Asianet Suvarna News Asianet Suvarna News

ಪುಟ್ಟಮಕ್ಕಳು ಕೊಟ್ಟ ಗಿಫ್ಟ್‌ಗೆ ವೇದಿಕೆ ಮೇಲೆ ಭಾವುಕರಾದ Badava Rascal Dhananjay!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಡಾಲಿ ಧನಂಜಯ್ ವಿಡಿಯೋಗಳು. ಗಿಫ್ಟ್‌ ಬುಕ್‌ನಲ್ಲಿ ಏನಿದೆ?

Colors Kannada Badava Rascal Dhananjay breaks down seeing kids special gift vcs
Author
Bangalore, First Published Jan 4, 2022, 5:10 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೂಪರ್ ಹಿಟ್ ರಿಯಾಲಿಟಿ ಶೋ ನನ್ನಮ್ಮ ಸೂಪರ್ ಸ್ಟಾರ್. ನಟಿ ತಾರಾ ಅನುರಾಧಾ, ಸೃಜನ್ ಲೋಕೇಶ್ ಮತ್ತು ಅನು ಪ್ರಭಾಕರ್ ತೀರ್ಪುಗಾರಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮ ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಂಡಿದೆ. ಪ್ರತಿಯೊಂದೂ ಮಗುವಿನ ಮುಗ್ಧತೆ ವೀಕ್ಷಕರ ಮನಸ್ಸು ಗೆದ್ದಿದೆ. ಈ ವೇದಿಕೆಯಲ್ಲಿ ಬಡವ ರಾಸ್ಕಲ್ ಚಿತ್ರತಂಡವೂ ಕಾಣಿಸಿಕೊಂಡಿತ್ತು.

ಸ್ಯಾಂಡಲ್‌ವುಡ್‌ ನಟ ರಾಕ್ಷಸ ಎಂದು ಹೊಸ ಬಿರುದು ಪಡೆದುಕೊಂಡಿರುವ ನಟ ಡಾಲಿ ಧನಂಜಯ್ ಮತ್ತು ಲವ್ ಮಾಕ್ಟೇಲ್ ಮೂಲಕ ಸಿನಿ ಜರ್ನಿ ಆರಂಭಿಸಿದ ಅಮೃತಾ ಐಯ್ಯರ್‌ ಜೋಡಿಯಾಗಿ ನಟಿಸಿರುವ ಸಿನಿಮಾ ಬಡವ ರಾಸ್ಕಲ್ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆದ ಮೇಲೂ ಮಾಧ್ಯಮಗಳಲ್ಲಿ ಮತ್ತು ಅಭಿಮಾನಿಗಳನ್ನು ಭೇಟಿ ಮಾಡಿ, ಪ್ರಚಾರ ಮಾಡುತ್ತಿರುವ ತಂಡದ ಬಗ್ಗೆ ಇಡೀ ಚಿತ್ರರಂಗವೇ ಹೆಮ್ಮೆ ಪಡುತ್ತಿದೆ. ಈ ವೀಕೆಂಡ್‌ನಲ್ಲಿ ಈ ತಂಡ ಮಕ್ಕಳ ಜೊತೆ ಸಮಯ ಕಳೆದಿದೆ. 

Badava Rascal: ಬಳ್ಳಾರಿಯಲ್ಲಿ ಅಪ್ಪು ಸ್ಮರಿಸಿದ ಡಾಲಿ ಧನಂಜಯ್

ಈ ವೇಳೆ ಸೂಪರ್‌ ಸ್ಟಾರ್ ಮಕ್ಕಳಿಂದ ಸೂಪರ್ ಸ್ಟಾರ್ ಧನಂಜಯ್‌ಗೆ ಸೂಪರ್ ಉಡುಗೊರೆ ನೀಡಿದ್ದಾರೆ. ವಾಹಿನಿಯ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈಗ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಡಾಲಿ ಅವರಿಗೆ ಕೊಟ್ಟ ಉಡುಗೊರೆಯಲ್ಲಿ ಅವರ ಬಾಲ್ಯದ ಫೋಟೋಗಳು ಮತ್ತು ಜೀವನದಲ್ಲಿ ಗೆಲ್ಲಬೇಕು ಎಂದು ಆಗಾಗ ಅವರಿಗೆ ಅವರೇ ಹೇಳಿಕೊಳ್ಳುವ ಡೈಲಾಗ್‌ಗಳನ್ನು ಬರೆಯಲಾಗಿದೆ. ಅದನ್ನು ಕ್ಯಾಮೆರಾ ಎದುರೇ ಡಾಲಿ ಓದಿದ್ದಾರೆ. 

