ಡಿವೋರ್ಸ್ ತೆಗೆದುಕೊಳ್ಳುವ ಮಾತಾಡಿದ ಅಂಕಿತಾ; ವಿಕ್ಕಿ ಬಗ್ಗೆ ಅನುಕಂಪ ತೋರಿದ್ರಾ ಮುನಾವರ್!
ಪವಿತ್ರ ರಿಷ್ತ ಧಾರಾವಾಹಿ ಮೂಲಕ ಫೇಮಸ್ ಆಗಿರುವ ನಟಿ ಅಂಕಿತಾ ಲೋಖಂಡೆ ಹಾಗು ಆಕೆಯ ಗಂಡ ವಿಕ್ಕಿ ಜೈನ್ ಬಿಗ್ ಬಾಸ್ ಮನೆಯ ಸ್ಪರ್ಧಿಗಳಾಗಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಶೋನ 17ನೇ ಸೀಸನ್‌ನಲ್ಲಿ ಸ್ಪರ್ಧಿಗಳಾಗಿರುವ ಅಂಕಿತಾ ಲೋಖಂಡೆ ಹಾಗು ವಿಕ್ಕಿ ಜೈನ್ ಸಿಕ್ಕಾಪಟ್ಟೆ ಕಿತ್ತಾಟ ನಡೆಸಿದ್ದಾರೆ. ಹಿಂದಿ ಬಿಗ್ ಬಾಸ್ ಸೀಸನ್‌ನಲ್ಲಿ ಎರಡು ವಿವಾಹಿತ ಜೋಡಿಗಳಿದ್ದು, ಈಗವರು ವಿವಾಹಿತ ಜೋಡಿ ಎನ್ನುವ ಬದಲು ವಿವಾದಿತ ಜೋಡಿ ಎನ್ನವಂತೆ ಆಡುತ್ತಿದ್ದಾರೆ. ಇತ್ತೀಚೆಗಂತೂ ಅಂಕಿತಾ-ವಿಕ್ಕಿ ಜೋಡಿ ಅದೆಷ್ಟು ಕಿತ್ತಾಟ ನಡೆಸುತ್ತಿದ್ದಾರೆ ಎಂದರೆ, ಗಂಡ-ಹೆಂಡತಿ ಅಷ್ಟು ಕಿತ್ತಾಟ ನಡೆಸಲು ಸಾಧ್ಯವೇ, ಇದೆಲ್ಲ ನಾಟಕ, ಫೇಕ್ ಅಂತೆಲ್ಲ ಬಿಗ್ ಬಾಸ್ ಹಿಂದಿ ಪ್ರಿಯರು ಮಾತನಾಡಿಕೊಳ್ಳುವಂತಾಗಿದೆ.
ಪವಿತ್ರ ರಿಷ್ತ ಧಾರಾವಾಹಿ ಮೂಲಕ ಫೇಮಸ್ ಆಗಿರುವ ನಟಿ ಅಂಕಿತಾ ಲೋಖಂಡೆ ಹಾಗು ಆಕೆಯ ಗಂಡ ವಿಕ್ಕಿ ಜೈನ್ ಬಿಗ್ ಬಾಸ್ ಮನೆಯ ಸ್ಪರ್ಧಿಗಳಾಗಿದ್ದಾರೆ. ಈ ಹದಿನೇಳನೇ ಸೀಸನ್‌ನಲ್ಲಿ ಕಿತ್ತಾಟದ ಮೂಲಕವೇ ಫೇಮಸ್ ಆಗಿರುವ ಈ ಜೋಡಿ, ಇದೀಗ ಡಿವೋರ್ಸ್ ಮಾತುಕತೆ ಹಂತದವರೆಗೂ ಹೋಗಿದ್ದಾರೆ. ಈ ಶೋನಲ್ಲಿ ಏನಾಗಬಾರದು ಅಂದುಕೊಂಡಿದ್ದೇವೋ ಅದೇ ಆಗುತ್ತಿದೆ ಎಂದು ಪ್ರೇಕ್ಷಕರು ಮಾತನಾಡಿಕೊಳ್ಳುವಂತೆ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಕೋರ್ಟ್ ಸೆಟ್ ಹಾಕಲಾಗಿತ್ತು. ಅದರಲ್ಲಿ ಅಂಕಿತಾ ಲೋಖಂಡೆ ಹಾಗೂ ಮುನಾವರ್ ಫಾರೂಕಿ ಅವರನ್ನು ವಕೀಲರನ್ನಾಗಿ ನೇಮಿಸಲಾಗಿತ್ತು.
