Asianet Suvarna News Asianet Suvarna News

ಮಿಡಲ್ ಫಿಂಗರ್ ತೋರಿಸಿದಕ್ಕೆ ಸುದೀಪ್ ಎದುರು 'ತಪ್ಪಾಯ್ತು' ಎಂದ ಚಕ್ರವರ್ತಿ ಚಂದ್ರಚೂಡ್!

ಕಳೆದ ವಾರ ಚಕ್ರವರ್ತಿ ತೋರಿಸಿದ ಮಿಡಲ್ ಫಿಂಗರ್‌ ಬಗ್ಗೆ ಈ ವಾರದ ಮಾತುಕತೆಯಲ್ಲಿ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್.

Colors Kannada BBK8 Chakravarthy chandrachud accepts his mistake vcs
Author
Bangalore, First Published Jul 25, 2021, 1:31 PM IST

ಬಿಗ್ ಬಾಸ್ ಸೀಸನ್‌ 8ರ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಪ್ರಿಯಾಂಕಾ ತಿಮ್ಮೇಶ್ ಹಾಗೂ ಚಕ್ರವರ್ತಿ ಚಂದ್ರಚೂಡ್ ಆರಂಭದಿಂದಲೂ ಹಾವು- ಮುಂಗುಸಿ ರೀತಿ ಎಂದು ದಿನ ಎಪಿಸೋಡ್‌ ನೋಡುವವರಿಗೆ ಗೊತ್ತಿರುವ ವಿಚಾರ. ಕಳೆದ ವಾರ ಪ್ರಿಯಾಂಕಾ ತಿಮ್ಮೇಶ್ ಮನೆಯಿಂದ ಹೊರ ಬರುತ್ತಾರೆ, ಈ ವೇಳೆ ಚಕ್ರವರ್ತಿ ವರ್ತಿಸಿದ ರೀತಿಗೆ ಇಡೀ ಕರ್ನಾಟಕದ ಜನತೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಕೈಯಲ್ಲಿರುವ 5 ಬೆರಳುಗಳನ್ನು ನಾವು ಯಾವುದಕ್ಕೆ ಉಪಯೋಗಿಸುತ್ತೇನೆ. ಯಾವ ಬೆರಳು ತೋರಿಸಿದರೆ ಏನು ಅರ್ಥ ಕೊಡುತ್ತದೆ ಎಂದು ಸುದೀಪ್ ಸ್ಪರ್ಧಿಗಳಿಂದ ಉತ್ತರ ಪಡೆದರು. ಈ ವೇಳೆ ಸುದೀಪ್ ಯಾಕೆ  ಸನ್ನೆಗಳ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಆಗಲೇ ಚಕ್ರವರ್ತಿ ಅರಿವಿಗೆ ಬಂದಿತ್ತು. 'ಕರ್ನಾಟಕದಲ್ಲಿರುವ ತಾಯಂದಿರು ಈ ಕಾರ್ಯಕ್ರಮ ನೋಡುತ್ತಿದ್ದಾರೆ. ನಮಗೆ ಕರೆ ಮಾಡಿ ಇದರ ಅರ್ಥ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನೀವು ಇದರ ಅರ್ಥ ನೀಡುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ' ಎಂದು ಸುದೀಪ್ ಹೇಳುತ್ತಾರೆ. 

BB8: ಹೆಣ್ಣುಮಗಳಿಗೆ ಮಿಡಲ್‌ ಫಿಂಗರ್ ತೋರಿಸಿದ ಚಕ್ರವರ್ತಿ ವಿರುದ್ಧ ನೆಟ್ಟಿಗರ ಪ್ರತಿಭಟನೆ!

'5 ಬೆರಳುಗಳು ಪಂಚಭೂತಗಳಿದ್ದ ಹಾಗೆ, ಮಧ್ಯದ ಬೆರಳು ಏನೇ ಎದುರಾದರೂ ಬ್ಯಾಲನ್ಸ್ ಮಾಡುವುದು ಎಂದರ್ಥ' ಎಂದು ಚಕ್ರವರ್ತಿ ಹೇಳುತ್ತಾರೆ. ಉತ್ತರ ಒಪ್ಪಿಕೊಳ್ಳದ ಸುದೀಪ್ ಮತ್ತೆ ಪ್ರಶ್ನೆ ಮಾಡುತ್ತಾರೆ ಆದ ತಮ್ಮ ತಪ್ಪು ಒಪ್ಪಿಕೊಂಡ ಚಕ್ರವರ್ತಿ 'ಕೋಪದಲ್ಲಿ ಹೀಗೆ ವರ್ತಿಸಿದೆ ಯಾಕೆ ತೋರಿಸಿದೆ ಎಂದು ಆಮೇಲೆ ಅನಿಸಿತು, ತಪ್ಪಾಯ್ತು. ನಮ್ಮ ಮನೆ ಹೆಣ್ಣು ಮಕ್ಕಳಿಗೆ ಬೇರೆ ಯಾರೇ ಈ ಸನ್ನೆ ತೋರಿಸಿದರೂ ಕೆನ್ನೆಗೆ ಹೊಡೆಯಬಹುದೆನ್ನುವಷ್ಟು ಸಿಟ್ಟು ಬರುತ್ತದೆ' ಎಂದು ಹೇಳುತ್ತಾರೆ.

Follow Us:
Download App:
  • android
  • ios