ಏಕಾಏಕಿ ನಾಯಿಯಂತೆ ನಡೆದ ರುಂಡ ಇಲ್ಲದ ಅಜ್ಜಿ! ನಡುರಾತ್ರಿ ಕಂಡ ಬೆಚ್ಚಿ ಬೀಳೋ ಘಟನೆ ನೆನೆದ ನಟ ಚಂದು ಗೌಡ
ಚಿಕ್ಕಮಗಳೂರು ದಾರಿಯಲ್ಲಿ ನಡುರಾತ್ರಿ ತಾವು ಮತ್ತು ಸ್ನೇಹಿತರು ಕಂಡ ಬೆಚ್ಚಿ ಬೀಳೋ ಭಯಾನಕ ಘಟನೆಯನ್ನು ವಿವರಿಸಿದ್ದಾರೆ ಕಿರುತೆರೆ ನಟ ಚಂದು ಗೌಡ.
'ಹೆಚ್ಚಾಗಿ 2013-14ನೇ ಇಸ್ವಿ ಇರಬೇಕು. ಬೈಕ್, ಕಾರ್ ಜಾಲಿ ರೈಡ್ ಮಾಡೋದು ಎಂದ್ರೆ ಸಿಕ್ಕಾಪಟ್ಟೆ ಪ್ರೀತಿ. ನಾನು ಮತ್ತು ಫ್ರೆಂಡ್ಸ್ ಎಲ್ಲೆಂದರಲ್ಲಿ ಮಧ್ಯರಾತ್ರಿನೂ ಬೈಕ್ ಹೊಡೆದುಕೊಂಡು ಹೋಗ್ತಿದ್ವಿ. ವೀಕ್ ಡೇಸ್ನಲ್ಲಿ ಬೆಂಗಳೂರು ಸುತ್ತಿದ್ರೆ, ವೀಕ್ ಎಂಡ್ನಲ್ಲಿ ಬೇರೆ ಬೇರೆ ಊರುಗಳಿಗೆ ಹೋಗ್ತಿದ್ವಿ. ಅದೊಂದು ದಿನ ನನ್ನ ಫ್ರೆಂಡ್ ಆಶಾದೇವಪ್ಪ ಕಾರಿನ ರ್ಯಾಲಿಗೆ ಅಂತ ಹೊಸ ಕಾರು ತಗೊಂಡ. ನಾವು ಫ್ರೆಂಡ್ಸ್ ಎಲ್ಲಾ ರ್ಯಾಲಿ ನೋಡಲು ಹೋಗಿದ್ವಿ. ಹೊಸ ಕಾರು ಬೇರೆ. ಹಿಂದಿನ ದಿನ ಒಂದು ರೌಂಡ್ ಹೋಗಿ ಬರೋಣ ಅಂತ ನಾನು, ನನ್ನ ಫ್ರೆಂಡ್ ಹರ್ಷ ಸೇರಿದಂತೆ ನಾಲ್ಕು ಮಂದಿ ಹೋಗಿದ್ವಿ. ಚಿಕ್ಕಮಗಳೂರಿನ ಬಳಿ ಹೋಗುವಾದ ಮಧ್ಯರಾತ್ರಿ ಆಗಿತ್ತು. ಚಿಕ್ಕಮಗಳೂರಿನ ನಾರ್ವೆ ಸಮೀಪ ಬರುವಾಗ ಮಧ್ಯರಾತ್ರಿ ಒಂದು ಗಂಟೆ ಮೇಲಾಗಿತ್ತು. ಆ ದಿನ ನೆನಪಿಸಿಕೊಂಡರೆ ಈಗಲೂ ಮೈಯೆಲ್ಲಾ ಝುಂ ಎನ್ನುತ್ತೆ....' ಎನ್ನುತ್ತಲೇ ಅಂದು ನಡೆದ ಭಯಾನಕ ಘಟನೆಯನ್ನು ತೆರೆದಿಟ್ಟಿದ್ದಾರೆ ಕಿರುತೆರೆ ನಟ ಚಂದು ಗೌಡ!
ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ತಾವು ಮತ್ತು ಸ್ನೇಹಿತರು ಕಂಡ ಆ ಭಯಾನಕ ಘಟನೆಯನ್ನು ಅವರು ವಿವರಿಸಿದ್ದಾರೆ. ಭೂತ, ಪ್ರೇತ, ಆತ್ಮ ಎಲ್ಲಾ ಕಾಣೋದು ಸುಳ್ಳು, ಅದು ನಮ್ಮ ಭ್ರಮೆ ಅಂತೆಲ್ಲಾ ಹೇಳ್ತಾರೆ. ನಾನೂ ಅದನ್ನೇ ನಂಬಿದ್ದೆ. ಸೂಪರ್ ನ್ಯಾಚುರಲ್ ಪವರ್ ಬಗ್ಗೆ ನಂಬಿಕೆ ಇರಲಿಲ್ಲ. ಅವೆಲ್ಲಾ ನಮ್ಮ ತಲೆಯಲ್ಲಿ ಇರೋದು, ಹೆಲ್ಯುಸನೇಷನ್ ಎಂದೆಲ್ಲಾ ಅಂದುಕೊಂಡವ ನಾನು. ಅಂದು ನಾನು ಕಾರಿನ ಮುಂದುಗಡೆ ಕೂತಿದ್ದೆ. ನನ್ನ ಫ್ರೆಂಡ್ ಚಾಲನೆ ಮಾಡ್ತಿದ್ದ. ಮತ್ತಿಬ್ಬರು ಹಿಂಭಾಗದಲ್ಲಿ ಇದ್ದರು. ತಮಾಷೆಗೆ ಅಂತ ಲೈಟ್ ಆನ್-ಆಫ್ ಮಾಡುತ್ತಾ, ಮಜಾ ಮಾಡಿಕೊಂಡು ಬರ್ತಾ ಇದ್ವಿ. ಆಗ ಲೈಟ್ ಆನ್ ಮಾಡಿದಾಗ ಕಾರಿನ ಎದುರು ಅಜ್ಜಿಯೊಬ್ಬರನ್ನು ಕಂಡೆವು. ನಾನೊಬ್ಬನೇ ಅಲ್ಲ, ನಾವು ನಾಲ್ಕು ಮಂದಿನೂ ಅವಳನ್ನು ನೋಡಿದ್ವಿ. ಅಂದ್ರೆ ತಲೆ ಕಾಣಿಸ್ತಾ ಇರಲಿಲ್ಲ. ಆದ್ರೆ ಮೈಯೆಲ್ಲಾ ನೋಡಿದ್ರೆ ಹಾಗೂ ಬಿಳಿಯ ಕೂದಲು ನೋಡಿದ್ರೆ ಅಜ್ಜಿ ಎನ್ನೋದು ಗೊತ್ತಾಗ್ತಿತ್ತು. ವಿಚಿತ್ರ ರೀತಿಯಲ್ಲಿ ಪ್ಯಾಚ್ ಪ್ಯಾಚ್ ಸೀರೆ ಉಟ್ಟಿಕೊಂಡಿದ್ಲು. ಅಲ್ಲಿಯವರೆಗೆ ಕಿರುಚ್ತಾ ಇದ್ದ ನಾವು ಸೈಲೆಂಟ್ ಆದ್ವಿ. ಅಜ್ಜಿ ರಸ್ತೆ ದಾಟಲಿ ಎಂದು ಕಾಯುತ್ತಿದ್ವಿ.
ಧಾರವಾಡದ ಯುವತಿ ದೇಹ ಹೊಕ್ಕ ಎಂಟು ಆತ್ಮ: ಕೂದಲು ಒರೆಸುವಾಗ ನಡೆದ ಭಯಾನಕ ಘಟನೆ ವಿವರಿಸಿದ ಘೋಸ್ಟ್ ಹಂಟರ್
ಇತ್ತ ಕಡೆಯಿಂದ ಅಜ್ಜಿ ಅತ್ತ ಕಡೆ ಹೋದಳು. ಆರಂಭದಲ್ಲಿ ಎರಡು ಕಾಲಿನಲ್ಲಿಯೇ ನಡೆದುಕೊಂಡು ಹೋಗ್ತಾ ಇದ್ದಳು. ಆಮೇಲೆ ನಡೆಯಲು ಕೈಯನ್ನೂ ಬಳಸಿಕೊಂಡಳು. ಅಂದ್ರೆ ನಾಯಿಯ ರೂಪದಲ್ಲಿ ನಡೆಯಲು ಶುರು ಮಾಡಿದ್ಲು. ಅಲ್ಲಿಯವರೆಗೆ ಯಾರೋ ಸಾಮಾನ್ಯ ಅಜ್ಜಿ ಇರಬೇಕು ಎಂದುಕೊಂಡ ನಮಗೆ ಭಯ ಆಗೋಕೆ ಶುರುವಾಯ್ತು. ಎಲ್ಲರೂ ಬೆಚ್ಚಿ ಬಿದ್ವಿ. ಅತ್ತ ಕಡೆ ದೊಡ್ಡ ಕಾಂಪೌಂಡ್ ಇತ್ತು. ಬಹಳ ದೊಡ್ಡ ಕಾಂಪೌಂಡ್ ಅದು. ಅದನ್ನು ಸಲೀಸಾಗಿ ನಾಲ್ಕು ಕಾಲುಗಳಿಂದ ಏರಿ ಮೇಲೆ ಹೋಗಿ ನಿಂತಳು. ಇದನ್ನು ನೋಡಿ ಮತ್ತಷ್ಟು ಬೆಚ್ಚಿಬಿದ್ದ ನಾವು, ಅಲ್ಲಿಂದ ಸ್ಪೀಡ್ ಆಗಿ ಕಾರು ಓಡಿಸಿಕೊಂಡು ನಾವಿದ್ದ ಹೋಮ್ಸ್ಟೇಗೆ ಬಂದ್ವಿ. ಅದನ್ನು ಎಷ್ಟು ವರ್ಷವಾದ್ರೂ ನಾವ್ಯಾರೂ ಮರೆಯಲು ಸಾಧ್ಯವೇ ಇಲ್ಲ. ಅದೇ ಜಾಗದಲ್ಲಿ ಹಲವರಿಗೆ ಇದೇ ಅನುಭವ ಆಗಿದೆ ಎನ್ನುವ ವಿಷಯವೂ ಆಮೇಲೆ ಗೊತ್ತಾಯಿತು ಎಂದಿದ್ದಾರೆ ನಟ.
ಅಷ್ಟಕ್ಕೂ ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಆದರೆ ಇಂಥ ಘಟನೆಗಳನ್ನು ಕೇಳಿದಾಗ ಮಾತ್ರ ಮೈ ಝುಂ ಎನ್ನುವುದಂತೂ ದಿಟ.
ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್ ಹಂಟರ್ ಇಮ್ರಾನ್ ಹೇಳಿದ್ದೇನು?