ನೋಡೋದಕ್ಕೆ ಅಂಥಾ ಸುಂದ್ರಿ ಏನಲ್ಲ, ಆದರೆ ಮುಖಕ್ಕೊಂದು ಕಳೆ ಇದೆ. ಬಿಗ್ ಬಾಸ್ ಮನೆಯ ಉಳಿದ ಹುಡುಗೀರೆಲ್ಲ ಸ್ಮಾರ್ಟ್ ಆಂಡ್ ಬ್ಯೂಟಿ ಅಂತ ಈಕೆಗೆ ಈಕೆಯದೇ ಯುನಿಕ್ ಅನಿಸೋ ಸ್ಟೈಲ್. ಈಗೀಗ ಅಂತೂ ಈಕೆ ಒಬ್ಬೊಬ್ಬರೇ ಮಾತಾಡ್ತಾರೆ, ಪ್ರತೀ ಸಲ ಇನ್ನೊಬ್ಬರ ಗಮನ ಸೆಳೆಯೋ ತರ ಈಕೆಯ ವರ್ತನೆ ಇರುತ್ತೆ ಅಂತೆ. 

ನಿರ್ಮಲ್ ಚೆನ್ನಪ್ಪ ಬಿಗ್ ಬಾಸ್ ಸೀಸನ್ 8ರ ಒಬ್ಬ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಈಕೆಯ ನಡತೆ, ವರ್ತನೆ ಬಿಗ್‌ಬಾಸ್ ನ ಪ್ರತೀ ಸ್ಪರ್ಧಿಗೂ ಪ್ರಶ್ನಾರ್ಥಕವಾಗಿದೆ. ಜೊತೆಗೆ ಕನ್‌ಫ್ಯೂಶನ್ಸ್ ಹುಟ್ಟಿಸೋ ಹಾಗಿದೆ. ಅದರಲ್ಲೂ ಮಧ್ಯರಾತ್ರಿ ಸೀರೆಯುಟ್ಟು ಮೇಕಪ್ ಮಾಡ್ಕೊಂಡಿದ್ದು, ಒಬ್ಬಳೇ ಮಾತಾಡೋದು ದುಃಸ್ವಪ್ನದಂತೆ ಕಾಡುತ್ತಿದೆ.

ಕ್ರಿಕಟರ್ ಜೊತೆ ಅನುಪಮಾ ವಿವಾಹ..? ಶ್ರೀಮತಿಯಾಗ್ತಿದ್ದಾರೆ ನಟಸಾರ್ವಭಮದ ನಟಿ ...

ಕೆಲವರೆಲ್ಲ ಈಕೆಗೇನೋ ಮಾನಸಿಕ ಸಮಸ್ಯೆ ಇದೆ ಅನ್ನೋ ಥರ ಮಾತಾಡುತ್ತಿದ್ದಾರೆ. ಕಳೆದ ರಾತ್ರಿಯಂತೂ ಈಕೆ ಒಬ್ಬೊಬ್ರೇ ದೇವ್ರ ಜೊತೆಗೂ ಮಾತಾಡ್ತಾ ಇದ್ರು. ಅವರ ಮಾತು ಕೇಳಿದ್ರೆ ಮನಸ್ಸಲ್ಲಿ ನಡೆಯೋ ಯೋಚನೆಗಳನ್ನೇ ಬಾಯಲ್ಲಿ ಆಡಿದ ಹಾಗಿತ್ತು. ವೀಕ್ಷಕರೂ, ಇವ್ಳಿಗೇನೋ ಮೆಂಟಲ್ ಪ್ರಾಬ್ಲೆಂ ಇದ್ಯಾ ಗುರು ಅಂತ ಕೇಳೋ ಹಾಗಾಗಿದೆ. ಇನ್ನೂ ಕೆಲವರು ಈಕೆಗೆ ತನ್ನ ಬಗ್ಗೆ ಗಿಲ್ಟ್ ಇದೆ ಅದನ್ನು ಮೀರುವುದಕ್ಕೋಸ್ಕರ ಹೀಗೆಲ್ಲ ಹೇಳ್ತಿದ್ದಾರೆ ಅಂತ ಗೆಸ್ ಮಾಡ್ತಿದ್ದಾರೆ. 

ಆದರೆ ನಿರ್ಮಲಾ ಚೆನ್ನಪ್ಪ ನಾವೆಲ್ಲ ಅಂದ್ಕೊಂಡ ಹಾಗಲ್ವೇ ಅಲ್ಲ. ಈಕೆಯ ಹಿನ್ನೆಲೆ ಗೊತ್ತಿರೋ ಯಾರಿಗಾದ್ರೂ ನಿರ್ಮಲಾ ಅವರ ಈ ವರ್ತನೆ ಅವರ ಜಾಣತನದಿಂದ ಕೂಡಿದ್ದು ಅನ್ನೋದು ಗೊತ್ತಾಗೇ ಗೊತ್ತಾಗಿತ್ತೆ. 

ರಿಯಲ್ ಲೈಫ್‌ ವಿಚಾರಕ್ಕೆ ಬಂದರೆ ನಿರ್ಮಲಾ ಚೆನ್ನಪ್ಪ ಅಲಿಯಾಸ್ ನಿರ್ಮಲಾ ಸತ್ಯ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಇವರ ರಂಗಭೂಮಿ ಗೆಳೆಯರು ಇವತ್ತಿಗೂ ಇವರ ಅದ್ಭುತ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಅಭಿನಯದ ಬಗ್ಗೆ ಯಾವ ಪರಿ ಆಸಕ್ತಿ ಅಂದರೆ ರಾತ್ರಿ ಹನ್ನೊಂದು ಗಂಟೆಗೆ ಪ್ರಾಕ್ಟೀಸ್ ಮುಗಿಸಿ ರಂಗ ಗೆಳೆಯರ ಜೊತೆಗೆ ಮನೆ ಸೇರ್ತಿದ್ರು. ನಿಜವಾದ ಥಿಯೇಟರ್ ಲವರ್ಸ್ ಹೆಚ್ಚೆಚ್ಚು ಮಾನವೀಯರಾಗಿರುತ್ತಾರೆ, ಅವರಲ್ಲಿ ಜೀವನ ಪ್ರೀತಿ ಇತರರನ್ನು ಆತ್ಮೀಯವಾಗಿ ಕಾಣುವ ಭಾವ ತುಸು ಹೆಚ್ಚೇ. ಇದಕ್ಕೀಗ ನಿರ್ಮಲಾ ಸಾಕ್ಷಿಯಾಗ್ತಿದ್ದಾರೆ ಅನ್ನೋ ಮಾತು ಅವರ ಆಪ್ತರದು. 

ದರ್ಶನ್ ಕೊಟ್ಟಷ್ಟು ಗೌರವ ಟಾಲಿವುಡ್‌ನಲ್ಲೂ ಸಿಕ್ಕಿಲ್ಲ ಎಂದ ತೆಲುಗು ನಟ ...

ಈಕೆ ಓದಿನಲ್ಲೂ ಚುರುಕು. ಪಾದರಸದಂಥಾ ಹುಡುಗಿ ಅಂತ ಎಲ್ಲ ಕಡೆ ಕರೆಸಿಕೊಂಡವರು. ತಲ್ಲಣ ಅನ್ನುವ ಸಿನಿಮಾದಲ್ಲಿ ಈಕೆಯ ಅಭಿನಯ ನೋಡಿದವರೆಲ್ಲ ಈ ಮಹಾನ್‌ ಪ್ರತಿಭೆಯನ್ನು ಕಂಡು ಬೆರಗಾಗಿದ್ದಾರೆ. ಇದಕ್ಕಾಗಿ ರಾಜ್ಯ ಪ್ರಶಸ್ತಿಯೂ ಬಂದಿದೆ.

ಇನ್ನು ಫ್ಯಾಮಿಲಿ ಮ್ಯಾಟರ್‌ಗೆ ಬಂದರೆ ನಿರ್ಮಲಾಗೆ ಒಬ್ಬ ಮಗನಿದ್ದಾನೆ. ಪತಿ ಸತ್ಯ ಕೂಡ ನಟನೆಯ ಮೂಲಕ ಗಮನಸೆಳೆದವರು. ಸತ್ಯ ಅಂದ್ರೆ ಹೆಚ್ಚಿನವರಿಗೆ ಯಾರು ಅಂತ ಗೊತ್ತಾಗಲಿಕ್ಕಿಲ್ಲ. ಆದರೆ ಸರ್ದಾರ್ ಸತ್ಯ ಅಂದಕೂಡಲೇ ಓ ಅವ್ರಾ ಅಂತ ಉದ್ಗಾರ ಬರುತ್ತೆ. ಆ ದಿನಗಳು ಸಿನಿಮಾ ನೋಡಿದವರಿಗೆಲ್ಲ ಇವರ ಮುಖ ನೆನಪಾಗುತ್ತೆ. ಅಫ್ ಕೋರ್ಸ್ ಆ ದಿನಗಳು ಸಿನಿಮಾದ ನಂತರ ಇವರ ಹೆಸರಿನ ಜೊತೆಗೆ ಸರ್ದಾರ್ ಸೇರಿಕೊಂಡಿದೆ. ಮುಂದೆ ಸ್ಲಂ ಬಾಲ, ಗುಂಡರಗೋವಿ, ಸ್ಲಂ ಬಾಲ, ರಾಜಧಾನಿ, ಶಾರ್ಪ್ ಶೂಟರ್ ಇತ್ಯಾದಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ಈ ದಂಪತಿಗಳ ಕನಸಿನ ಕೂಸು. 

BBK8: ಮೊದಲ ವಾರದ ಬೆಸ್ಟ್‌ ಹಾಗೂ ವರ್ಸ್ಟ್‌ ಸ್ಪರ್ಧಿ, ಜೈಲಲ್ಲಿ ಗಂಜಿನೇ! ...

ಇದೀಗ ನಿರ್ಮಲಾ ಪತಿ ಸತ್ಯ ಸೋಷಿಯಲ್ ಮೀಡಿಯಾದಲ್ಲಿ ತನ್ನ ಪತ್ನಿಗೋಸ್ಕರ ಗಿಟಾರ್ ನುಡಿಸಿ ಶುಭ ಕೋರಿದ್ದಾರೆ. 'ಅವಳು ಏನೇ ಕೆಲಸ ಅಂದ್ರೂ ಉಡಾಫೆ ಮಾಡಲ್ಲ. ಬಹಳ ಶ್ರದ್ಧೆ ಅವಳ ಶಕ್ತಿ. ಹಾಡುಕೋಗಿಲೆಯಂಥಾ ರಿಯಾಲಿಟಿ ಶೋ ಪ್ರೊಡ್ಯೂಸ್ ಮಾಡಿರುವ ಈಕೆಗೆ ಸಂಗೀತದ ಮೇಲೆ ಪ್ರೀತಿ. ಅದಕ್ಕೋಸ್ಕರ ಈಕೆಗೆ ನಮ್ಮಿಬ್ಬರ ಇಷ್ಟದ ಒಂದು ಹಾಡು ಡೆಡಿಕೇಟ್ ಮಾಡುತ್ತೇನೆ' ಅಂದಿರುವ ಸತ್ಯಾ, 'ನಗುವ ನಯನಾ..' ಟ್ಯೂನ್‌ನಲ್ಲೇ 'ನಗುವ ನಿರ್ಮಲಾ ಮಧುರ ನಿರ್ಮಲಾ ಮಿಡಿವ ಹೃದಯ ಇದೆ ಮಾತೇಕೆ, ಹೊಸ ಆಟವಿದು, ರಸದಾಟವಿದು, ಇದ ಆಡಲು ಕಲಿಬೇಕು, ಬಿಗ್ ಬಾಸ್ ..' ಅಂದಿದ್ದಾರೆ. 

ಪತಿಯ ಹಾರೈಕೆ, ಜನರ ಕುತೂಹಲ, ಸ್ಪರ್ಧಿಗಳ ಕನ್‌ಫ್ಯೂಶನ್ಸ್ ನಿರ್ಮಲಾ ಅವರನ್ನ ಎಲ್ಲಿಗೆ ಕರೆದೊಯ್ಯುತ್ತೆ ಅನ್ನೋದು ಬಿಗ್‌ ಬಾಸ್ ಗೆ ಮಾತ್ರ ಗೊತ್ತಿರುವ ಸತ್ಯವೇನೋ..