BB8: ಹೆಣ್ಣುಮಗಳಿಗೆ ಮಿಡಲ್ ಫಿಂಗರ್ ತೋರಿಸಿದ ಚಕ್ರವರ್ತಿ ವಿರುದ್ಧ ನೆಟ್ಟಿಗರ ಪ್ರತಿಭಟನೆ!
ಈ ವಾರ ಮನೆಯಿಂದ ಹೊರ ಬಂದ ಪ್ರಿಯಾಂಕಾ ತಿಮ್ಮೇಶ್, ಚಕ್ರವರ್ತಿ ಚಂದ್ರಚೂಡ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಕೋಪಗೊಂಡ ಚಕ್ರವರ್ತಿ ಮಿಡಲ್ ಫಿಂಗರ್ ತೋರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿ, ಚಕ್ರವರ್ತಿಯನ್ನು ಹೊರ ಹಾಕುವಂತೆ ಒತ್ತಾಯ ಮಾಡುತ್ತಿದ್ದಾರೆ.
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಪ್ರಿಯಾಂಕಾ ತಿಮ್ಮೇಶ್ ಎಲಿಮಿನೇಟ್ ಆಗಿದ್ದಾರೆ.
ಎಲಿಮಿನೇಟ್ ಆಗುವಾಗ ಒಬ್ಬ ಸದಸ್ಯರನ್ನು ನೇರವಾಗಿ ನಾಮಿನೇಟ್ ಮಾಡುವ ಪವರ್ ಬಿಗ್‌ಬಾಸ್ ನೀಡಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಅವರನ್ನು ನೇರವಾಗಿ ಆಯ್ಕೆ ಮಾಡಿ, ಮನೆಯಿಂದ ಹೊರ ನಡೆಯುತ್ತಾರೆ.
ಪ್ರಿಯಾಂಕಾ ಕೈಗೊಂಡ ನಿರ್ಧಾರದ ಬಗ್ಗೆ ಕೇಳಿಸಿ ಕೊಳ್ಳುತ್ತಿದ್ದಂತೆ ಚಕ್ರವರ್ತಿ 'ಮಿಡಲ್ ಫಿಂಗರ್' ತೋರಿಸುತ್ತಾರೆ.
ಬಿಗ್‌ಬಾಸ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ ಆಗಿದ್ದು, ಪ್ರತಿಯೊಬ್ಬ ವೀಕ್ಷಕನೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಕ್ರವರ್ತಿ ಒಂದು ಹೆಣ್ಣು ಮಗಳಿಗೆ ಹೀಗೆ ಅಸಭ್ಯವಾಗಿ ಬೆರಳು ತೋರಿಸಿದ್ದು ತಪ್ಪು, ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಈ ಕೂಡಲೇ ಚಕ್ರವರ್ತಿಯನ್ನು ಮನೆಯಿಂದ ಹೊರ ಹಾಕಬೇಕು ಎಂದು ವಾಹಿನಿಯ ಮುಖ್ಯಸ್ಥರಿಗೆ ಟ್ರೋಲ್ ಪೇಜ್‌ಗಳು ಒತ್ತಾಯ ಮಾಡುತ್ತಿದ್ದಾರೆ.
ಹೆಣ್ಣು ಮಕ್ಕಳಿಗೆ ಗೌರವಿಸುತ್ತೇನೆ ಎಂದು ಹೇಳಿ ಹೀಗೆ ಮಾಡಿದ್ದು ಸರಿ ಅಲ್ಲ ಎಂದು ಮಹಿಳಾ ಸಂಘದವರು ಧ್ವನಿ ಎತ್ತಿದ್ದಾರೆ.
ಸೋಲು ಒಪ್ಪಿಕೊಳ್ಳಲು ಆಗದೇ ಹೀಗೆ ಮಾಡಿರುವುದಕ್ಕೆ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ.