿದಿಲ್ಲ ಎನ್ನುವುದು ವಿಪರ್ಯಾಸ. ಎಲ್ಲಾ ಗೊತ್ತಿರೋ ಪೂಜಾ ಕೂಡ ಇನ್ನೂ ಯಾಕೆ ಸೈಲೆಂಟ್​ ಆಗಿದ್ದಾಳೆ ಎನ್ನೋದು ಇನ್ನೊಂದು ವಿಚಿತ್ರ. ಒಟ್ಟಿನಲ್ಲಿ ಸೀರಿಯಲ್​ ಮುಂದೆ ಹೋಗಬೇಕು ಅಷ್ಟೇ.

ಇದೀಗ ಶ್ರೇಷ್ಠಾ ನಾಗವಲ್ಲಿಯಾಗಿದ್ದಾಳೆ. ಸ್ಥಳಕ್ಕೆ ಆಗಮಿಸಿರೋ ತಾಂಡವ್​ಗೆ ನಾಳೆನೇ ನಮ್ಮ ಮದ್ವೆ ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್​ಗೆ ಶಾಕ್​ ಆಗಿದೆ. ಇದೆಂಥ ಹುಚ್ಚಾಟ ಎಂದಿದ್ದಾನೆ. ಇಷ್ಟೆಲ್ಲಾ ಗಲಾಟೆಯಾದ ಮೇಲೆ ಮದುವೆ ಬಗ್ಗೆ ಹೇಳ್ತಿಯಲ್ಲಾ ಎಂದು ಬೈದಿದ್ದಾನೆ.  ಆದರೆ ಮೈಮೇಲೆ ದೆವ್ವ ಬಂದವರಂತೆ ಆಗಿರೋ  ಶ್ರೇಷ್ಠಾಳಿಗೆ ಇದ್ಯಾವುದೂ ಬೇಡ. ಒಟ್ಟಿನಲ್ಲಿ ಎಲ್ಲರಿಗೂ ಬುದ್ಧಿ ಕಲಿಸಬೇಕು, ತಾಂಡವ್​ನನ್ನು ಮದ್ವೆಯಾಗಬೇಕು ಅಷ್ಟೇ. ಮುಂದೇನಾಗುತ್ತೋ ನೋಡಬೇಕಿದೆ. ಆದರೆ ನೆಟ್ಟಿಗರಂತೂ ತಮಾಷೆಯ ಕಮೆಂಟ್​ ಹಾಕ್ತಿದ್ದಾರೆ. ಡಿವೋರ್ಸ್ ಕೊಡದೇ  ಮದ್ವೆಯಾಗಲು ಅವನು ರಾಜಕಾರಣಿ ಅಲ್ಲ ಎನ್ನುತ್ತಿದ್ದಾರೆ. ರಾಜಕಾರಣಿಗಳಾದ್ರೆ ಪೊಲೀಸ್ರು ಸುಮ್ನೆ ಇರ್ಬೋದು. ಮೊದಲ ಪತ್ನಿ ಕೇಸ್​ ಕೊಡ್ದೇ ಹೋಗ್ಬೋದು, ಆದ್ರೆ ಭಾಗ್ಯ ಹಾಗಲ್ಲ, ಕೇಸ್​  ಹಾಕಿದ್ರೆ ನಿಮ್ಮಿಬ್ಬರ ಕಥೆ ಅಷ್ಟೇ ಅಂದಿದ್ದಾರೆ. 

'ಕರಿಮಣಿ'ಯಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ- ಮುಂದಿನ ಮಾಲೀಕ ಯಾರಮ್ಮಾ ಕೇಳ್ತಿದ್ದಾರೆ ನೆಟ್ಟಿಗರು!

 

Latest Videos
Follow Us:
Download App:
  • android
  • ios