ಕನ್ನಡ ಚಿತ್ರರಂಗದ ಮಟ್ಟಿಗೆ ಮೊದಲ ಸಿನಿಮಾ ವೆಬ್‌ಸೈಟ್‌ ಎನ್ನುವ ಹೆಗ್ಗಳಿಕೆ ಹೊತ್ತಿರುವ ಚಿತ್ರಲೋಕ ಡಾಟ್‌ ಕಾಂ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಚಿತ್ರಲೋಕ ವೆಬ್‌ಸೈಟ್‌ನ ಯೂಟ್ಯೂಬ್‌ ಚಾನಲ್‌ ಸಿಲ್ವರ್‌ ಕ್ರಿಯೇಟರ್‌ ಪ್ರಶಸ್ತಿಗೆ ಪಾತ್ರವಾಗಿದೆ.

ಯೂಟ್ಯೂಬ್‌ ಚಾನಲ್‌ ಈಗ ಒಂದು ಲಕ್ಷ ಚಂದಾದಾರರನ್ನು ಪಡೆದುಕೊಂಡಿದೆ. ಕೇವಲ ಸಿನಿಮಾ ಸುದ್ದಿಗಳನ್ನೇ ಬಿತ್ತರಿಸುತ್ತ, ರಾಜ್ಯ- ದೇಶದ ಆಚೆಗೂ ಇರುವ ಕನ್ನಡಿಗರಿಗೆ ಸಿನಿಮಾ ಸುದ್ದಿಗಳನ್ನು ತಲುಪಿಸುತ್ತಿರುವ ಅತ್ಯಂತ ಜನಪ್ರಿಯ ವೆಬ್‌ಸೈಟ್‌ನ ಯೂಟ್ಯೂಬ್‌ ಚಾನಲ್‌ ಕೂಡ ಜನಪ್ರಿಯತೆಯ ದಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಈ ಸಾಧನೆಯನ್ನು ಗುರುತಿಸಿರುವ ಯೂಟ್ಯೂಬ್‌ ಸಂಸ್ಥೆ, ಯೂಟ್ಯೂಬ್‌ ಸಿಲ್ವರ್‌ ಕ್ರಿಯೇಟರ್ಸ್‌ ಅವಾರ್ಡ್‌ ಪ್ರಶಸ್ತಿಯನ್ನು ಚಿತ್ರಲೋಕ ಡಾಟ್‌ ಕಾಂ ಸಂಪಾದಕರಾದ ಕೆಎಂ ವೀರೇಶ್‌ ಅವರಿಗೆ ನೀಡಿ ಗೌರವಿಸಿದೆ. ಯೂಟ್ಯೂಬ್‌ನಲ್ಲಿ ಯಾವುದೇ ಚಾನಲ…ಗೆ ಒಂದು ಲಕ್ಷ ಚಂದಾದಾರರಾದ ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪ್ರಶಸ್ತಿಯನ್ನು ಪಡೆದಿರುವ ಕನ್ನಡದ ಕೆಲವು ಬೆರಳಣಿಕೆಯಷ್ಟುಚಾನಲ…ಗಳಲ್ಲಿ ಚಿತ್ರಲೋಕ ಸಹ ಒಂದು.

ರಾಜ್‌ಕುಮಾರ್ ಅಪಹರಣದ ರೋಚಕ ಕಥೆ;ಅಂತೆ ಕಂತೆಗಳಿಗೆಲ್ಲಾ ತೆರೆ ಬೀಳಲಿದೆ! 

ಕಳೆದ ಕೆಲವು ತಿಂಗಳುಗಳಲ್ಲಿ, ಯೂಟ್ಯೂಬ್‌ನ ಚಿತ್ರಲೋಕ ಚಾನಲ…ನಲ್ಲಿ ಹಲವು ವಿಭಿನ್ನ ಮತ್ತು ವಿನೂತನ ಹೆಜ್ಜೆಗಳನ್ನು ಇಟ್ಟಿದೆ. ಡಾ.ರಾಜಕುಮಾರ್‌ ಅಪಹರಣ ಕುರಿತು ಯಾರಿಗೂ ಗೊತ್ತಿಲ್ಲದ ಮತ್ತು ಇದುವರೆಗೂ ಯಾರೂ ಕೇಳರಿಯದ ಹಲವು ವಿಷಯಗಳನ್ನು ತನ್ನ ಯೂಟ್ಯೂಬ್‌ ಚಾನಲ…ನ ಮೂಲಕ ಚಿತ್ರಲೋಕ ಹಂಚಿಕೊಂಡಿದೆ.

ಮುಂದಿನ ದಿನಗಳಲ್ಲಿ ಹಿರಿಯ ನಟ-ನಿರ್ಮಾಪಕ ದ್ವಾರಕೀಶ್‌, ಎಸ್‌ಎ ಚಿನ್ನೇಗೌಡ, ಎಸ್‌ಎ ಗೋವಿಂದರಾಜ್‌, ಸಿ.ವಿ. ಶಿವಶಂಕರ್‌, ಸಾರಾ ಗೋವಿಂದು, ಟೆನ್ನಿಸ್‌ ಕೃಷ್ಣ ಸೇರಿದಂತೆ ಹಲವರು ನಡೆದುಬಂದ ಹಾದಿ ಸೇರಿದಂತೆ, ಅವರ ಜೀವನದ ಹಲವು ಮೈಲಿಗಲ್ಲುಗಳ ಕುರಿತು ಚಿತ್ರಲೋಕ ಯೂಟ್ಯೂಬ್‌ ಪ್ರಸಾರ ಮಾಡಲಿದೆ. ಕನ್ನಡ ಚಿತ್ರರಂಗದ ಸುದ್ದಿಗಳು ಕೇವಲ ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದ ಸಂದರ್ಭದಲ್ಲಿ ಡಿಜಿಟಲ… ಮಾಧ್ಯಮದ ಮೂಲಕ ಅದನ್ನು ಜಗತ್ತಿನ ಮೂಲೆಮೂಲೆಗೂ ತಲುಪುವಂತೆ ಮಾಡಿದ್ದು ಚಿತ್ರಲೋಕ ಡಾಟ್‌ ಕಾಂನ ಹೆಚ್ಚುಗಾರಿಕೆ.