ಬಿಗ್‌ಬಾಸ್‌ ಸೀಸನ್‌ 8ರಲ್ಲಿರುವ ಎಲ್ಲಾ ಮಹಿಳಾ ಸ್ಪರ್ಧಿಗಳು, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ತಾವು ಬಂದಿರುವ ಉದ್ದೇಶ ಮರೆತು ಇನ್ನಿತರೆ ಸ್ಪರ್ಧಿಗಳು, ಅದರಲ್ಲೂ ಪುರುಷರಿಗೆ ಎಲ್ಲವನ್ನೂ ಬಿಟ್ಟು ಕೊಡುತ್ತಿರುವ ಸ್ವಭಾವದ ಬಗ್ಗೆ ಚರ್ಚೆ ಶುರುವಾಗಿದೆ. ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳನ್ನು ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ತಯಾರಿ ಮಾಡುತ್ತಿದ್ದಾರೆ. 

ಕಳಪೆ ಹಣೆಪಟ್ಟಿ ಶಂಕರ್ ಅಶ್ವತ್ಥ್‌ಗೆ, ಗೋಲ್ಡ್‌ ಮೆಡಲ್ ವಿಶ್ವನಾಥ್‌ಗೆ; ಬೇಕಿತ್ತಾ ಇದೆಲ್ಲಾ? 

ಮನೆಯಲ್ಲಿ ತಮಗೆ ಸ್ಪರ್ಧಿ ಎನಿಸುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವಾಗ, ಶಂಕರ್ ನಿಧಿ ಸುಬ್ಬಯ್ಯ ಪೋಟೋ ತೆಗೆದು ಬುಲೆಟ್ ಪಿನ್‌ಗೆ ಹಾಕುತ್ತಾರೆ. 'ಎಲ್ಲರೂ ನನಗಿಂತ ಚಿಕ್ಕವರು, ಎನರ್ಜಿ ಜಾಸ್ತಿ ಇದ್ದವರು. ಆದರೂ ಟಾಸ್ಕ್‌ನಲ್ಲಿ ಮುಂದೆ ಹೋಗಬೇಕು ಎನ್ನುವುದು ನನ್ನ ಉದ್ದೇಶ. ರೇಸ್‌ನಲ್ಲಿ ಮೂರು ಹೆಜ್ಜೆ ಮುಂದೆ ಹೋಗಿರುವವರನ್ನು ನಾನು ಹಿಡಿದು ಹಾಕೋಲ್ಲ.  ನಾನು 14ನೇ ಸ್ಥಾನದಿಂದ 13ನೇ ಸ್ಥಾನದಲ್ಲಿ ಇರುವವರನ್ನು ಆಯ್ಕೆ ಮಾಡಬೇಕು, ಅದುವೇ ನಿಧಿ ಸುಬ್ಬಯ್ಯ. ಅವರು ನನಗಿಂತ ಸ್ಟ್ರಾಂಗ್ ಅನಿಸುತ್ತಾರೆ. ಇನ್ನು ಚಂದ್ರಕಲಾ ಮೋಹನ್‌ ಅವರು ನನಗೆ ಪ್ರತಿ ಸ್ಪರ್ಧಿಯಲ್ಲ,' ಎಂದು ಹೇಳಿದ ಅಶ್ವತ್ಥ್‌ ಚಂದ್ರಕಲಾ ಫೋಟೋವನ್ನು ಪಕ್ಕದಲ್ಲಿದ್ದ ಕಸ ಬುಟ್ಟಿಗೆ ಹಾಕುತ್ತಾರೆ. 

ಯಾರೆಲ್ಲಾ ಶಂಕರ್ ಹೆಸರನ್ನು ಪ್ರತಿ ಸ್ಪರ್ಧಿ ಅಲ್ಲ ಎಂದು ಆಯ್ಕೆ ಮಾಡಿದರೋ ಅವರ ಮೇಲೆ ಚೈಲ್ಡಿಶ್‌ ರಿವೆಂಜ್‌ ತೆಗೆದುಕೊಳ್ಳುತ್ತಾರೆ ಎಂದು ನಿಧಿ ಮಾತನಾಡಿದ್ದಾರೆ. 'ಶಂಕರ್ ಅವರು ನನ್ನ, ಚಂದ್ರಕಲಾ ಮೋಹನ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ನಮ್ಮಿಬ್ಬರಿಗೂ ಕಾರಣ ನೀಡಿದ್ದು ಒಂದೇ ರೀತಿ. ಅವರೊಂಥರ ಚೈಲ್ಡಿಶ್ ಆಗಿ ಆಡ್ತಿದ್ದಾರೆ, ಆಟವನ್ನು ವೈಯಕ್ತಿಕವಾಗಿ ತಗೆದುಕೊಳ್ಳುತ್ತಿದ್ದಾರೆ,' ಎಂದು ನಿಧಿ ಹೇಳಿದ್ದಾರೆ.

ದಿವ್ಯಾ , ಅರವಿಂದ್‌ ಬೆನ್ನ ಹಿಂದೆ ಮಾತನಾಡಿಕೊಂಡ ಸದಸ್ಯರು; ಶುಭಾ ಪೂಂಜಾ ನಂತರ ಊಟ ಫಿಕ್ಸ್‌? 

ಇನ್ನು ಮನೆಯಲ್ಲಿ ಚದುರಂಗ ಆಟವಾಡಲು ಎರಡು ಗುಂಪುಗಳನ್ನು ಮಾಡಲಾಗಿದೆ. ಶಂಕರ್ ಬಿಳಿ ತಂಡದ ರಾಜನಾದೆರೆ ನಿಧಿ ಸೈನಿಕೆ. ಎದುರಾಳಿ ತಂಡ ನೀಡಿದ ಟಾಸ್ಕ್‌ನಲ್ಲಿ ವಿಫಲವಾದ ನಿಧಿ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಆಟದಲ್ಲೂ ಅಶ್ವತ್ಥ್‌ ಏನೇ ಹೇಳಿದರೂ ನಿಧಿ ಕೇಳುತ್ತಿರಲಿಲ್ಲ, ಇನ್ನಿತರೆ ಸ್ಪರ್ಧಿಗಳಿಗೆ ಇವರ ಕೋಲ್ಡ್ ವಾರ್ ಇಷ್ಟವಾಗದಿದ್ದರೂ, ಸುಮ್ಮನಿದ್ದಾರೆ.