Asianet Suvarna News

ದಿವ್ಯಾ ಸುರೇಶ್ ಕಾಲೆಳೆದ ಸಂಬರಗಿಗೆ ಪಾಠ ಕಲಿಸಿದ ಕಿಚ್ಚ ಸುದೀಪ್!

'ಉದ್ದೇಶಪೂರ್ವಕವಾಗಿಯೇ ಮಾಡಿದ್ದರೆ ಅದು ತಪ್ಪಾಗುತ್ತದೆ, ಅದನ್ನು ಕೋಲ್ಡ್‌ ಬ್ಲಡೆಡ್‌ ಎಂದು ಹೇಳುತ್ತಾರೆ,' ಎಂದು ಕಿಚ್ಚ ಸುದೀಪ್. ಕೊನೆಗೂ ಸಾರಿ ಕೇಳಿದ ಪ್ರಶಾಂತ್ ಸಂಬರಗಿ.

Colors Kannada BBK8 Sudeep stop Prashanth Sambargi from teasing Divya Suresh vcs
Author
Bangalore, First Published Jul 5, 2021, 3:28 PM IST
  • Facebook
  • Twitter
  • Whatsapp

42 ದಿನಗಳ ಕಾಲ ಮನೆಯ ಹೊರಗಿದ್ದ 12 ಸ್ಪರ್ಧಿಗಳು ಪ್ರತಿ ಸ್ಪರ್ಧಿಯ ಗುಣಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಯಾರು ಯಾವ ಕ್ಷೇತ್ರದಲ್ಲಿ ಎಷ್ಟು ಸಾಧನೆ ಮಾಡಿದ್ದಾರೆ, ಎಷ್ಟು ಸೋಲು ಕಂಡಿದ್ದಾರೆ ಎಂದು ಸ್ಟಡಿ ಮಾಡಿಕೊಂಡಂತೆ ಕಾಣುತ್ತದೆ. ಅದರಲ್ಲೂ ಪ್ರಶಾಂತ್ ಸಂಬರಗಿ ಎಕ್ಸಪರ್ಟ್ ಆಗಿದ್ದಾರೆ ಎನ್ನಬಹುದು. 

ಮಂಜು ಪಾವಗಡ ಜೊತೆ ಮಾತು ಬಿಟ್ಟರೆ ದಿವ್ಯಾ ಸುರೇಶ್‌ಗೆ ವೋಟ್‌ ಹಾಕುವುದಿಲ್ಲ; ಬಿಚ್ಚಿಟ್ಟ ಸತ್ಯ! 

ದಿವ್ಯಾ ಸುರೇಶ್ ತೆಲುಗು ಸಿನಿಮಾ 'ಡಿಗ್ರಿ ಕಾಲೇಜ್'ನಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ದಿವ್ಯಾ ಕೊಂಚ ಬೋಲ್ಡ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಕಳೆದ ವಾರ ದಿವ್ಯಾ 'ನೀವು ಸೆಕ್ಯುರಿಟಿ' ಎಂದು ಪ್ರಶಾಂತ್‌ಗೆ ಹೇಳಿದ ಕಾರಣ, ರಿವೇಂಜ್‌ ತೆಗೆದುಕೊಳ್ಳಲು ಪ್ರಶಾಂತ್ ಒಂದು ಉಪಾಯ ಮಾಡುತ್ತಾರೆ. ಈ ಚಿತ್ರದ ಹೆಸರು ಬಳಸಿಕೊಂಡು ಕಾಲೆಳೆಯುತ್ತಾರೆ. ಇದರಿಂದ ದಿವ್ಯಾ ಮನಸ್ಸಿಗೆ ನೋವಾಗುತ್ತದೆ, ಕಣ್ಣೀರಿಡುತ್ತಲೇ ಆಟವನ್ನು ಅದ್ಭುತವಾಗಿ ಆಡುತ್ತಾರೆ. 

'ಪ್ರಶಾಂತ್ ನೀವು ದಿವ್ಯಾ ಅವರ ಒಂದು ಸಿನಿಮಾ ನೋಡಿದ್ದೀರಿ. ಚಿತ್ರದ ಹೆಸರನ್ನಿಟ್ಟುಕೊಂಡು ragging  ಕೂಡ ಮಾಡುತ್ತಲೇ ಇದ್ದೀರಿ.  ಒಂದು ದಿನಕ್ಕೆ ನಿಲ್ಲಿಸುವುದಿಲ್ಲ, ಚಕ್ರವರ್ತಿ ಅವರನ್ನು ಸೇರಿಸಿಕೊಂಡು ಆಡುತ್ತಿರಾ. ದಿವ್ಯಾ ತೀರ್ಮಾನ ತೆಗೆದುಕೊಂಡು ಮಾಡಿರುವ ಚಿತ್ರ ಅದು. ಹಾಗಾದರೆ ಅವರ ತೀರ್ಮಾನ ಅಷ್ಟೊಂದು ಕೆಟ್ಟದಾಗಿ ಇದೆಯೇ? ನಾನು ಸಿನಿಮಾಗಳನ್ನು ಮಾಡಿದ್ದೀನಿ. ಕೆಲವು ಚೆನ್ನಾಗಿ ಇರುತ್ತೆ ಕೆಲವು ಚೆನ್ನಾಗಿರಲಿಲ್ಲ. ಆದರೆ ಇದರಿಂದ ಎರಡು ವಿಚಾರ ಸಿಕ್ಕಿದೆ; ಸಕ್ಸಸ್ ಅಥವಾ ಪಾಠ. ನೀವು ಮಾತನಾಡುವ ಮುಂಚೆ ಸಾಕಷ್ಟು ಅಂಶಗಳನ್ನು ತಲೆಯಲ್ಲಿ ಇಟ್ಟುಕೊಂಡು ಮಾತನಾಡಬೇಕು.  ಪ್ರಶಾಂತ್ ನೀವು ನೋವು ಮಾಡಬೇಕು ಎಂಬ ಉದ್ದೇಶದಿಂದಲೇ ಇಂಥ ಮಾತುಗಳನ್ನು ಆಡಿದ್ದರೆ, ಅದು ತುಂಬಾ ತಪ್ಪಾಗುತ್ತದೆ ಹಾಗೂ ಅದನ್ನು ಕೋಲ್ಡ್‌ ಬ್ಲಡೆಡ್‌ ಎಂದು ಹೇಳುತ್ತಾರೆ. ನೀವು ಫ್ಯಾಕ್ಟ್ ಚೆಕ್ ಮಾಡಿದಾಗ ನೀವು ಆಡಿದ ಮಾತುಗಳ ಬಗ್ಗೆ ಗೊತ್ತಾಗುತ್ತದೆ. ನಿಮಗೆ ಗೊತ್ತಿದ್ದು ಮುಖದಲ್ಲಿಯೇ ಹೊಡೆದಂತೆ ಸುಳ್ಳು ಹೇಳುತ್ತೀರಿ. ಎಲ್ಲೋ ಒಂದು ಕಡೆ ಶ್ರುತಿ ತಪ್ಪಿದಾಗ, ಅದನ್ನು ಸರಿಪಡುಸುವುದು ನನ್ನ ಜವಾಬ್ದಾರಿ' ಎಂದು ಸುದೀಪ್ ಪಾಠ ಹೇಳಿದ್ದಾರೆ.

Follow Us:
Download App:
  • android
  • ios