ಸೋನಿಲಿ ಟಿವಿಯಲ್ಲಿ ಜನವರಿ 27ರಿಂದ ಸೆಲೆಬ್ರಿಟಿ ಮಾಸ್ಟರ್‌ಚೆಫ್ ಇಂಡಿಯಾ ಆರಂಭವಾಗಿದೆ. ರಣವೀರ್ ಬ್ರಾರ್, ವಿಕಾಸ್ ಖನ್ನಾ ಮತ್ತು ಫರಾ ಖಾನ್ ತೀರ್ಪುಗಾರರು. ಗೌರವ್ ಖನ್ನಾ, ತೇಜಸ್ವಿ ಪ್ರಕಾಶ್, ದೀಪಿಕಾ ಕಾಕರ್ ಸೇರಿದಂತೆ ಹಲವು ಖ್ಯಾತನಾಮರು ಸ್ಪರ್ಧಿಗಳಾಗಿದ್ದಾರೆ. ತೇಜಸ್ವಿಗೆ ವಾರಕ್ಕೆ 3 ಲಕ್ಷ ಸಂಭಾವನೆ ಎನ್ನಲಾಗಿದೆ. ರಾತ್ರಿ 8ಕ್ಕೆ ಪ್ರಸಾರವಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಿಯಾಲಿಟಿ ಟಿವಿ ಶೋ ಮಾಸ್ಟರ್‌ಚೆಫ್ ಇಂಡಿಯಾ (Reality TV show MasterChef India )ದ ಹೊಸ ಸೀಸನ್ ಸೋನಿಲಿ ಟಿವಿ (Sonili TV)ಯಲ್ಲಿ ಮತ್ತೆ ಶುರುವಾಗಿದೆ. ಇದೇ ಜನವರಿ 27ರಿಂದ ರಿಯಾಲಿಟಿ ಶೋ ಆರಂಭವಾಗಿದೆ. ಪ್ರತಿ ಬಾರಿ ಅಡುಗೆ ಆಧಾರಿತ ಈ ಮಾಸ್ಟರ್ ಚೆಫ್ ರಿಯಾಲಿಟಿ ಶೋಗೆ ಸ್ಪರ್ಧಿಗಳಾಗಿ ಜನಸಾಮಾನ್ಯರು ಬರ್ತಾ ಇದ್ರು. ಆದ್ರೆ ಈ ಬಾರಿ ಶೋ ಸ್ವಲ್ಪ ವಿಶೇಷತೆ ಪಡೆದಿದೆ. ಮಾಸ್ಟರ್ ಚೆಫ್ ಇಂಡಿಯಾದಲ್ಲಿ ಈ ಬಾರಿ ಸೆಲೆಬ್ರಿಟಿ (Celebrity)ಗಳು ಕಾಣಿಸಿಕೊಂಡಿದ್ದಾರೆ. ತೆರೆಯ ಮೇಲೆ ಮಿಂಚುವ ಕಲಾವಿದರಿಗೆ ಅಡುಗೆ ಮಾಡಲು ಅವಕಾಶ ನೀಡಲಾಗಿದೆ. ತಮ್ಮ ಕೈರುಚಿ ತೋರಿಸ್ತಾ, ಪ್ರಶಸ್ತಿ ಬಾಚಿಕೊಳ್ಳಲು ಕಲಾವಿದರು ಸಿದ್ಧರಾಗಿದ್ದಾರೆ. 

ಸೆಲೆಬ್ರಿಟಿ ಮಾಸ್ಟರ್ ಚೆಫ್ ಶೋಗೆ ಪ್ರಸಿದ್ಧ ಚೆಫ್ ರಣವೀರ್ ಬ್ರಾರ್ ಮತ್ತು ವಿಕಾಸ್ ಖನ್ನಾ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಖ್ಯಾತ ನೃತ್ಯ ನಿರ್ದೇಶಕಿ ಫರಾ ಖಾನ್ (famous choreographer Farah Khan) ಕೂಡ ಶೋನಲ್ಲಿ ಜಡ್ಜ್ ಜವಾಬ್ದಾರಿ ಹೊತ್ತಿದ್ದಾರೆ. ಸ್ಪರ್ಧಿಗಳಾಗಿ ಗೌರವ್ ಖನ್ನಾ, ತೇಜಸ್ವಿ ಪ್ರಕಾಶ್, ದೀಪಿಕಾ ಕಾಕರ್, ರಾಜೀವ್ ಅದಾಟಿಯಾ, ನಿಕ್ಕಿ ತಂಬೋಲಿ, ಅರ್ಚನಾ ಗೌತಮ್, ಫೈಜಲ್ ಶೇಖ್ ಅಕಾ ಮಿಸ್ಟರ್ ಫೈಸು, ಉಷಾ ನಾಡಕರ್ಣಿ, ಕಬಿತಾ ಸಿಂಗ್, ಚಂದನ್ ಪ್ರಭಾಕರ್ ಮತ್ತು ಅಭಿಜೀತ್ ಸಾವಂತ್ ಮುಂತಾದ ಟಿವಿಯ ಪ್ರಸಿದ್ಧ ಮುಖಗಳು ಕಾಣಿಸಿಕೊಂಡಿವೆ. 