Colors Kannada Badava Rascal Dhananjay breaks down seeing kids special gift vcs

'ಧನಂಜಯ ಕೆಎ ಇವರು ಬಾಲ್ಯದಿಂದಲೇ ಬಾನೆತ್ತರಕ್ಕೆ ಹಾರುವ ಕನಸು ಕಂಡ ಬಡವನ ಕಥೆ', 'ಇವನು ಬಾಲ್ಯದಲ್ಲಿಯೇ ಚಾಲೆಂಜಿಂಗ್ ಪಾತ್ರಗಳನ್ನು ಮಾಡಿ ನೋಡುಗರ ಚಪ್ಪಾಳೆ ಗಿಟ್ಟಿಸಿಕೊಂಡ ಚಾರ್ಮಿಂಗ್ ಹುಡುಗ', ' ಪಾತ್ರಗಳಷ್ಟೇ ಅಲ್ಲ, ಪಾಠದಲ್ಲೂ ಪ್ರವೀಣನಾಗಿದ್ದ. ಇವನು ಪ್ರತಿಷ್ಠಿತ ಸಂಸ್ಥೆಯ ಉದ್ಯೋಗಿಯೂ ಆಗಿದ್ದ,' ಎಂದು ಹೀಗೆ ಸಾಲು ಸಾಲುಗಳನ್ನು ಬರೆಯಲಾಗಿದೆ. 

ಡಾ.ರಾಜ್‌ಕುಮಾರ್ ಅವರ ಡೈಲಾಗ್‌ ಕೂಡ ಬರೆಯಲಾಗಿದೆ. ಈ ಸಾಲುಗಳನ್ನು ನೋಡಿ ಧನಂಜಯ್ ವೇದಿಕೆ ಮೇಲೆ ಭಾವುಕರಾದರು. 'ಸಿನಿಮಾ ರಂಗಕ್ಕೆ ಬರಬೇಕು ಅಂತ. ಪ್ರತಿ ಶುಕ್ರವಾರ ಸಿನಿಮಾ ರಿಲೀಸ್ ಆದ್ರೆ ಒಂದು ಮೂರು ದಿನ ನೋಡ್ತಿದ್ದೆ. ಆಮೇಲೆ ಸೋಮವಾರ move on ಆಗ್ತಿದ್ದೆ. ನೆಕ್ಸ್ಟ್ ಏನು ನೆಕ್ಸ್ಟ್ ಏನು ಅಂತ. ಈ ಡೈಲಾಗ್‌ ನನಗೆ ತುಂಬಾನೇ ಇಷ್ಟ. ಈ ಡೈಲಾಗ್‌ನ ಹೇಳಿಕೊಂಡು ಹೇಳಿಕೊಂಡು ಎನರ್ಜಿ ತೆಗೆದುಕೊಂಡಿದ್ದೀನಿ. 'ಕಂದ ನಿನಗೆ ಈ ಸಿಂಹಾಸನ ಬೇಡವೇ? ಆ ರತ್ನ ಚಕಿತ ಕರೀಟ ನಿನಗ ಬೇಡವೇ, ಹೇಳು ಮಯೂರ ಹೇಳು' ಅಂತ. ನನಗೆ ಯಾವಾಗಲೂ ಅನಿಸುತ್ತಿತ್ತು ಆ ಕಿರೀಟ ನನಗೆ ಬೇಕು, ನನಗೆ ಬೇಕು. ನಾನು ಕಲಾವಿದ ಅಂತ. ನಾನು ಬೇಜಾರು ಮಾಡಿಕೊಂಗಾಗಲೆಲ್ಲಾ ನಿರ್ದೇಶಕರು ಇದನ್ನು ಹೇಳುತ್ತಿದ್ದರು,' ಎಂದು ಧನಂಜಯ್ ನೆನಪಿಸಿಕೊಂಡಿದ್ದಾರೆ. 