ಈ ಸಮಯದಲ್ಲಿ ಅಂಕಿತಾ ಲೋಖಂಡೆ (Ankita Lokhande) ಹಾಗೂ ಮುನಾವರ್ ಫಾರೂಕಿ (Munawar Faruqui) ಇಬ್ಬರೂ ವಿಕ್ಕಿ ಜೈನ್ (Vicky Jain) ಅವರ ವಿರುದ್ಧ ಹರಿಹಾಯ್ದರು. ಈ ಟಾಸ್ಕ್ ಪ್ರಕಾರ ಸ್ಪರ್ಧಿಗಳ ವಿಚಾರಣೆ ಮಾಡಬೇಕು, ಟಾಸ್ಕ್ ಪ್ರಾರಂಭವಾಗುವ ಮೊದಲು ಶುಲ್ಕದ ಬಗ್ಗೆ ಚರ್ಚಿಸಬೇಕು ಎಂದು ವಿಕ್ಕಿಗೆ ಬಿಗ್ ಬಾಸ್ ಹೇಳಿದ್ದರು. ಆದರೆ, ವಿಕ್ಕಿ ಅಂಕಿತಾ ಜತೆ ಚರ್ಚಿಸುವುದು ಹಾಗಿರಲಿ, ಅಂಕಿತಾ ವಿರುದ್ಧ ಸಿಕ್ಕಾಪಟ್ಟೆ ಹರಿಹಾಯ್ದರು. ಕೊನೆಗೂ ಅವರು ಶುಲ್ಕದ ಬಗ್ಗೆ ಚರ್ಚಿಸಲು ಹಿಂದೇಟು ಹಾಕಿದರು. ಬಳಿಕ, ವಿಚಾರಿಸಿದಾಗ ವಿಕ್ಕಿ ಅಂಕಿತಾಗೆ ಶುಲ್ಕದ ವಿಷಯದಲ್ಲಿ ನಿರಂತರವಾಗಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಇಷ್ಟಾಗಿದ್ದೇ ತಡ, ಅಂಕಿತಾ ಲೋಖಂಡೆ ವಿಕ್ಕಿ ವಿರುದ್ಧ ಸಿಟ್ಟಿಗೆದ್ದು ಹರಿಹಾಯ್ದರು. ಕೊನೆಕೊನೆಗೆ ಅವರಿಬ್ಬರ ಜಗಳ ಅದೆಷ್ಟು ತಾರಕಕ್ಕೆ ಹೋಯಿತು ಎಂದರೆ, ಅಂಕಿತಾ ವಿಕ್ಕಿಗೆ 'ನನ್ನ ಜತೆ ಇದೆಲ್ಲಾ ಮಾಡಬೇಡ ನೀನು, ನೀನು ಇಂಥದ್ದನ್ನು ಬಿಡದಿದ್ದರೆ ನಮ್ಮಿಬ್ಬರ ವಿಚ್ಚೇದನ ಪ್ರಕ್ರಿಯೆ ಇಲ್ಲಿಂದಲೇ ಪ್ರಾರಂಭವಾಗುತ್ತದೆ' ಎಂದಿದ್ದಾರೆ. ಅದನ್ನು ಕೇಳಿ ಮಿಕ್ಕ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಏನಾಗಬಾರದು ಅಂದುಕೊಂಡಿದ್ದೇವೋ ಅದೇ ಆಗೋ ತರಹ ಇದೆ ಎಂದು ಕಂಗಾಲಾಗಿದ್ದಾರೆ. ಮುನಾವರ್ ಅವರಂತೂ ಅಂಕಿತಾಗೆ ನೀವು ತುಂಬಾ ಮುಂದುವರೆದು ಮಾತನಾಡುತ್ತಿದ್ದೀರಿ ಎಂದು ಕ್ಲಾಸ್ ತೆಗೆದುಕೊಂಡರು.