"ಬಾಯ್ಸ್‌ v/s ಗರ್ಲ್ಸ್‌" ಶೋನಲ್ಲಿ ನಿವೇದಿತಾ ಗೌಡ ತಮ್ಮ ತಂದೆಯ ಬಗ್ಗೆ ಭಾವುಕರಾಗಿ ಮಾತನಾಡಿದರು. ಜೀವನದಲ್ಲಿ ಕಷ್ಟ ಬಂದಾಗ ತಂದೆ ಬೆಂಬಲ ನೀಡಿದ್ದನ್ನು ನೆನೆದರು. ಕಾರ್ಯಕ್ರಮದಲ್ಲಿ ಅದಿತಿ ಪ್ರಭುದೇವ ಮತ್ತು ನೆನಪಿರಲಿ ಪ್ರೇಮ್ ಅತಿಥಿಗಳಾಗಿದ್ದರು. ತಂದೆ-ಮಗಳ ಬಾಂಧವ್ಯದ ಹಾಡಿಗೆ ಎಲ್ಲರೂ ಭಾವುಕರಾದರು. ಚಂದನ್ ಶೆಟ್ಟಿ ಜೊತೆಗಿನ ಪ್ರೇಮ ವಿವಾಹ ಮತ್ತು ವಿಚ್ಛೇದನದ ನಂತರದ ಸಿನಿಮಾ ಕೆಲಸಗಳ ಬಗ್ಗೆಯೂ ಮಾಹಿತಿ ನೀಡಿದರು.

‘ನನ್ನ ಜೀವನದಲ್ಲಿ ಏನೇನೋ ಆಯ್ತು, ಆಗ ನನ್ನ ಜೊತೆ ನಿಂತಿದ್ದು ಅಪ್ಪʼ ಎಂದು ʼಬಾಯ್ಸ್‌ v/s ಗರ್ಲ್ಸ್ʼ‌ ಶೋನಲ್ಲಿ ನಿವೇದಿತಾ ಗೌಡ ಅವರು ಹೇಳಿಕೊಂಡಿದ್ದಾರೆ. ಹೌದು, ಸದಾ ಸೋಶಿಯಲ್‌ ಮೀಡಿಯಾದಲ್ಲಿ ಬೋಲ್ಡ್‌ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಸಂಚಲನ ಮೂಡಿಸೋ ನಿವೇದಿತಾ ಗೌಡ ಈ ಬಾರಿ ರಿಯಾಲಿಟಿ ಶೋ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. 

ವಿಶೇಷ ಅತಿಥಿಗಳ ಆಗಮನ! 
ʼಬಾಯ್ಸ್‌ v/s ಗರ್ಲ್ಸ್ʼ‌ ಶೋನಲ್ಲಿ ಅದಿತಿ ಪ್ರಭುದೇವ, ನೆನಪಿರಲಿ ಪ್ರೇಮ್‌ ಅವರು ಅತಿಥಿಗಳಾಗಿದ್ದರು. ಅಂದಹಾಗೆ ವಿನಯ್‌ ಗೌಡ ಅವರು ಗೈರು ಹಾಕಿದಂತೆ ಮೇಲ್ನೋಟಕ್ಕೆ ಕಾಣ್ತಿದೆ. 

ವಾವ್! ಸೀರೆಲಿ ಎಷ್ಟು ಮುದ್ದು ಮುದ್ದಾಗಿ ಕಾಣಿಸ್ತಿದ್ದಾರೆ ನಿವೇದಿತಾ ಗೌಡ

ಪ್ರೇಮ್‌ ಹೇಳಿದ್ದೇನು ?
“ಪ್ರಪಂಚದಲ್ಲಿ ತಂದೆ ಎನ್ನೋ ಜೀವನೇ ಹಾಗೆ. ವಿಶೇಷವಾಗಿ ಹೆಣ್ಣು ಮಕ್ಕಳು ಏನಾದರೂ ಕೇಳಿದಾಗ ಜೀವ ಬಿಟ್ಟು, ಏನು ಬೇಕಿದ್ರೂ ತಂದುಕೊಡ್ತಾರೆ” ಎಂದು ನೆನಪಿರಲಿ ಸಿನಿಮಾ ಖ್ಯಾತಿಯ ಪ್ರೇಮ್‌ ಹೇಳಿದ್ದಾರೆ.

