Asianet Suvarna News

ಚಕ್ರವರ್ತಿ ಚಂದ್ರಚೂಡ್‌ ಬಾಯಲ್ಲಿ 'ಬೀಪ್ ಬೀಪ್' ಪದ; ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ!

ಒಂದೇ ದಿನದಲ್ಲಿ ಎರಡು ಘಟನೆಗಳಿಗಾಗಿ ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ. ನ್ಯಾಯ ಪರ ಧ್ವನಿ ಯಾರದ್ದು? 
 

Colors Kannada BBK8 Chakravarthy Chandrachud fights with Prashanth Sambargi vcs
Author
Bangalore, First Published Jul 9, 2021, 12:37 PM IST
  • Facebook
  • Twitter
  • Whatsapp

ಬಿಗ್ ಬಾಸ್ ಸೀಸನ್‌ 8 ಪ್ರವೇಶಿಸುವ ಮುನ್ನ ಪ್ರಶಾಂತ್ ಸಂಬರಗಿ ಒಬ್ಬ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದರೇ ಹೊರತು, ಜನರಿಗೆ ಯಾವ ರೀತಿಯ ಪರಿಚಯವೂ ಇರಲಿಲ್ಲ. ಆದರೆ ಚಕ್ರವರ್ತಿ ಚಂದ್ರಚೂಡ್ ಆಗಮಿಸಿದ ಬಳಿ ಪ್ರಶಾಂತ್ ನಡವಳಿಕೆ ಹಾಗೂ ಮಾತಿನ ಶೈಲಿ ಬದಲಾಗಿದೆ. ಒಂದು ಗಂಟೆ ಇಬ್ಬರೂ ಗೇಮ್ ಪ್ಲಾನ್ ಮಾಡುತ್ತಿದ್ದರೆ, ಮತ್ತೊಂದು ಗಂಟೆ ಮಾತಿನ ಚಕಮಕಿಯಲ್ಲಿ ತೊಡಗುತ್ತಾರೆ. 

ದಿವ್ಯಾ ಸುರೇಶ್ ಕಾಲೆಳೆದ ಸಂಬರಗಿಗೆ ಪಾಠ ಕಲಿಸಿದ ಕಿಚ್ಚ ಸುದೀಪ್! 

ಗಾರ್ಡನ್‌ ಏರಿಯಾದಲ್ಲಿ ಪ್ರಶಾಂತ್ ಮತ್ತು ಚಕ್ರವರ್ತಿ ಟಾಸ್ಕ್‌ ಮತ್ತು ರಘು ಗೌಡ ಆಟದ ಬಗ್ಗೆ ಚರ್ಚೆ ಮಾಡುತ್ತಾರೆ. 'ರಘುಗೆ ಟಾಸ್ಕ್‌ನಲ್ಲಿ ಅನ್ಯಾಯ ಆಗಿದೆ. ನೀನು ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡ್ತೀಯಾ ಅಲ್ವಾ, ಅವನಿಗೆ ನ್ಯಾಯ ಕೊಡಿಸು,' ಎಂದು ಪ್ರಾಶಾಂತ್ ಹೇಳುತ್ತಾರೆ. 'ನಿನ್ನ ಮಾತುಗಳು ಜನರಿಗೆ ಕಾಮಿಡಿ ರೀತಿ ಕಾಣಿಸುತ್ತಿದೆ. ನಿನ್ನ ವರ್ತನೆಯನ್ನು ಬದಲಾಯಿಸಿಕೋ,' ಎಂದು ಚಕ್ರವರ್ತಿ ಹೇಳುತ್ತಾರೆ. 

ಪ್ರಶಾಂತ್ ಹೇಳಿದ ಒಂದು ಮಾತಿನ ಬಗ್ಗೆ ಎಲ್ಲರ ಎದರು ವೈಷ್ಣವಿ ತಮಾಷೆ ಮಾಡಿದ್ದರು, ಎಂದು ಚಕ್ರವರ್ತಿ ಹೇಳುತ್ತಾರೆ. ಎರಡು ಮೂರು ಬಾರಿ ನಿಜಕ್ಕೂ ವೈಷ್ಣವಿ ಹೀಗೆ ಹೇಳಿದ್ದರೇ ಎಂದು ಪ್ರಶ್ನೆ ಮಾಡಿದ ಪ್ರಶಾಂತ್, ವೈಷ್ಣವಿ ಬಳಿ ಚಕ್ರವರ್ತಿ ಹೇಳಿದ ಮಾತುಗಳ ಬಗ್ಗೆ ಕ್ರಾಸ್ ಚೆಕ್ ಮಾಡಿಕೊಳ್ಳುತ್ತಾರೆ. ವಿಚಾರ ತಿಳಿದ ಚಕ್ರವರ್ತಿ ಕೆಂಡಾಮಂಡಲವಾಗುತ್ತಾರೆ. ಅತಿ ಹೆಚ್ಚು ಬೀಪ್ ಪದಗಳನ್ನು ಬಳಸಿ ಪ್ರಶಾಂತ್‌ ಬಗ್ಗೆ ಚಕ್ರವರ್ತಿ ಮಾತನಾಡುತ್ತಾರೆ. ಇದರಿಂದ ಬೇಸರಗೊಂಡ ಪ್ರಶಾಂತ್‌ ರೂಮಿಗೆ ಹೋಗಿ ವೈಷ್ಣವಿ ಬಳಿ ಈ ವಿಚಾರ ಚರ್ಚೆ ಮಾಡುತ್ತಾರೆ. 

ಈ ವಿಚಾರಕ್ಕೆ ಪ್ರಶಾಂತ್ ಸಂಬರಗಿ-ಚಕ್ರವರ್ತಿ ಚಂದ್ರಚೂಡ್‌ ನಡುವೆ ಬಿರುಕು? 

ಮನೆಯೊಳಗೆ ಈ ಗೇಮ್ ಶುರುವಾಗಿದ್ದರೆ, ಸೋಷಿಯಲ್ ಮೀಡಿಯಾದಲ್ಲಿ ಚಕ್ರವರ್ತಿ ಎರಡು ಎರಡು ರೀತಿ ಮಾತನಾಡುವುದು, ಬಣ್ಣ ಬದಲಾಯಿಸುವ ವ್ಯಕ್ತಿ ಎಂದು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.

Follow Us:
Download App:
  • android
  • ios