Badava Rascal Movie:ಡಾಲಿ ಧನಂಜಯ್‌ಗೆ ಜನಪದ ಕಲಾವಿದರಿಂದ ಅದ್ಧೂರಿ ಸ್ವಾಗತ

'ಅಸೂಯೆ ಅವಮಾನಗಳನ್ನು ಮೆಟ್ಟಿನಿಂತ ಅದ್ವೀಯನಾಗಿ ಬೆಳೆದು ನಿಂತ ಪ್ರಭೆ ಹೇಳಿದ್ದು ಹೀಗೆ 'ಕಾರಂತ ಕನ್ನಡ ನಿಘಂಟಿನಲ್ಲಿ ಡಾಲಿ ಅಂದ್ರೆ ಎನು ಗೊತ್ತಾ? ಕ್ರೂರಿ ಅಂತ ಅರ್ಥ' ಇವತ್ತು ಎಲ್ಲರೂ ಪ್ರೀತಿಯಿಂದ ಡಾಲಿ ಡಾಲಿ ಅಂತ ಕರೆಯುತ್ತಾರೆ. ತುಂಬಾ ದೊಡ್ಡದಾಗಿ ಕರ್ನಾಟಕಕ್ಕೆ ನನ್ನ ಪರಿಚಯ ಮಾಡಿಸಿದ ಪಾತ್ರ ಇದು. ಟಗರು ಆದ್ಮೇಲೆ ಎಲ್ಲರ ಡೈಲಾಗ್ ಕೇಳುವುದು ಸಂತೋಷ ಆಗುತ್ತಿತ್ತು. ನಿನ್ನೆ ಮೊನ್ನೆ ಅಲ್ಲಿ ಟೀ ಕುಡಿಯುತ್ತಿದ್ದ ಈಗ ಸೂಪರ್ ಸ್ಟಾರ್ ಆದ್ನಾ ಅಂತ. ನಾನು ವಿಲನ್ ಆಗೋಲ್ಲ. ಮತ್ತೆ ಹೀರೋನೇ ಆಗಬೇಕು ಅಂತ ಇದ್ದಿದ್ರೆ, ಇಡೀ ಕರ್ನಾಟಕವನ್ನು ಅಪ್ಪು ಅವರ ಜೊತೆ ಸುತ್ತುವ ಅವಕಾಶ ಕಳೆದುಕೊಳ್ಳುತ್ತಿದ್ದೆ. ಆ ದೇವರಿಗೆ ಯಾವಾಗಲೂ ಥ್ಯಾಂಕ್ಸ್ ಹೇಳಿತ್ತೀನಿ,' ಎಂದಿದ್ದಾರೆ.

'ನನ್ನ ಜೊತೆ ತುಂಬಾ ಪ್ರತಿಭೆಗಳಿದ್ದವು. ನಾವೆಲ್ಲೂ ಬೇರೆ ಬೇರೆ ಕೆಲಸ ಮಾಡಿದ್ದೀವಿ ಗೊತ್ತಿಲ್ಲ. ಶಂಕರ್ ಅದ್ಭುತವಾದ ಸ್ಕ್ರಿಪ್ಟ್ ತಂದರು. ಕೆಲವೊಂದು ಸಂದರ್ಭಗಳು ನಮ್ಮನ್ನು ನಿರ್ಮಾಣ ಮಾಡುವಂತೆ ಕೇಳಿತ್ತು. ನಾನು ಮಾಡಿದ್ದು ಅನ್ನುವುದಕ್ಕಿಂತ ಬಡವ ರಾಸ್ಕಲ್‌ ಎಲ್ಲವನ್ನೂ ಮಾಡಿಸಿಕೊಂಡಿತ್ತು. ಕನ್ನಡ ಚಿತ್ರರಂಗ ಒಳ್ಳೆಯ ಪಾತ್ರಗಳನ್ನು ಕೊಟ್ಟು ಸಿನಿಮಾಗಳನ್ನು ಕೊಡ್ತು. ಅದನ್ನ ತೆಗೆದುಕೊಂಡು ಬಂದು ಮತ್ತೆ ಸಿನಿಮಾ ಮಾಡಿದ್ದೀವಿ. ಜನರು ಅದನ್ನು ತುಂಬಾ ಚೆನ್ನಾಗಿ ಸ್ವೀಕರಿಸಿ ಮತ್ತೆ ದುಡ್ಡು ತಂದು ಕೊಡುತ್ತಿದ್ದಾರೆ. ಬದುಕು ಖರ್ಚಾಗಬೇಕು, ಖರ್ಚಾಗದಷ್ಟು ನೆನಪುಗಳಿರಬೇಕು ಅಂತ. ಅಲ್ಲಿಂದ ಇಲ್ಲೀವರೆಗೂ ಏನು ಖರ್ಚು ಮಾಡಿದ್ಯಾ ಅಂದ್ರೆ ಒಂದೊಳ್ಳೆ ನೆನಪುಗಳನ್ನು ಮತ್ತು ಸ್ನೇಹವನ್ನು ಸಂಪಾದಿಸಿದ್ದೀನಿ,' ಎಂದು ಮಾತು ಮುಗಿಸಿದ್ದಾರೆ.

 

Follow Us:
Download App:
  • android
  • ios