ಚಪ್ಪರ್‌ ನನ್ನ ಮಗನೇ...; ಟೀಕೆ ಮಾಡಿದವನಿಗೆ ಕ್ಲಾಸ್‌ ತೆಗೆದುಕೊಂಡ ಸೋನು ಗೌಡ!

ದತ್ತು ತೆಗೆದುಕೊಳ್ಳುವ ನೆಪದಲ್ಲಿ ಹಣ ಮಾಡುತ್ತಿರುವ ಸೋನು ಎಂದು ಆರೋಪ ಮಾಡುತ್ತಿರುವ ಟ್ರೋಪ್‌ ಪೇಜ್‌ಗೆ ಉತ್ತರ ಕೊಟ್ಟ ಸೋನು ಗೌಡ. 

Bigg Boss Sonu Srinivas Gowda angry on troll page talking about Sevanthi vcs

ಬಿಗ್ ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಮತ್ತು ಸೇವಂತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಡ ಕುಟುಂಬದ ಹುಡುಗಿಯನ್ನು ದತ್ತು ತೆಗೆದುಕೊಂಡಿರುವ ಸೋನು ಪ್ರತಿ ದಿನವೂ ವಿಭಿನ್ನ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ. ಬಟ್ಟೆ, ಒಡವೆ, ತಿಂಡಿ- ತಿನಿಸು, ಪುಸ್ತಕ....ಅಷ್ಟೇ ಅಲ್ಲ ಕಾನ್ವೆಂಟ್‌ ಸ್ಕೂಲ್‌ಗೆ ಸೇರಿಸಬೇಕು ಅಂತಾನೂ ಓಡಾಡುತ್ತಿದ್ದಾರೆ ಸೋನು. ಈ ನಡವೆ ನೆಗೆಟಿವ್ ಟ್ರೋಲ್ ಮಾಡುತ್ತಿರುವವರಿಗೆ ಉತ್ತರ ಕೊಟ್ಟಿದ್ದಾರೆ.

'ಎರಡು ಮೂರು ತಿಂಗಳುಗಳಿಂದ ನನ್ನ ಬಗ್ಗೆ ಜಾಸ್ತಿ ಪಾಸಿಟಿವ್ ಟ್ರೋಲ್ ಆಗುತ್ತಿದೆ. ಸೇವಂತಿಯನ್ನು ದತ್ತು ತೆಗೆದುಕೊಂಡಿರುವುದಕ್ಕೋ ಯಾವುದಕ್ಕೆ ನನಗೆ ಗೊತ್ತಿಲ್ಲ. ನೆಗೆಟಿವ್ ಟ್ರೋಲ್ ಮಾಡಿದಾಲೂ ನಾನು ಏನೂ ಮಾತನಾಡಿಲ್ಲ ಹೀಗಾಗಿ ಪಾಸಿಟಿವ್ ಮಾಡಿದಾಗಲೂ ನಾನು ಏನೂ ಹೇಳಲ್ಲ. ಕೆಲವು ದಿನಗಳ ಹಿಂದೆ ಒಂದು ಟ್ರೋಲ್ ಪೇಜ್‌ ಹಾಕಿರುವ ಪೋಸ್ಟ್‌ ನೋಡಿದೆ. ಹಣ ಮಾಡಲು ವ್ಯೂಸ್‌ ಪಡೆಯಲು ಒಂದು ಬಡ ಕುಟುಂಬದ ಹುಡುಗಿಯನ್ನು ಬಳಸಿಕೊಳ್ಳುತ್ತಿರುವೆ ದತ್ತು ಅಂತ ಪದ ಬಳಸಿ ಮೋಸ ಮಾಡುತ್ತಿರುವೆ ಎಂದು ಆದರೆ ಗುರು ನಾನು ಕೆಟ್ಟ ಪದ ಬಳಸಬಾರದು ಅಂತ ಅಂದುಕೊಂಡಿದ್ದೀನಿ ಆದರೆ...ನಿನ್ನಂಥ ಚಪ್ಪರ್ ನನ್ನ ಮಗ ನನ್ನಿಂದ ವ್ಯೂಸ್‌ ತೆಗೆದುಕೊಳ್ಳುತ್ತಿರುವೆ' ಎಂದು ಸೋನು ಗೌಡ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ತಗ್ದು ತಟ್ ಬಿಡ್ತೀನಿ; ದತ್ತು ತೆಗೆದುಕೊಂಡು ಹಳ್ಳಿ ಹುಡುಗಿ ಮೇಲೆ ಸೋನು ಗೌಡ ಗರಂ!

'ಸೇವಂತಿಯನ್ನು ದತ್ತು ತೆಗೆದುಕೊಳ್ಳಬೇಕು ಅನ್ನೋ ಯೋಚನೆ ಬರುವ ಮುನ್ನವೇ ನಾನು ಆಕೆಯನ್ನು ಚೆನ್ನಾಗಿ ನೋಡಿಕೊಂಡೆ. ಚಿನ್ನದ ಚೈನ್, ಚಿನ್ನದ ಓಲೆ, ಬೆಳ್ಳಿ ಕಾಲುಗೆಜ್ಜೆ ಮತ್ತು ಬಟ್ಟೆ ಬರಿ ಅಂತ ಕೊಡಿಸಿರುವೆ. ಸೇವಂತಿಗೆ ಮಾತ್ರವಲ್ಲದೆ ಅವರ ಕುಟುಂಬಕ್ಕೂ ಮಾಡಿರುವೆ. ದತ್ತು ತೆಗೆದುಕೊಳ್ಳುವುದು ಒಂದು ಪ್ರೊಸೀಜರ್‌ ಇದೆ ಹೀಗಾಗಿ ಅದ ಬಗ್ಗೆ ಮಾತನಾಡುತ್ತಿಲ್ಲ ಅಥವಾ ಸಂಪೂರ್ಣವಾಗಿ ತಿಳಿಸುತ್ತಿಲ್ಲ. ರಾಯಚೂರಿನಲ್ಲಿ ನನ್ನ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿ ಆಕೆಯನ್ನು ನನ್ನೊಟ್ಟಿಗೆ ಕಳುಹಿಸಿರುವುದು. ನಮ್ಮ ಮನೆಗೆ ಕರೆದುಕೊಂಡು ಬಂದು 15 ದಿನ ಆಗಿಲ್ಲ ಆಗಲೇ ನೆಗೆಟಿವ್ ಆಗಿ ಮಾತನಾಡಬಾಡಿ.' ಎಂದು ಸೋನು ಗೌಡ ಹೇಳಿದ್ದಾರೆ.

ಏನ್ ಆಗಿಲ್ಲ ಗುರು, ಆಸ್ಪತ್ರೆಗೂ ಹೋಗಿಲ್ಲ; ಆಕ್ಸಿಡೆಂಟ್ ಬಗ್ಗೆ ಸ್ಪಷ್ಟನೆ ಕೊಟ್ಟ ಸೋನು ಗೌಡ!

'ಬಡ ಮಕ್ಕಳನ್ನು ಬಳಸಿಕೊಂಡು ಹಣ ಮಾಡುತ್ತಿರುವೆ ಅಂತೀರಾ. ಸೀವಂತಿಯಿಂದ ಬರುತ್ತಿರುವ ಹಣವನ್ನು  ನಾನು ಬಳಿಸಿಕೊಳ್ಳುವುದಿಲ್ಲ ಅದನ್ನು ಅವರ ಅಪ್ಪ ಅಮ್ಮಂಗೆ ಕೊಡಬೇಕು ಅಂತ ನಿರ್ಧಾರ ಮಾಡಿದ್ದಾರೆ. ನನಗಿಂತ ವಿಡಿಯೋ ಮಾಡಬೇಕು ಅನ್ನೋದು ಸೇವಂತಿ ಆಸೆ. ಅಲ್ಲದೆ ಪ್ರತಿ ದಿನ ಈ ರೀತಿ ವಿಡಿಯೋ ಮಾಡಿ ಅಂತ ಜನರು ಕಾಮೆಂಟ್ ಮಾಡುತ್ತಾರೆ. ಸೇವಂತಿ ನನ್ನ ತಂಗಿನೇ...ಕೆಟ್ಟದಾಗಿ ಕಾಮೆಂಟ್ ಮಾಡುವ ಅಗತ್ಯವಿಲ್ಲ' ಎಂದಿದ್ದಾರೆ ಸೋನು ಗೌಡ. 

Latest Videos
Follow Us:
Download App:
  • android
  • ios