ಲಕ್ಷ್ಮೀ ನಿವಾಸ ಸೀರಿಯಲ್ ಭಾವನಾ ಪಾತ್ರಕ್ಕೆ ಬಂದ್ರು ಛಾಯಾ ಸಿಂಗ್; ಪ್ರೋಮೋ ರಿಲೀಸ್ 

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಪಾತ್ರಕ್ಕೆ ಛಾಯಾ ಸಿಂಗ್ ಬಂದಿದ್ದಾರೆ. ಈ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು, ನಟಿ ಛಾಯಾ ಸಿಂಗ್ ಹೊಸ ರೋಲ್‌ನಲ್ಲಿ ಮುದ್ದಾಗಿ ಕಂಡಿದ್ದಾರೆ.

Chaya Singh to play Bhavana role in getti melam serial promo released mrq

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿ ಕನ್ನಡ ಪ್ರತಿಯೊಂದು ಮನೆಯನ್ನು ತಲುಪಿದೆ. ಹಲವು ಕಥೆಗಳ ಸಂಗಮವಾಗಿರುವ ಲಕ್ಷ್ಮೀ ನಿವಾಸ ತುಂಬು ಕುಟುಂಬದ ಸುಂದರ ಸಾಮಾಜಿಕ ಕಥಾ ಹಂದರವುಳ್ಳ ಸೀರಿಯಲ್. ಇಲ್ಲಿಯ ಪ್ರತಿಯೊಂದು ಪಾತ್ರಗಳು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಐದು ಮಕ್ಕಳ ಪೋಷಕರಾಗಿರುವ ಲಕ್ಷ್ಮೀ ಮತ್ತು ಶ್ರೀನಿವಾಸ ದಂಪತಿಗೆ ಸುಂದರವಾದ ಮನೆ ಕಟ್ಟಬೇಕು ಅನ್ನೋದು ಕನಸು. ಇದರ ಜೊತೆಯಲ್ಲಿಯೇ ಮೂರು ಹೆಣ್ಣು ಮಕ್ಕಳ ಮದುವೆ ಜವಾಬ್ದಾರಿಯೂ ಲಕ್ಷ್ಮೀ-ಶ್ರೀನಿವಾಸ ದಂಪತಿ ಮೇಲಿರುತ್ತದೆ. ಈಗಾಗಲೇ ಕನ್ನಡದಲ್ಲಿ 400ಕ್ಕೂ ಅಧಿಕ ಸಂಚಿಕೆ ಪ್ರಸಾರಗೊಂಡಿರುವ ಧಾರಾವಾಹಿ, ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿದಿನ ರಾತ್ರಿ 8 ರಿಂದ 9 ಗಂಟೆಗೆ ಪ್ರಸಾರವಾಗುತ್ತಿದೆ.

400ಕ್ಕೂ ಅಧಿಕ ಸಂಚಿಕೆ ಪ್ರಸಾರವಾಗಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇದುವರೆಗೂ ಕೇವಲ ಎರಡು ಪಾತ್ರಗಳ ಬದಲಾವಣೆಯಾಗಿದೆ. ಧಾರಾವಾಹಿ ಆರಂಭವಾದ ಕೆಲವೇ ದಿನಗಳಲ್ಲಿ ಸಿಂಚನ ಪಾತ್ರಕ್ಕೆ ಬೇರೆ ಕಲಾವಿದರ ಆಗಮನವಾಯ್ತು. ಇತ್ತೀಚೆಗಷ್ಟೇ ಖುಷಿಯಾಗಿ ನಟಿಸುತ್ತಿದ್ದ ಮಗು ಸಹ ಬದಲಾಗಿದೆ. 

ಇದನ್ನೂ ಓದಿ:ವೆಂಕಿ ಮಾತು ಕಳ್ಕೊಂಡಿದ್ದು ಸೈಕೋ ಜಯಂತ್‌ನಿಂದನ? ನಿಜಕ್ಕೂ ಅಲ್ಲೇನು ನಡೆದಿರಬಹುದು?

ಕನ್ನಡದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡ ಹಿನ್ನೆಲೆ ಧಾರಾವಾಹಿಯನ್ನು ಇತರೆ ಭಾಷೆಗಳಿಗೂ ರಿಮೇಕ್ ಮಾಡಲಾಗುತ್ತಿದೆ. ಎರಡು ದಿನಗಳ ಹಿಂದೆಯುಷ್ಟೇ ಜೀ ತಮಿಳು ವಾಹಿನಿಯಲ್ಲಿ ಧಾರಾವಾಹಿಯ ಪ್ರೋಮೋ ಬಿಡುಗಡೆ ಮಾಡಿದೆ. ಕನ್ನಡದ ರೀತಿಯಲ್ಲಿಯೇ ಈ ಪ್ರೋಮೋ ಸಹ ಬಿಡುಗಡೆಗೊಳಿಸಲಾಗಿದೆ. 

ಜೀ ತಮಿಳು ವಾಹಿನಿ ಈ ಧಾರಾವಾಹಿಗೆ 'ಗಟ್ಟಿಮೇಲಂ' ಎಂದು ಹೆಸರಿಡಲಾಗಿದೆ. ಈ ಧಾರಾವಾಹಿಯಲ್ಲಿರುವ ಪಾತ್ರಗಳನ್ನು ಸಹ ಪ್ರಕಟಿಸಲಾಗಿದೆ. ಧಾರಾವಾಹಿಯಲ್ಲಿ ಲಕ್ಷ್ಮೀ, ಶಿವರಮನ್, ತುಳಸಿ, ವೆತ್ರಿ, ಮಹೇಶ್, ಅಂಜಲಿ ಪಾತ್ರಗಳಲ್ಲಿವೆ. ಈಗಾಗಲೇ ನೆಟ್ಟಿಗರು ಇದು ಕನ್ನಡದ ಲಕ್ಷ್ಮೀ ನಿವಾಸದ ರಿಮೇಕ್ ಆಗಿದೆ ಎಂದು ಕಮೆಂಟ್ ಮಾಡಲಾರಂಭಿಸಿದ್ದಾರೆ. 

ಇದನ್ನೂ ಓದಿ: ಅಮೃತಧಾರೆ ಚಿತ್ರೀಕರಣದಲ್ಲಿ ಏನಾಯ್ತು ನೋಡಿ: ವೈರಲ್ ಆಯ್ತು ವಿಡಿಯೋ

ಭಾವನಾ ಪಾತ್ರದಲ್ಲಿ ಛಾಯ್ ಸಿಂಗ್
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಆಗಿ ದಿಶಾ ಮದನ್ ನಟಿಸಿದ್ದು, ಪಾತ್ರಕ್ಕೆ ಜೀವ ತುಂಬಿದ್ದಾರೆ. ತಮಿಳಿನ ರಿಮೇಕ್ ಧಾರಾವಾಹಿಯಲ್ಲಿ ಛಾಯಾ ಸಿಂಗ್ ನಟಿಸುತ್ತಿರೋದು ಖಚಿತವಾಗಿದೆ. ಈಗಾಗಲೇ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಆಗಿ ಛಾಯಾ ಸಿಂಗ್ ನಟಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios