ಹಳದಿ ಸೀರೆ ತೊಟ್ಟು ನಿರ್ಮಲಾ ವಿಚಿತ್ರವಾಗಿ ವರ್ತಿಸುತ್ತಿರುವ ಕಾರಣ ಇನ್ನಿತರೆ ಸ್ಪರ್ಧಿಗಳು ಭಯಭೀತರಾಗಿದ್ದಾರೆ. ಯಾಕ್ಹಿಂಗೆ? 

ಬಿಗ್‌ ಬಾಸ್‌ ಸೀಸನ್‌ 8ರ ಎರಡನೇ ವಾರವೂ ಬ್ರೋ ಗೌಡ ಮತ್ತೊಮ್ಮೆ ಕ್ಯಾಪ್ಟನ್ ಆಗಿರುವುದಕ್ಕೆ ಹಲವರಿಗೆ ಅಸಮಾಧಾನವಿದೆ. ಮನಸ್ತಾಪಗಳ ನಡುವೆಯೇ ದಿನ ಸಾಗಿಸುತ್ತಿರುವ ಸ್ಪರ್ಧಿಗಳಿಗೆ ನಿರ್ಮಲಾ ಚೆನ್ನಪ್ಪ ವರ್ತನೆ ನೋಡಿ ಭಯಭೀತರಾಗಿದ್ದಾರೆ.

Add Asianetnews Kannada as a Preferred SourcegooglePreferred

ನಿರ್ಮಲಾ ಗೋಮುಖವ್ಯಾಘ್ರಿ, ಅಧಿಕ ಪ್ರಸಂಗಿ ಎಂದ ಸಂಬರಗಿ; ಕಾಫಿ ಬೇಡ ಸೂಟ್‌ಕೇಸ್‌ ಓಕೆ! 

ಹೌದು! ಪ್ರಶಾಂತ್ ಸಂಬರಗಿ ಕಾಫಿ ಪುಡಿ ಬದಲು ನಿರ್ಮಲಾ ಚೆನ್ನಪ್ಪ ಅವರ ಸೂಟ್‌ಕೇಸ್‌ ಆಯ್ಕೆ ಮಾಡಿಕೊಂಡು ತಂದು ಕೊಟ್ಟರು. ಅದೇ ದಿನ ರಾತ್ರಿ ಎಲ್ಲರೂ ಮಲಗಿಕೊಂಡ ನಂತರ ನಿರ್ಮಲಾ ಮೇಕಪ್‌ ರೂಮ್‌ನಲ್ಲಿ ಅಲಂಕಾರ ಮಾಡಿಕೊಳ್ಳುತ್ತಿರುತ್ತಾರೆ, ಯಾಕೆ ಈಗ ರೆಡಿಯಾಗುತ್ತಿದ್ದೀರಾ ಎಂದು ಸ್ಪರ್ಧಿಗಳು ಪ್ರಶ್ನೆ ಮಾಡಿದಾಗ, ನಿರ್ಮಲಾ ಉತ್ತರ ನೀಡಲಿಲ್ಲ. ಆದರೆ ಕೆಲ ಸಮಯದ ನಂತರ ಹಳದಿ ಸೀರೆ ಧರಿಸಿ ಮನೆಯಲ್ಲಾ ಓಡಾಡಲು ಆರಂಭಿಸುತ್ತಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಇತರೆ ಸ್ಪರ್ಧಿಗಳು ನಿಜಕ್ಕೂ ಇವರಿಗೆ ಏನೋ ಆಗಿದೆ ಎಂದು ಭಯಭೀತರಾಗಿದ್ದಾರೆ. 

