ಅನಧಿಕೃತವಾಗಿ ಮಗು ಇಟ್ಟುಕೊಂಡಿದ್ದಕ್ಕೆ ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನ!
ಅನಧಿಕೃತವಾಗಿ ಮಗುವನ್ನು ಮನೆಯಲ್ಲಿ ಇಟ್ಟಿಕೊಂಡು ಆರೋಪ ಹಿನ್ನೆಲೆ ಬ್ಯಾಡರ ಹಳ್ಳಿ ಪೊಲೀಸರಿಂದ ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಅವರನ್ನು ಬಂಧಿಸಲಾಗಿದೆ.
ಬೆಂಗಳೂರು (ಮಾ.22): ಅನಧಿಕೃತವಾಗಿ ಮಗುವನ್ನು ಮನೆಯಲ್ಲಿ ಇಟ್ಟಿಕೊಂಡು ಆರೋಪ ಹಿನ್ನೆಲೆ ಬ್ಯಾಡರ ಹಳ್ಳಿ ಪೊಲೀಸರಿಂದ ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಅವರನ್ನು ಬಂಧಿಸಲಾಗಿದೆ. ಮಕ್ಕಳ ರಕ್ಷಣಾ ಕಚೇರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಚರಣೆ ಮೂಲಕ ಸೋನು ಶ್ರೀನಿವಾಸ ಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಸೋನು ಗೌಡ ಟ್ರೋಲ್ ಆಗಿದ್ದರು. ಹೀಗಾಗಿ ಮಕ್ಕಳ ಹಕ್ಕು ಕಸಿದಿರುವ ಅರೋಪದ ಮೇಲೆ ಅರೆಸ್ಟ್ ಮಾಡಲಾಗಿದೆ.
ಉತ್ತರ ಕರ್ನಾಟಕದ 8 ವರ್ಷದ ಮಗುವನ್ನು ಸೋನು ದತ್ತು ಪಡೆದುಕೊಂಡಿದ್ದೇನೆ ಎಂದು ಹೇಳಿದ್ದರು. ಸಿಂಪತಿ ಕಿಟ್ಟಿಸಿಕೊಂಡು ಸೆಲೆಬ್ರಿಟಿ ಆಗಲು ಮುಂದಾಗಿದ್ದರು ಎಂಬ ಆರೋಪ ಈಗ ಸೋನು ಮೇಲಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ಕೊಂದ ಪಾಪಿ ಹೆಂಡ್ತಿ..!
ಮಗುವನ್ನ ದತ್ತು ಪಡೆದು ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲು ತಂತ್ರ ಹೆಣೆದಿದ್ದರು ಎಂದು ಮಕ್ಕಳ ರಕ್ಷಣಾಧಿಕಾರಿಗಳಿಂದ ದೂರು ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸರು ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ಶುಕ್ರವಾರ ಸೋನುವನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಸೋನುವನ್ನು CWC ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮಗುವನ್ನು ದತ್ತು ಪಡೆದಿರುವುದರ ಅಧಿಕಾರಿಗಳು ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ನಾನು ಮಗು ಕರೆದುಕೊಂಡು ಬಂದು 15 ದಿನ ಆಗಿದೆ . ಈ ರೀತಿ ಆಗತ್ತೆ ಅಂತ ನನಗೆ ಗೊತ್ತಿಲ್ಲ. ನಾನು ಪ್ರೊಸಿಜರ್ ಮೂಲಕವೇ ಮಾಡಿಸಿಕೊಳ್ಳುತ್ತಿದ್ದೆ. ನಾನು ತಪ್ಪು ಮಾಡದಿದ್ರೂ ನನ್ನನ್ನ ಕರೆದುಕೊಂಡು ಬಂದಿದ್ದಾರೆ ಎಂದು ಸೋನು ಹೇಳಿದ್ದಾರೆ.
