ಅತಿ ಹೆಚ್ಚು ಕಳಪೆ ಮಾರ್ಕ್ಸ್ ಪಡೆದಿರುವ ಪ್ರಶಾಂತ್ ಸಂಬರಗಿ ಪ್ರಾಮಾಣಿಕವಾಗಿ ಆಟವಾಡಿದರೂ ಅನ್ಯಾಯವಾಗುತ್ತಿರುವುದು ಯಾಕೆ?
ಬಿಗ್‌ಬಾಸ್ ಸೀಸನ್ 8ರಲ್ಲಿ ಅತಿ ಹೆಚ್ಚು ಕಳಪೆ ಪ್ರದರ್ಶನ ತೋರಿದ ಸ್ಪರ್ಧಿ ಎಂಬ ಹಣೆಪಟ್ಟಿ ಪಡೆದಿದ್ದಾರೆ ಪ್ರಶಾಂತ್ ಸಂಬರಗಿ. ಇನ್ನುಳಿದ ಸ್ಪರ್ಧಿಗಳು ಒಂದು ಸಲ ಮಾತ್ರ ಜೈಲಿಗೆ ಹೋಗಿದ್ದಾರೆ. ಆದರೆ ಈ ವಾರ ಉತ್ತಮ ಪ್ರದರ್ಶನ ನೀಡಿದ್ದರೂ, ಮನೋರಂಜಿಸಿದರೂ ಪ್ರಶಾಂತ್ ಜೈಲು ಸೇರಿದ್ದಾರೆ.
ಗೋಣಿ ಜೀಲದ ಟಾಸ್ಕ್‌ನಲ್ಲಿ ಪಿತ್ತ ನೆತ್ತಿಗೇರಿ, ವೈಷ್ಣವಿ ಪ್ರಶಾಂತ್ ಮೇಲೆ ಕೈ ಮಾಡುವ ಯತ್ನ ಮಾಡುತ್ತಾರೆ. ಪ್ರಶಾಂತ್ ಬೇಸರವಾದರೂ, ವೈಷ್ಣವಿ ಮೇಲಿರುವ ಗೌರವಕ್ಕೆ ಸುಮ್ಮನಾಗುತ್ತಾರೆ ಹಾಗೂ ಈ ವಾರದ ಉತ್ತಮ ಪ್ರದರ್ಶನ ವೈಷ್ಣವಿಗೆ ನೀಡಬೇಕು ಎಂದು ಪ್ರಶಾಂತ್ ಹೇಳುತ್ತಾರೆ. ಆದರೆ ವೈಷ್ಣವಿ ಮಾತ್ರ ಪ್ರಶಾಂತ್‌ಗೆ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿ ಎನ್ನುತ್ತಾರೆ.
ಚಕ್ರವರ್ತಿ ಚಂದ್ರಚೂಡ್ ಬಾಯಲ್ಲಿ 'ಬೀಪ್ ಬೀಪ್' ಪದ; ಕಣ್ಣೀರಿಟ್ಟ ಪ್ರಶಾಂತ್ ಸಂಬರಗಿ!
ಈ ವಾರದ ಟಾಸ್ಕ್‌ನಲ್ಲಿ ಪ್ರಶಾಂತ್‌ಗಿಂತ ಕಳಪೆ ಶೋ ತೋರಿಸಿದ್ದು ಶುಭಾ ಪೂಂಜಾ ಮತ್ತು ಚಕ್ರವರ್ತಿ ಚಂದ್ರಚೂಡ್. ಅತಿ ಕಡಿಮೆ ಅಂಕ ಪಡೆದವರು ಅವರೇ. ಆದರೂ ಎಲ್ಲರೂ ಪ್ರಶಾಂತ್‌ಗೆ ಕೆಟ್ಟ ಪಟ್ಟ ನೀಡುತ್ತಾರೆ. ಇದರ ಹಿಂದೆ ಗೇಮ್ ಪ್ಲಾನ್ ಇದೆ ಎಂದು ಪ್ರಶಾಂತ್ ಹೇಳಿದರೂ, ಯಾರೂ ನಂಬುವುದಿಲ್ಲ. ಕಳೆದ ವಾರ ಪ್ರಶಾಂತ್ ಸರಿಯಾಗಿದ್ದರೂ ದಿವ್ಯಾ ಉರುಡುಗ ಅನ್ಯಾಯ ಮಾಡಿದರೂ, ಈ ವಾರವೂ ಅನ್ಯಾಯ ಮಾಡಿದ್ದಾರೆ. ಇದನ್ನು ಸುದೀಪ್ ಪ್ರಶ್ನೆ ಮಾಡಬೇಕು ಎಂದು ನೆಟ್ಟಿಗರು ಕಲರ್ಸ್ ಕನ್ನಡ ವಾಹಿನಿಯ ಬಿಗ್‌ಬಾಸ್ ತಂಡಕ್ಕೆ ಒತ್ತಾಯ ಮಾಡುತ್ತಿದ್ದಾರೆ.
