'ಅಗ್ನಿಸಾಕ್ಷಿ' ಧಾರಾವಾಹಿ ಮುಖ್ಯ ಪಾತ್ರಧಾರಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ದೊಡ್ಡ ಜವಾಬ್ದಾರಿಗೆ ಕೈ ಹಾಕಿದ್ದಾರೆ. 

ಆರು ವರ್ಷಗಳ ಕಾಲ ಕಿರುತೆರೆ ಪ್ರೇಕ್ಷಕರ ಪ್ರೀತಿ ಗಿಟ್ಟಿಸಿಕೊಂಡಿರುವ ಸನ್ನಿಧಿ ಈ ಹಿಂದೆ 'ಗಿರ್‌ಗಿಟ್ಲೆ' ಚಿತ್ರದಲ್ಲಿ ಮಿಂಚಿದ್ದರು. ವಿಭಿನ್ನ ಪಾತ್ರದಲ್ಲಿ  ಕಾಣಿಸಿಕೊಳ್ಳಬೇಕೆಂದು ಹಲವಾರು ಕಥೆಗಳನ್ನು ಕೇಳಿದ ನಂತರ ವಿನಯ್ ಹೇಳಿದ ಕಥೆ ಒಪ್ಪಿಕೊಂಡಿದ್ದಾರೆ.

ಅಭಿಮಾನಿಗಳೆದೆಯಲ್ಲಿ ಚಿಟ್ಟೆ ಹಾರಿಸಿದ ಮನೆಮಗಳು ಸನ್ನಿಧಿಯ ಬೋಲ್ಡ್ ಅವತಾರ!

ಚಿತ್ರದ ಹೆಸರು ಬಹಿರಂಗವಾಗಿಲ್ಲವಾದರೂ ಪಾತ್ರದ ಹೆಸರು ಹಾಗೂ ಚಿತ್ರದ ಒನ್‌ ಲೈನ್‌ ಸ್ಟೋರಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಚಿತ್ರದಲ್ಲಿ ನಕ್ಷತ್ರ ಸಿಕ್ಕಾಪಟ್ಟೆ ಜಾಲಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಬಹುತೇಕ ದೃಶ್ಯವನ್ನು ರಾತ್ರಿ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.