ಬಿಗ್ ಬಾಸ್ 7 ಯಶಸ್ವಿಯಾಗಿ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ.  ಶುರುವಿನ ಆರಂಭದಲ್ಲಿ ಇದ್ದ ಜೋಶ್ ಈಗ ಸ್ವಲ್ಪ ಕಡಿಮೆಯಾದಂತೆ ಕಂಡರೂ ಚಾರ್ಮ್ ಉಳಿಸಿಕೊಂಡಿದೆ. 

ಬಿಗ್ ಬಾಸ್ ಮನೆಯಲ್ಲಿ ಈಗ ನಿಜವಾದ ಸ್ಪರ್ಧೆ ಶುರುವಾಗಿದೆ. ಟಾಸ್ಕ್ ಎನ್ನುವ ವಿಚಾರಕ್ಕೆ ಬಂದರೆ ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ. ಯಾರನ್ನೂ ವೀಕ್ ಎಂದು ತೆಗೆದುಕೊಳ್ಳುವಂತಿಲ್ಲ. ಹಾಗಾಗಿ ನಾಮಿನೇಶನ್ ಪ್ರಕ್ರಿಯೆ ಕಷ್ಟವಾಗಿದೆ. ಒಂಬತ್ತನೇ ವಾರದ ಎಲಿಮನೇಶನ್ ಮುಕ್ತಾಯವಾಗಿದ್ದು ರಾಜು ತಾಳಿಕೋಟೆ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. 

'ಮಂಗಳ ಗೌರಿ ಮದುವೆ' ನಟಿ ಕಾವ್ಯಾ ರಿಯಲ್‌ ಲೈಫ್‌ನಲ್ಲಿ ಹೇಗಿರ್ತಾರೆ ನೋಡಿದ್ದೀರಾ?

ರಾಜು ತಾಳಿಕೋಟೆಗೆ ಇದು ನಿರೀಕ್ಷಿತವಾದದ್ದೇ.  ಇನ್ನೊಬ್ಬ ಸ್ಪರ್ಧಿ ಸುಜಾತಾ ಮನೆಯಿಂದ ಹೊರ ಬರುವಾಗ ನನಗೂ ಮನೆಯಿಂದ ಆಚೆ ಹೋಗಬೇಕು ಎನಿಸುತ್ತಿದೆ. ಈ ವಾರ ನನ್ನನ್ನೇ ನಾಮಿನೇಟ್ ಎಂದು ಅವರನ್ನು ಕೇಳಿಕೊಂಡಿದ್ದರು. ಅದರಂತೆ ಸುಜಾತಾ ಈಚೆ ಬರುವಾಗ ತಾಳಿಕೋಟೆ ಹೆಸರನ್ನು ನಾಮಿನೇಟ್ ಮಾಡಿದ್ದರು. ಆದರೆ ಆ ವಾರ ಅವರು ಸೇಫ್ ಆಗಿ ಬಿಟ್ಟರು. 

ವಾರ ವಾರ ಹೆಚ್ಚಾಗುತ್ತಿದೆ 'ಜೊತೆ ಜೊತೆಯಲಿ' ಜನಪ್ರಿಯತೆ!

ಇನ್ನುಳಿದಂತೆ ಶೈನ್, ವಾಸುಕಿ, ಭೂಮಿ ಶೆಟ್ಟಿ, ಚೈತ್ರಾ ಕೊಟ್ಟೂರು, ಚಂದನ್ ಆಚಾರ್ ಹಾಗೂ ಕಿಶನ್ ಸೇಫ್ ಆಗಿದ್ದಾರೆ.