ಬಿಬಿ ಸೀಸನ್‌ 8ರ ಮೂರನೇ ವಾರಾಂತ್ಯದಲ್ಲಿ ನಾಲ್ಕನೇ ವಾರದ ಕ್ಯಾಪ್ಟನ್ ಆಯ್ಕೆ ಟಾಸ್ಕ್ ಆರಂಭವಾಗಿದೆ. ಜೋಡಿಗಳಾಗಿ ಮನೆ ಸ್ಪರ್ಧಿಗಳು ಭಾಗಿಯಾಗಬೇಕು ಹಾಗೂ ಕೊನೆಯಲ್ಲಿ ಗೆದ್ದ ಎರಡು ಜೋಡಿ ಮಾತ್ರ ಕ್ಯಾಪ್ಟನ್ ಟಾಸ್ಕ್‌ನಲ್ಲಿ ಭಾಗಿವಹಿಸಬೇಕು. ಅತಿ ಹೆಚ್ಚು ಶ್ರಮ ವಹಿಸಿ ಟಾಸ್ಕ್‌ ಮಾಡಿ ದಿವ್ಯಾ ಉರುಡುಗ - ಅರವಿಂದ್ ಹಾಗೂ ವಿಶ್ವನಾಥ್-ದಿವ್ಯಾ ಸುರೇಶ್ ಕ್ಯಾಪ್ಟನ್ ಟಾಸ್ಕ್‌ನಲ್ಲಿ ಸ್ಪರ್ಧಿಸಿದ್ದರು. ಸಿ ಅಕ್ಷರವನ್ನು ಮ್ಯಾಗ್ನೇಟ್‌ನಿಂದ ಹೆಚ್ಚಿನ ಹೊತ್ತು ಹಿಡಿಯುವ ಸ್ಪರ್ಧಿ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಅಗುತ್ತಾರೆ. ಅರವಿಂದ್ ಜಯಶಾಲಿಯಾಗಿ ನಾಲ್ಕನೇ ವಾರದ ಕ್ಯಾಪ್ಟನ್ ಆಗುತ್ತಾರೆ. 

ಪ್ರತಿ ವಾರವೂ ಉತ್ತಮ ಆಟಗಾರ ಹಾಗೂ ಕಳಪೆ ಸ್ಪರ್ಧಿಯನ್ನು ಮನೆ ಮಂದಿಯಲ್ಲಾ ಸೇರಿ ಆಯ್ಕೆ ಮಾಡುತ್ತಾರೆ. ದಿವ್ಯಾ ಸುರೇಶ್ ಹಾಗೂ ವಿಶ್ವನಾಥ್ ಚಲದಿಂದ ಸ್ಪರ್ಧಿಸಿದ್ದಾರೆ. ಈ ವಾರ ಮನೆಯಿಂದ ವಿಶ್ವನಾಥ್ ಹೊರ ಹೋಗಲು ನಾಮಿನೇಟ್ ಆಗಿದ್ದರೂ, ಟಫ್‌ ಫೈಟ್ ನೀಡಿದ ಕಾರಣ ಉತ್ತಮ ಆಟಗಾರನಾಗಿ ಗೋಲ್ಡ್ ಮೆಡಲ್ ಪಡೆದುಕೊಳ್ಳುತ್ತಾರೆ.

45 ವರ್ಷದಿಂದ ಸಿಗರೇಟ್‌ ಸೇದುತ್ತಿದ್ದೆ, 2 ವಾರದಿಂದ ಮುಟ್ಟಿಲ್ಲ: ಶಂಕರ್ ಅಶ್ವತ್ಥ್ 

ಇನ್ನು ಚಂದ್ರಕಲಾ-ಶಂಕರ್ ಅಶ್ವತ್ಥ್‌ ತಮ್ಮ ವಯಸ್ಸಿಗೂ ಮೀರಿದ  ಶ್ರಮವನ್ನು ವೀಕ್ಷಕರು ಪ್ರತಿಯೊಂದು ಟಾಸ್ಕ್‌ನಲ್ಲೂ ನೋಡಿದ್ದಾರೆ. ಆದರೆ ಎಲ್ಲೋ ಒಂದು ಕಡೆ ಕಳಪೆ ಪ್ರದರ್ಶನ ನೀಡಿದ ಕಾರಣ ಶಂಕರ್‌ನನ್ನು ಕಳಪೆ ಸ್ಪರ್ಧಿ ಎಂದು ಜೈಲಿಗೆ ಕಳುಹಿಸುತ್ತಾರೆ. ಕಳಪೆ ಸ್ಪರ್ಧಿ ಆಯ್ಕೆ ಮುನ್ನವೇ 'ನನ್ನ ಹೆಸರು ಹೇಳಿದರೆ ನನಗೆ ಬೇಸರವಿಲ್ಲ, ನಾನು ಒಪ್ಪಿಕೊಳ್ಳುತ್ತೇನೆ. ಇದು ಗೇಮ್,' ಎಂದು ಹೇಳಿಬಿಟ್ಟರು. ಇದೇ ಕಾರಣ ಹಿಡಿದುಕೊಂಡು ಜೈಲಿಗೆ ಕಳುಹಿಸಿದರೇ? ಶಂಕರ್ ಗೇಮ್ ಆಡುವ ಬದಲು ತಮ್ಮ ಹಳ್ಳ ತಾವೇ ತೋಡಿಕೊಂಡರು, ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