ಬಿಗ್‌ ಬಾಸ್‌ ಸೀಸನ್‌ 8ರ 17ನೇ ಸ್ಪರ್ಧಿ ನಿರ್ಮಲಾ ಚೆನ್ನಪ್ಪ ಯಾರು ಅಂತ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಗೊತ್ತು ಯಾಕಂದ್ರೆ ಅಕೆ ಆನ್‌ಸ್ಕ್ರೀನ್‌ಗಿಂತ ಆಫ್‌ ಸ್ಕ್ರೀನ್‌ನಲ್ಲಿ ಕೆಲಸ ಮಾಡುವ ಧೀರೆ.  ನಿರ್ಮಲಾ ಪ್ರೊಡಕ್ಷನ್ಸ್‌ ಅಡಿಯಲ್ಲಿ ಹಲವಾರು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ನಿರ್ಮಿಸಿದ್ದಾರೆ. ವ್ಯಕ್ತಿ ಬಗ್ಗೆ ಅರ್ಥ ಮಾಡಿಕೊಳ್ಳಲು ಕೊಂಚ ಗೊಂದಲವಾದರೂ ಆಕೆಯಲ್ಲಿ ಕಲ್ಮಶವಿಲ್ಲ ಎಂದು ಎದೆ ಮುಟ್ಟಿ ಹೇಳಬಹುದು ಎನ್ನುತ್ತಾರೆ ಪತಿ ಸತ್ಯ.

ರಾತ್ರೋರಾತ್ರಿ ಹಳದಿ ಸೀರೆ ತೊಟ್ಟು ಮನೆಯಲ್ಲಾ ಓಡಾಡುತ್ತಿರುವ ನಿರ್ಮಲಾ; ಯಾರಾದ್ರೂ ಸಹಾಯ ಮಾಡಿ! 

ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ನಿರ್ಮಲಾ ಸತ್ಯರನ್ನು ಪ್ರೀತಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿರುವ ನಿರ್ಮಲಾ ಮೊದಲ ವಾರವೇ ಮನೆಯಿಂದ ಹೊರ ಬರಲು ನೇರವಾಗಿ ನಾಮಿನೇಟ್ ಆಗಿದ್ದಾರೆ. ಶಿಕ್ಷೆ ಕೇಳಿ ಬೇಸರವಾದರೂ ಆಕೆಯ ಗುಣ ಮೆಚ್ಚಿಕೊಂಡರು ಮನೆ ಮಂದಿ.

ಕಳೆದು ಎರಡು ದಿನಗಳಿಂದ ನಿರ್ಮಲಾ ಬದಲಾಗಿದ್ದಾರೆ, ರಾತ್ರಿ ಅಲಂಕಾರ ಮಾಡಿಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ಭಯಭೀತರಾದ ಸ್ಪರ್ಧಿಗಳು ಕ್ಯಾಮೆರಾ ಎದುರು ಆತಂಕ ವ್ಯಕ್ತ ಪಡಿಸಿದ್ದರು. ಅಲ್ಲದೆ ಲೈಕ್‌ ಡಿಸ್‌ಲೈಕ್‌ನಲ್ಲೂ ನಿರ್ಮಲಾ ಅತಿ ಹೆಚ್ಚು ಡಿಸ್‌ಲೈಕ್ ಪಡೆದುಕೊಂಡರು. ಯಾಕ್ಹಂಗೆ ಎಂದು ನಿರ್ಮಲಾ ಬಗ್ಗೆ ಪತಿ ಸತ್ಯರನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದವರಿಗೆ ಲೈವ್ ಚಾಟ್ ಮೂಲಕ ಉತ್ತರ ನೀಡಿದ್ದಾರೆ.

ನಗುವ ನಿರ್ಮಲಾ, ಬಿಗ್ ಬಾಸ್ ನಿರ್ಮಲಾ ಇವರ ಕತೆ ಅಂತಿಂಥದ್ದಲ್ಲ! 

'ಬಿಗ್‌ಬಾಸ್‌ ಅಂದ್ರೆ ಒಂದಿಷ್ಟು ನಿಯಮಗಳು ಇರುತ್ತದೆ ನೂರು ದಿನ ಇರಬೇಕು ಅಲ್ಲಿರುವುದು ದೊಡ್ಡ ವಿಷಯ. ಅದಕ್ಕೆ ತಕ್ಕಂತೆ ಮನರಂಜಿಸುತ್ತಾ ಹೋಗಬೇಕು.  ನಾವು ಇಲ್ಲಿ ಕೂತು ಮಾತನಾಡಬಾರದು, ನೋಡಿ ಸಂತೋಷ ಪಡಬೇಕು ಮುಂದೆ ಏನು ಅಗುತ್ತೆ ಎಂದು ತಾಳ್ಮೆಯಿಂದ ಕಾದು ನೋಡಬೇಕಿದೆ.  ಎಲ್ಲರು ಅಲ್ಲಿ ಸೇರಿರುವುದು ಊಟ ಮಾಡಿ ಮಲಗುವುದಕ್ಕೆ ಅಲ್ಲ ಪ್ರತಿಯೊಬ್ಬರು ಅವರವರ ಆಟಗಳನ್ನು ಶುರು ಮಾಡಿದ್ದಾರೆ.  ನಾನು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ನಿರ್ಮಲಾ ಗಟ್ಟಿಯಾಗಿದ್ದಾರೆ.  ವೇದಿಕೆ ಮೇಲೆ ಆಕ್ಟ್ ಮಾಡೋಕು ಬರುತ್ತೆ ವೇದಿಕೆ ಹಿಂದೆ ಕೆಲಸ ಮಾಡೋಕೆ ಬರುತ್ತೆ. ಆವಳಿಗೆ ಕಣ್ಣೀರು ಹಾಕೋಕು ಬರುತ್ತೆ, ಗನ್ ಹಿಡಿಯೋಕೆ ಬರುತ್ತೆ'ಎಂದು ಪತಿ ಸತ್ಯ ಮಾತನಾಡಿದ್ದಾರೆ.