ಮಗು ದತ್ತು ಪಡೆದ ಪ್ರಕರಣ: ರೀಲ್ಸ್ ರಾಣಿ ಸೋನುಗೌಡ 14 ದಿನ ನ್ಯಾಯಾಂಗ ಬಂಧನ
ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ಸೋನುಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.
ಬೆಂಗಳೂರು (ಮಾ.25): ಕನ್ನಡದ ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ರೀಲ್ಸ್ ಸ್ಟಾರ್ ಸೋನುಗೌಡ ಅವರು ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಕಳೆದ ಶುಕ್ರವಾರ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಸೋನ್ ಗೌಡ ಅವರನ್ನು 5 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಆದರೆ, ಐದು ದಿನಗಳಲ್ಲಿ ವಿಚಾರಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಕಾಶವನ್ನು ಪೊಲೀಸರು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರ ಪರವಾಗಿ ವಾದ ಆಲಿಸಿದ ನ್ಯಾಯಾಧೀಶರು ಸೋನು ಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅನಧಿಕೃತವಾಗಿ ಮಗು ಇಟ್ಟುಕೊಂಡಿದ್ದಕ್ಕೆ ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನ!
ಸೋನು ಗೌಡ ಅವರು ಮಗುವನ್ನು ದತ್ತು ಪಡೆದ ನಂತರ ಮಗುವನ್ನು ತಾನು ದತ್ತು ಪಡೆದಿದ್ದೇನೆ. ಚಿಕ್ಕ ಮಗುವಿಗೆ ದುಬಾರಿ ಗಿಫ್ಟ್ ಕೊಡಿಸಿದ್ದೇನೆ ಎಂದು ಆಕೆಯೊಂದಿಗೆ ರೀಲ್ಸ್ ಮಾಡಿ ಪ್ರಚಾರವನ್ನೂ ಪಡೆದಿದ್ದರು. ಈ ಮೂಲಕ ದತ್ತು ಪಡೆದ ನಂತರ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂಬುದು ತಿಳಿದುಬಂದಿತ್ತು. ನಂತರ, ಅವರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕಾನೂನು ಪ್ರಕಾರವಾಗಿ ದತ್ತು ಪಡೆದೇ ಇಲ್ಲವೆಂಬುದು ಕೂಡ ತಿಳಿದುಬಂದಿದೆ.
ಮುಖ್ಯವಾಗಿ ಸೋನುಗೌಡ ಹೆಣ್ಣು ಮಗುವನ್ನು ಹಿಂದೂ ದತ್ತು ಕಾಯಿದೆ 1956ರ ಪ್ರಕಾರ ಈ ದತ್ತು ಪ್ರಕ್ರಿಯೆ ನಡೆದಿಲ್ಲ. ಮಗುವಿನ ಮನೆ ಇರುವ ರಾಯಚೂರಿಗೆ ಹೋಗಿ, ಅಲ್ಲಿಂದ ಮಗುವನ್ನು ಕರೆದುಕೊಂಡು ಸೋನು ಬಂದಿದ್ದಾರೆ. ಮಗುವಿನ ಪೋಷಕರಿಗೆ ಕೆಲ ಸೌಲಭ್ಯಗಳನ್ನು ಒದಗಿಸಿದ್ದೇನೆ ಎಂದು ಸೋನು ಶ್ರೀನಿವಾಸ ಗೌಡ ಅವರೇ ಈ ಹಿಂದೆ ಹೇಳಿಕೊಂಡಿದ್ದಾರೆ. ಇದು ಮಗುವನ್ನು ಮಾರಾಟ ಮಾಡಿರುವಂತೆ ಕಾಣುತ್ತದೆ. ಅಲ್ಲದೆ, ಮಗುವಿನ ಘನತೆಯನ್ನು ಕಾಪಾಡುವಲ್ಲಿ ಸೋನು ವಿಫಲರಾಗಿದ್ದಾರೆ ಎಂಬುದು ತಿಳಿದುಬಂದಿದೆ.
ಚಪ್ಪರ್ ನನ್ನ ಮಗನೇ...; ಟೀಕೆ ಮಾಡಿದವನಿಗೆ ಕ್ಲಾಸ್ ತೆಗೆದುಕೊಂಡ ಸೋನು ಗೌಡ!
ಬೆಂಗಳೂರು ಸಿಜೆಎಂ ಕೋರ್ಟ್ ನಿಂದ ಆದೇಶ ಮಾಡಲಾಗಿದೆ. ಇನ್ನು ಪೊಲೀಸರು ಸೋನು ಶ್ರೀನಿವಾಸ್ ಗೌಡ ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗುತ್ತದೆ. ಎಪ್ರಿಲ್ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿದೆ. ಮುಂದಿನ ನ್ಯಾಯಾಲಯ ವಿಚಾರಣೆ ವೇಳೆ ಮಕ್ಕಳನ್ನು ದತ್ತು ಪಡೆಯುವ ಹಕ್ಕು ಉಲ್ಲಂಘನೆ ಮಾಡಿದ ಆರೋಪದಡಿ ಜೈಲು ಶಿಕ್ಷೆಯೂ ಎದುರಾಗಬಹುದು.