ಕರಾವಳಿ, ಮಲೆನಾಡಿನ ಕೆಲವೆಡೆ ತಂಪೆರೆದ ವರುಣ, ರಾಜ್ಯದಲ್ಲಿ 3 ದಿನ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಮಾಹಿತಿ
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ನಿಮಗೆ ಮಾಹಿತಿ ಕೊರತೆ ಇದೆ ಪೊಲೀಸರು ತಪ್ಪು ಮಾಡದವರನ್ನ ಕರೆದುಕೊಂಡು ಬರೋದಿಲ್ಲ ಎಂದಿದ್ದಾರೆ. ಈ ವೇಳೆ ನನ್ನನ್ನ ಜೈಲಿಗೆ ಹಾಕ್ತಾರಾ..? ಅಲ್ಲಿ ಫೆಸಿಲಿಟಿಸ್ ಹೇಗಿದೆ ಎಂದು ಸೋನು ಶ್ರೀನಿವಾಸ್ ಗೌಡ ಕೇಳಿದ್ದಾರೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಮಗು ಪಡೆದುಕೊಂಡಿರುವ ಬಗ್ಗೆ ಸೋನು ತನ್ನ ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಜೊತೆಗೆ ಮಗುವನ್ನು ದತ್ತು ಪಡೆಯುವ ಪ್ರಕ್ರಿಯೆಗೆ ಮೂರು ತಿಂಗಳಾಗುತ್ತೆ. ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಹೇಳಿಕೊಂಡಿದ್ದು, ಮಗುವಿನ ಪೋಷಕರ ಜೊತೆಗೆ ಮಾತನಾಡಿರುವ ದೂರವಾಣಿ ಕರೆಯ ರೆಕಾರ್ಡ್ ಅನ್ನು ಹಂಚಿಕೊಂಡಿದ್ದರು.
ಈ ಸಂಬಂಧ ದೂರುದಾರೆ ಗೀತಾ ಹೇಳಿಕೆ ನೀಡಿದ್ದು, ನಾನೇ ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದೇವೆ. ಸೋನು ಶ್ರೀನಿವಾಸ್ ಗೌಡ ಮಗು ಬಗ್ಗೆ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹರಿ ಬಿಟ್ಟಿದ್ದರು. ಅವರ ಅಡ್ರೆಸ್ ಗೊತ್ತಿರಲಿಲ್ಲ ತಿಳಿದ ನಂತರ ಠಾಣೆಗೆ ದೂರು ನೀಡಿದ್ದೇವೆ. CARA ಹಾಗೂ SARA ಪೋರ್ಟ್ ನಲ್ಲಿ ಅಪ್ಲೈ ಮಾಡಿಲ್ಲ. ಜೆ ಜೆ ಆ್ಯಕ್ಟ್ ನ 74 ಅಡಿ ಮಗುವನ್ನ ತೋರಿಸುವಂತಿಲ್ಲ. ಹೀಗಾಗಿ ನಾವು ಆ್ಯಕ್ಷನ್ ತೆಗೊಂಡಿದ್ದೀವಿ. ಮಗುವನ್ನ ನೇರವಾಗಿ ಪೊಷಕರಿಂದ ತೆಗೊಳ್ಳುವಂತಿಲ್ಲ. ಮಗುವನ್ನ ಸಾಕಲು ಸಾಧ್ಯವಾಗದಿದ್ದರೆ CWC ಅಲ್ಲಿ ಬಿಡಬೇಕಾಗುತ್ತೆ. ನೇರವಾಗಿ ಮಗುವನ್ನ ದತ್ತು ಕೊಡುವಂತಿಲ್ಲ. ಮಗುವನ್ನ ದತ್ತು ಪಡೆದುಕೊಳ್ಳುವವರ ಹಿನ್ನೆಲೆ ನೋಡಬೇಕಾಗುತ್ತೆ. ಮಗುವಿನ ಭವಿಷ್ಯದ ದೃಷ್ಟಿಯಿಂದ ನಾವು ಕ್ರಮಗಳನ್ನ ಕೈಗೊಳ್ಳಬೇಕಾಗತ್ತೆ. 8 ವರ್ಷ ಇದ್ರೆ 23 ವರ್ಷ ಆಗುವವರೆಗೂ ನೋಡಿಕೊಳ್ತಾರಾ ಅನ್ನೋದು ನೋಡಬೇಕಾಗಿದೆ.
ಇನ್ನು ಸೋನು ಗೌಡರು ಮದುವೆಯಾಗಿಲ್ಲ. 23 ವರ್ಷ ಆಗಿರುವ ಸೋನು ಗೌಡ 2-3 ಮೂರು ವರ್ಷದ ಮಗು ದತ್ತು ಪಡೆಯಬಹುದು. ಮಗು ದತ್ತು ಪಡೆಯುವವರು 25 ವರ್ಷಗಳ ಅಂತರವಿರಬೇಕು. ಸದ್ಯ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.