Asianet Suvarna News Asianet Suvarna News

ಕಪ್ ಮುರಿದ ಮಂಜುಗೆ ಭಾರೀ ಶಿಕ್ಷೆ; ಪದೇ ಪದೆ 'RCB ಕಪ್‌ ನಮ್ದೇ' ಹೇಳಿದ್ದಕ್ಕೆ ಸಂಕಷ್ಟ?

ಬಿಬಿ ಮನೆಯಲ್ಲಿ ಯಾವುದೇ ವಸ್ತುವನ್ನು ಮುರಿದರೂ ಶಿಕ್ಷೆ ಕಠಿಣವಾಗಿರುತ್ತದೆ. ಗೊತ್ತಿಲ್ಲದೇ ಮಾಡಿದ ತಪ್ಪಿಗೂ ದಿನವಿಡೀ ಬೀಸಿ ನೀರು ಕುಡಿಯುವಂತೆ ಮಾಡಿದ ಶಿಕ್ಷೆ ಹೀಗಿತ್ತು...
 

Colors Kannada BBK8 Manju Pavagada punished with small cup for daily use vcs
Author
Bangalore, First Published Mar 23, 2021, 11:13 AM IST

ಪ್ರತಿಯೊಂದು ವಸ್ತುವಿನ ಮೌಲ್ಯವನ್ನು ಬಿಗ್‌ ಬಾಸ್‌ ಮನೆಯಲ್ಲಿ ಹೇಳಿ ಕೊಡಲಾಗುತ್ತದೆ. ಯಾವುದೇ ತಪ್ಪಾದರೂ ತಪ್ಪಿದಸ್ಥರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಅಂತೆಯೇ ಲ್ಯಾಗ್ ಮಂಜು ಅರಿವಿಲ್ಲದೆಯೇ ಮಾಡಿದ ತಪ್ಪಿಗೆ ಜೀವನ ಪೂರ್ತಿ ಮರೆಯಲಾಗದ ಶಿಕ್ಷೆ ಅನುಭವಿಸುವಂತಾಗಿದೆ.  ಬಜರ್‌ ಬಡಿದ ತಕ್ಷಣ ರಾಜೀವ್, ಪ್ರಶಾಂತ್ ಹಾಗೂ ಅರವಿಂದ್ ಸ್ಟೋರ್ ರೂಮ್‌ಗೆ ಹೋಗುತ್ತಾರೆ. ದೊಡ್ಡ ಟ್ರೇಯಲ್ಲಿದ್ದ ಸಣ್ಣ ಕಪ್ ನೋಡಿ ಶಾಕ್ ಆಗಿದ್ದಾರೆ.

ಚೆಸ್‌ನಲ್ಲಿ ಶಂಕರ್ ಅಶ್ವತ್ಥ್ ಕಿಂಗ್, ನಾಮಿನೇಟ್‌ ಆದ್ರೆ ಮಾತ್ರ ಚೈಲ್ಡಿಶ್‌ ರಿವೆಂಜ್‌ ತಗೋತಾರೆ? 

ಆರವಿಂದ್‌ ಈ ಕಪ್ ಏನಕ್ಕೆ ಎಂದು ಬಿಬಿ ಕೇಳಿದಾಗ, ಏನು ಹೇಳಬೇಕೆಂದು ಉತ್ತರ ತಿಳಿಯದ ಅರವಿಂದ್‌ ಕಂಗಾಲಾಗಿ ನಿಂತಿದ್ದರು. ಆ ನಂತರ  ಮಂಜು ಅವರನ್ನು ಪ್ರಶ್ನಿಸಿದಾಗ, 'ಈ ಸಲ ಕಪ್ ನಮ್ದೇ ಬಿಗ್ ಬಾಸ್. ಆರ್‌ಸಿಬಿ ಈ ಕಪ್ ಹೊಡೆಯಬಹುದು ಅಂತ ಮೊದಲು ಕೊಟ್ಟಿರಬಹುದು. ನಾನು ಆ ರೀತಿ ಅಂದು ಕೊಳ್ತೀನಿ ಅಥವಾ ಕ್ಯಾಪ್ಟನ್ ನನಗೆ ಕಾಫಿ ಕೊಡಲಿ ಅಂತ ಕೊಟ್ಟಿರಬಹುದು,' ಎಂದು ಕಾಮಿಡಿ ಮಾಡುತ್ತಾರೆ. 

Colors Kannada BBK8 Manju Pavagada punished with small cup for daily use vcs

'ಮನೆಯಲ್ಲಿ ಕಪ್ ಅನ್ನು ಒಡೆದು ಹಾಕಿರುವುದಕ್ಕೆ ಮುಂದಿನ ಆದೇಶದವರೆಗೂ ನೀವು ನೀಡಲಾಗಿರುವ ಕಪ್‌ನಲ್ಲಿ ಕಾಫಿ, ಟೀ ಹಾಗೂ ಬಿಸಿ ನೀರು ಕುಡಿಯಬೇಕು,' ಎಂಬುದಾಗಿ ಧ್ವನಿ ಕೇಳಿ ಬರುತ್ತದೆ. 'ಅಲ್ಲ ಬಿಗ್‌ ಬಾಸ್ ಈ ಸಲ ಕಪ್ ನಮ್ದೇ ಅಂದೆ, ನಮಗೆ ಕಪ್ ಕೊಟ್ಟು ಬಿಟ್ರಲಾ ಬಿಗ್‌ ಬಾಸ್. ಓಕೆ ಬಿಗ್ ಬಾಸ್,' ಎಂದು ಮಂಜು ಬಿಸಿ ನೀರು ತುಂಬಿಸಿಕೊಂಡು ಕುಡಿಯುತ್ತಾರೆ.

 

Follow Us:
Download App:
  • android
  • ios