ʼತ್ರಿವಿಕ್ರಮ್‌ ಜೊತೆ ತನ್ನ ಅಕ್ಕ ದಿವ್ಯಾ ಗೌಡ ಮದುವೆ ಮಾಡಿಸೋಣ ಅಂತ Bigg Boss ಮನೇಲಿ ಮಾತಾಡಿದ್ದೆʼ: ಭವ್ಯಾ ಗೌಡ!

ಸೆಲೆಬ್ರಿಟಿಗಳಿಗೆ ಸಿಗ್ತಿರುವ ಸಂಭಾವನೆ ಎಷ್ಟು? : ಸೆಲೆಬ್ರಿಟಿ ಚೆಫ್ ಗಳಿಗೆ ಚಾನೆಲ್ ಸಂಭಾವನೆ ಕೊಡ್ತಿದೆ. ಅಡುಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ತಿರುವ ಕಲಾವಿರದು ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ. ತೇಜಸ್ವಿ ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿಯಾಗಿದ್ದಾರೆ. ಅವರಿಗೆ ಶೋ ನಿರ್ಮಾಪಕರು ವಾರಕ್ಕೆ 3 ಲಕ್ಷ ರೂಪಾಯಿ ನೀಡ್ತಿದ್ದಾರೆ ಎಂಬ ಸುದ್ದಿ ಇದೆ. ಅತಿ ಹೆಚ್ಚು ಸಂಭಾವನೆ ಪಡೆಯುವ ಎರಡನೇ ಸ್ಪರ್ಧಿ ಅನುಪಮಾ ಸೀರಿಯಲ್ ನಟ ಗೌರವ್ ಖನ್ನಾ. ಅವರಿಗೆ ವಾರಕ್ಕೆ 2.5 ಲಕ್ಷ ರೂಪಾಯಿ ನೀಡಲಾಗ್ತಿದೆ. ಸಸುರಾಲ್ ಸಿಮರ್ ಕಾ ನಟಿ ದೀಪಿಕಾ ವಾರಕ್ಕೆ 2.3 ಲಕ್ಷ ರೂಪಾಯಿ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಸೋಷಿಯಲ್‌ ಮಿಡಿಯಾ ಇನ್ಫ್ಲುಯೆನ್ಸರ್ ಶ್ರೀ ಫೈಸು ವಾರಕ್ಕೆ 2 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ. ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ನಿಕ್ಕಿ ತಂಬೋಲಿಗೆ 1.5 ಲಕ್ಷ ರೂಪಾಯಿ ಸಿಗ್ತಿದೆ. 

ಬಿಗ್​ಬಾಸ್​ ಎಂದ್ರೆ ಸ್ಕ್ರಿಪ್ಟೆಡ್ಡಾ? ಹೇಗೆ ಜಗಳ ಕ್ರಿಯೇಟ್​ ಮಾಡಿಸ್ತಾರೆ? ಎಲ್ಲಾ ಗುಟ್ಟು ರಿವೀಲ್​

ಮಾಸ್ಟರ್‌ಚೆಫ್ ಇಂಡಿಯಾ ಸೋನಿ ಲಿ ಚಾನೆಲ್ ನಲ್ಲಿ ಸೋಮವಾರಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗ್ತಿದೆ. ಈಗಾಗಲೇ ಶೋ ಶುರುವಾಗಿ ಮೂರು ದಿನ ಕಳೆದಿದ್ದು, ಶೋಗೆ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ. ಸೆಲೆಬ್ರಿಟಿ ಮಾಸ್ಟರ್ ಚೆಫ್ ಕಾರ್ಯಕ್ರಮದ ಅತ್ಯಂತ ಕಿರಿಯ ಸ್ಪರ್ಧಿ ನಿಕ್ಕಿ, ತನ್ನ ಅಡುಗೆಯ ಮೂಲಕ ಜಡ್ಜ್ ಮನಸ್ಸು ಗೆದ್ದಿದ್ದಾರೆ. ಕಾರ್ಯಕ್ರಮದ ಮೊದಲ ದಿನದಂದು, ಜಡ್ಜ್ ಚಮಚದಿಂದ ಟೇಬಲ್ ತಟ್ಟಿದ್ದಾರೆ. ಸ್ಪೂನ್ ಪ್ಯಾಟಿಂಗ್ ಎಂದರೆ ಸ್ಪರ್ಧಿಗಳ ಆಹಾರವನ್ನು ಶ್ಲಾಘಿಸುವ ಒಂದು ಮಾರ್ಗವಾಗಿದೆ. ಎಲ್ಲ ಸೆಲೆಬ್ರಿಟಿ ಸ್ಪರ್ಧಿಗಳು ಸೇರಿ ಮೊದಲ ಶೋ ವೀಕ್ಷಣೆ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ. ಈ ಬಾರಿ ಸೆಲೆಬ್ರಿಟಿ ಮಾಸ್ಟರ್ ಚೆಫ್ ಶೋನಲ್ಲಿ ಯಾರು ವಿನ್ ಆಗ್ತಾರೆ ಎಂಬುದನ್ನು ಕಾದು ನೋಡ್ಬೇಕಿದೆ. ಮಾಸ್ಟರ್ ಚೆಫ್ ಮೊದಲ ಶೋ 2010ರಲ್ಲಿ ಪ್ರಸಾರವಾಯ್ತು.