ಕ್ಯಾಪ್ಟನ್‌ ಬ್ರೋ ಗೌಡ 'ಬಿಗ್ ಬಾಸ್‌ ಮನೆಯಲ್ಲಿ ಏನು ನಡೆಯುತ್ತಿದೆ ಅಂತಾನೇ ಗೊತ್ತಾಗುತ್ತಿಲ್ಲ. ಟೆನ್ಷನ್ ಆಗುತ್ತಿದೆ. ತೆಲೆ ಕೆಡುತ್ತಿದೆ. ಸಡನ್ ಆಗಿ ರಾತ್ರಿ ಸೀರೆ ಎಲ್ಲಾ ಉಡ್ಕೊಂಡು ಬಂದ್ರು,' ಎಂದು ಕ್ಯಾಮೆರಾ ಎದುರು ವಿಚಿತ್ರ ವರ್ತನೆಯ ಬಗ್ಗೆ ವಿವರಿಸುತ್ತಾರೆ. ನಿರ್ಮಲಾ ಸ್ಟೋರ್ ರೂಮ್‌ ಒಳಗೆ ಹೋಗಿ ಹಾಡು ಹೇಳುತ್ತಾ, ವಿಚಿತ್ರ ಸದ್ದುಗಳನ್ನು ಮಾಡುತ್ತಿರುತ್ತಾರೆ. ನಿರ್ಮಲಾ ಧ್ವನಿ ಹಾಗೂ ನೋಡುವ ನೋಟಕ್ಕೆ ಗಾಬರಿಗೊಂಡ ವೈಷ್ಣವಿ 'ರಾ ರಾ ಲುಕ್ಸ್‌ ಎಲ್ಲಾ ಬರ್ತಿದೆ,' ಎನ್ನುತ್ತಾರೆ. 'ನಿರ್ಮಲಾ 24 ಗಂಟೆ ಮಾತನಾಡುತ್ತಿರುತ್ತಾರೆ. ಏನೋ ಆಗಿದೆ,' ಎಂದು ರಘು ಗೌಡ ಫುಲ್‌ ಗೊಂದಲದಲ್ಲಿ, ಚಿಂತಿಸುತ್ತಾರೆ. ಆದರೆ ಚಂದ್ರಕಲಾ 'ಇದು ಆಡಿಯನ್ಸ್‌ ಗಮನವನ್ನು ತನ್ನ ಕಡೆ ಸೆಳೆಯಬೇಕು ಎಂಬ ಕಾರಣ ನಿರ್ಮಲಾ ಹೇಗೆ ಮಾಡುತ್ತಿದ್ದಾಳೆ,' ಎಂದು ಹೇಳುತ್ತಾ ಇನ್ನಿತರರನ್ನು ಸಮಾಧಾನ ಪಡಿಸುತ್ತಾರೆ. 

ಟಿಕ್‌ಟಾಕ್‌ ಧನುಶ್ರೀ ಸ್ನಾನಕ್ಕೂ ಮೇಕಪ್ ಮಾಡ್ಕೊಂಡೇ ಹೋಗೋದಾ? 

ಇಂದು ರಾತ್ರಿ 9.30ಕ್ಕೆ ಪ್ರಸಾರವಾಗಲಿರುವ ಎಪಿಸೋಡ್‌ನಲ್ಲಿ ಏನು ಇದರ ಹಿಂದಿರುವ ಮರ್ಮ ಎಂದು ತಿಳಿದುಕೊಳ್ಳಬೇಕಿದೆ. ಈ ವಾರ ಮನೆಯಿಂದ ಹೊರ ಹೋಗಲು ನಿರ್ಮಲಾ ನೇರವಾಗಿ ನಾಮಿನೇಟ್ ಆಗಿರುವ ಕಾರಣ ಈ ರೀತಿಯ ಗೇಮ್ ಪ್ಲಾನ್ ಮಾಡಿದ್ದಾರಾ? ಅಥವಾ ಬಿಗ್ ಬಾಸ್‌ ಏನಾದರೂ ಟಾಸ್ಕ್ ಕೊಟ್ಟಿದ್ದಾರಾ ಗೊತ್ತಿಲ್ಲ.......

View post on Instagram