'ಅಭಿಮಾನಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಿಧಿ ಸುಬ್ಬಯ್ಯ, ವೃತ್ತಿ ಜೀವನದಲ್ಲಿ ಬ್ರೇಕ್ ತಂದು ಕೊಟ್ಟಂತ ಸಿನಿಮಾ 'ಪಂಚರಂಗಿ'. ಫಿಲ್ಮ್ ಫೇರ್ ಬೆಸ್ಟ್ ನಟಿ ಪ್ರಶಸ್ತಿ ಪಡೆದ ನಿಧಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಚಿತ್ರರಂಗದ ಬೇಡಿಕೆಯ ನಟಿಯಾಗಿ ಮಿಂಚಿದ ನಿಧಿ ಸುಬ್ಬಯ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ದೂರ ಉಳಿದರು. ಆಮೇಲೆ ಆಗಿದ್ದೇನು?

ನಿಧಿ ಸುಬ್ಬಯ್ಯ ಮೈಸೂರು ನಿವಾಸಕ್ಕೆ ಪಟಾಕಿ ಎಸೆದಿದ್ದ ನಟ ಯಶ್; ಕರ್ಟನ್‌ ಯಾವಾಗ ಬರುತ್ತೆ? 
 

ಫೆಬ್ರವರಿ 11,2017ರಲ್ಲಿ ವಿರಾಜಪೇಟೆ ಖಾಸಗಿ ರೆಸಾರ್ಟ್‌ವೊಂದರಲ್ಲಿ ಗೆಳೆಯ ಲವೇಶ್‌  ಜೊತೆ ನಿಧಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮುಂಬೈ ಮೂಲದ ಲವೇಶ್‌ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದವರು. ಕೆಲವು ಮೂಲಗಳ ಮಾಹಿತಿ ಪ್ರಕಾರ ನಿಧಿ ಮದುವೆ ಆದ ನಂತರ ವಿದೇಶದಲ್ಲಿ ನೆಲೆಸಿದ್ದರು, ಎನ್ನಲಾಗಿದೆ. ಈ ಅವಧಿಯಲ್ಲಿ ನಿಧಿ ಸೋಷಿಯಲ್ ಮೀಡಿಯಾದಿಂದಲೂ ದೂರವಿದ್ದರು.

ಇದೀಗ ಬಿಗ್‌ ಬಾಸ್‌ ಸೀಸನ್‌ 8ರಲ್ಲಿ ನಿಧಿ ಸ್ಪರ್ಧಿಸುತ್ತಿದ್ದಾರೆ. ಮತ್ತೆ ಅವರ ವೈಯಕ್ತಿಕ ಜೀವನದ ಸುದ್ದಿಗಳು ಅಲ್ಲಿ, ಇಲ್ಲಿ ಹರಿದಾಡುತ್ತಿವೆ. ಒಳ್ಳೆ ಗೇಮ್ ಪ್ಲಾನ್ ಕೂಡ ಆಡುತ್ತಿದ್ದಾರೆ. ಟಾಸ್ಕ್‌ವೊಂದರಲ್ಲಿ ವೈಷ್ಣವಿ ತಮ್ಮ ಬಾಯ್‌ಫ್ರೆಂಡ್ ಬೇಕು, ಬೇಗ ಮದುವೆ ಆಗಬೇಕು ಎಂದು ಹೇಳಿಕೊಂಡಿದ್ದರು. ವೈಷ್ಣವಿ ಮುಖದಲ್ಲಿ ಮಂದಹಾಸ ಕಂಡು ನಿಧಿ ನಗು ನಗುತ್ತಲೇ 'ನನಗೂ ಲವರ್ ಬೇಕು,' ಎಂದು ಹೇಳಿದ್ದಾರೆ. ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು ನಿಧಿ ಮದುವೆ ಆಗಿದ್ದರೂ ಹೇಗೆ ಯಾಕೆ ಹೇಳಿದ್ದಾರೆ ಎಂದು ಚಿಂತಿಸಿದ್ದಾರೆ.

ಪ್ಯಾಂಟಿಲ್ಲದೆ ಪೋಸ್‌ ಕೊಟ್ಟ ನಿಧಿ ಸುಬ್ಬಯ್ಯ; 'ದೊಡ್ಡ ಚಡ್ಡಿ ಹಾಕೋಕೆ ಆಗಲ್ವಾ'? 

ನಿಧಿ ಬಿಬಿ ಮನೆಯಲ್ಲಿದ್ದರೂ ತಮ್ಮ ಆಪ್ತರ ಮೂಲಕ ಸೋಷಿಯಲ್ ಮೀಡಿಯಾ ಮೂಲಕ ವೋಟ್‌ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅದೇ ಖಾತೆಯನ್ನು ಸಂಪೂರ್ಣವಾಗಿ ನೋಡಿದವರು ನಿಧಿ ಪತಿ ಲವೇಶ್ ಜೊತೆಗಿರುವ ಪೋಟೋ ಎಲ್ಲಿಯೂ ಇಲ್ಲ. ಇಬ್ಬರೂ ಮದುವೆಯಾದ ಒಂದು ವರ್ಷದಲ್ಲಿ ವಿಚ್ಛೇದನ ಪಡೆದಿದ್ದಾರೆ ಎಂಬ ಮಾತುಗಳನ್ನುಆಡುತ್ತಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ ನಿಧಿ ಬಿಬಿ ಟ್ರೋಫಿ ಗೆದ್ದು ಬರಲಿ ಎಂದು ಆಶೀಸೋಣ.