Asianet Suvarna News Asianet Suvarna News

ಚಕ್ರವರ್ತಿ ಚಂದ್ರಚೂಡ್ ಅಂತರ್ ರಾಜ್ಯ ಹಾಕಿ ಆಟಗಾರ; 3 ವಿಚಾರಗಳಲ್ಲಿ 1 ಸುಳ್ಳು?

ಚಕ್ರವರ್ತಿ ಹೇಳಿದ ಮೂರು ವಿಚಾರಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ನಂಬಲಾಗದ ಪರಿಸ್ಥಿತಿಯಲ್ಲಿ ಎದುರಾಳಿ ಸ್ಪರ್ಧಿಗಳು.

Colors Kannada BBK8 Chakravarthy Chandrachud calls himself a hockey player vcs
Author
Bangalore, First Published Jul 14, 2021, 1:13 PM IST

ಡೈರೆಕ್ಟ್ ನಾಮಿನೇಷನ್‌ನಿಂದ ಎಸ್ಕೇಪ್ ಆಗಲು ಇಡೀ ವಾರ ವಿಭಿನ್ನವಾದ ಟಾಸ್ಕ್ ನೀಡಲಾಗಿದೆ. ನಿನ್ನೆ ನೀಡಲಾಗಿದ್ದ ಟಾಸ್ಕ್‌ನಲ್ಲಿ ಪ್ರತಿಯೊಬ್ಬ ಸದಸ್ಯನೂ 3 ವಿಚಾರಗಳನ್ನು ಹೇಳಬೇಕು. ಅದರಲ್ಲಿ ಒಂದು ಸುಳ್ಳು, ಎರಡು ಸತ್ಯ ಆಗಿರಬೇಕು. ಈ ವೇಳೆ ಚಕ್ರವರ್ತಿ ಹೇಳಿದ ಮೂರು ವಿಚಾರವೂ ಎದುರಾಳಿಗೆ ಶಾಕ್ ನೀಡಿತ್ತು.

'ಕೆಂಪೇಗೌಡ ಪ್ರಶಸ್ತಿ ಪಡೆಯಲು ನನ್ನ ತಾಯಿಯವರನ್ನು ಕರೆದುಕೊಂಡು ಹೋಗಿದ್ದೆ. ಅಂತರಾಜ್ಯ ಹಾಕಿ ಆಡುತ್ತಿದ್ದೆ. ಅದರಲ್ಲಿ ಪ್ರಶಸ್ತಿ ಪಡೆದಿದ್ದೆ, ಚಾಮರಾಜನಗರದಲ್ಲಿ ಊರಿನ ಬಸ್ಟ್‌ ಸ್ಟ್ಯಾಂಡ್‌ನಲ್ಲಿ ಮೂಟೆ ಹೋರುವ ಕೆಲಸ ಮಾಡಿ, ಜೀವನ ಮಾಡುತ್ತಿದ್ದೆ,' ಎಂಬ ಮೂರು ವಿಚಾರಗಳನ್ನು ಹೇಳಿದ್ದಾರೆ. ಚಕ್ರವರ್ತಿ ನಿಜಕ್ಕೂ ಹಾಕಿ ಪ್ಲೇಯರ್ ಆಗಿದ್ದರೆ, ಈಗಾಗಲೆ ನೂರು ಸಲ ಎಲ್ಲರ ಎದುರು ಹೇಳಿಕೊಂಡು ಓಡಾಡುತ್ತಿದ್ದರು ಇದು ಸುಳ್ಳು ಎಂದು ಪ್ರಿಯಾಂಕಾ ಹೇಳುತ್ತಾರೆ. ಅದನ್ನು ಎಲ್ಲರೂ ನಂಬಿ ಇದು ಸುಳ್ಳು ಎಂದೇ ಉತ್ತರಿಸುತ್ತಾರೆ. ಆ ನಂತರ ಚಕ್ರವರ್ತಿ ಸ್ಪಷ್ಟನೆ ನೀಡುತ್ತಾರೆ.

ಚಕ್ರವರ್ತಿ ಚಂದ್ರಚೂಡ್‌ ಬಾಯಲ್ಲಿ 'ಬೀಪ್ ಬೀಪ್' ಪದ; ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ!

'ಕಾಲೇಜು ದಿನಗಳಿಂದ ನಾನು ಹಾಕಿ ಆಡುತ್ತಿದ್ದೇನೆ. ನಾನು ತುಂಬಾ ಒಳ್ಳೆಯ ಹಾಕಿ ಆಟಗಾರ. ನಾನು ಮೂಲತಃ ಮಲೆನಾಡಿನ ಸಕಲೇಶ್ವರಪುರದಲ್ಲಿ ಬೆಳೆದವನು. ಹಾಕಿ ನಮ್ಮ ಮನೆತನದ ಆಟ, ನಮ್ಮ ಕುಟುಂಬದ ಆಟ. ಬೆಂಗಳೂರು ಮಹಾನಗರ ಪಾಲಿಕೆ ನಾನಾ ರಾಜಕೀಯ ಕಾರಣಗಳಿಗೆ ನನಗೆ ಕೆಂಪೇಗೌಡ ಪ್ರಶಸ್ತಿ ಕೊಡಲಿಲ್ಲ.ಭಿಕ್ಷುಕರಾಗಿ ಹೋಗಿ ದೇವಸ್ಥಾನಗಳ ಮುಂದೆ ಹೋಗಿ ಭಿಕ್ಷೆ ಬೇಡಬೇಕಾಗತ್ತೆ, ಚಪ್ಪಲಿ ಹೊಲೆಯಬೇಕಾಗುತ್ತದೆ, ಮೂಟೆ ಹೊರಬೇಕಾಗತ್ತೆ, ಜಗತ್ತು ಯಾವುದನ್ನು ಕೀಳು ಅಂದುಕೊಳ್ಳುತ್ತೋ ಅದನ್ನು ಮಾರುವೇಷದಲ್ಲಿ ಹೋಗಿ ಮಾಡಬೇಕಾಗತ್ತೆ,' ಎಂದು ಹೇಳಿದ್ದಾರೆ.

 

Follow Us:
Download App:
  • android
  • ios