ಎಮೋಶನಲ್‌ ಆಕ್ಟ್!‌ 
ನಿವೇದಿತಾ ಗೌಡ ಹಾಗೂ ಧನರಾಜ್‌ ಆಚಾರ್‌ ಇಬ್ಬರೂ ತಂದೆ-ಮಗಳ ಬಾಂಧವ್ಯದ ಕುರಿತ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ಎಲ್ಲರೂ ಭಾವುಕರಾದರು. ಆ ವೇಳೆ ನಿವೇದಿತಾ ಗೌಡ ಆಡಿದ ಮಾತು ಇನ್ನಷ್ಟು ಎಮೋಶನಲ್‌ ಮಾಡಿತ್ತು. 

ನಿವೇದಿತಾ ಗೌಡ ಏನಂದ್ರು?
“ನನ್ನ ಲೈಫ್‌ನಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿ ಆಗಿರೋಕೆ ನನ್ನ ತಂದೆಯೇ ಕಾರಣ. ನಾನು ನಿನ್ನ ಜೊತೆಗೆ ಇದೀನಿ, ತಲೆ ಕೆಡಿಸಿಕೊಳ್ಳಬೇಡ ಅಂತ ಹೇಳ್ತಾರೆ. ಇದು ಅವರಿಗೆ ನಿಜಕ್ಕೂ ಕಷ್ಟ” ಎಂದು ನಿವೇದಿತಾ ಗೌಡ ಅವರು ಹೇಳಿದ್ದಾರೆ. ನಿವೇದಿತಾ ಮಾತು ಕೇಳಿ ಐಶ್ವರ್ಯಾ ಶಿಂಧೋಗಿ, ನಿವೇದಿತಾ ಗೌಡ, ರಜತ್‌ ಕಣ್ಣಾಲೆ ಕೂಡ ಒದ್ದೆಯಾಗಿದೆ. 

ನಿವೇದಿತಾ ಗೌಡ ರೀಲ್ಸ್ ಮಾಡ್ತಾರೆ, ಆದರೆ ಕಾಮೆಂಟ್ಸ್ ನೋಡಲ್ವಂತೆ? ಅಲ್ಲೇ ಇರೋದು ಮ್ಯಾಟರ್..

ಲವ್‌ ಮ್ಯಾರೇಜ್‌ ಮಾಡಿಕೊಂಡಿದ್ದ ಈ ಜೋಡಿ! 
ʼಬಿಗ್‌ ಬಾಸ್‌ ಕನ್ನಡ ಸೀಸನ್‌ 5ʼ ಶೋನಲ್ಲಿ ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಭಾಗವಹಿಸಿದ್ದರು. ಶೋನಲ್ಲಿ ಇವರಿಬ್ಬರ ಮಧ್ಯೆ ಸ್ನೇಹ ಇತ್ತು. ಹೊರಗಡೆ ಬಂದ ಬಳಿಕ ಈ ಜೋಡಿ ಇನ್ನಷ್ಟು ಹತ್ತಿರವಾಗಿತ್ತು. ಮೈಸೂರು ಯುವದಸರಾದಲ್ಲಿ ಎಲ್ಲರ ಮುಂದೆ ಚಂದನ್‌ ಶೆಟ್ಟಿ ಅವರು ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿದರು. ಸಾಂಸ್ಕೃತಿಕ ನಗರಿಯಲ್ಲಿ ಐತಿಹಾಸಿಕ ಯುವ ದಸರಾದಲ್ಲಿ ಪ್ರೇಮ ನಿವೇದನೆ ಮಾಡಿದರು ಅಂತ ಇದನ್ನು ಅನೇಕರು ವಿರೋಧಿಸಿದ್ದರು. ಇಷ್ಟೆಲ್ಲ ಆದ ಬಳಿಕ ಮೈಸೂರಿನಲ್ಲಿಯೇ ಈ ಜೋಡಿ ಅದ್ದೂರಿಯಾಗಿ ಮದುವೆಯಾಯಿತು. ನಟ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಸಾಕಷ್ಟು ನಟ-ನಟಿಯರು ಈ ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದರು.

ಡಿವೋರ್ಸ್‌ ಬಳಿಕವೂ ಸಿನಿಮಾ ಕೆಲಸದಲ್ಲಿ ಭಾಗಿ! 
ಇದಾದ ನಂತರದಲ್ಲಿ ಒಂದಷ್ಟು ಆಲ್ಬಮ್‌ ಸಾಂಗ್‌ಗಳಲ್ಲಿ ಇವರು ನಟಿಸಿದ್ದರು. ʼರಾಜ ರಾಣಿʼ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆ ನಂತರ ʼಮುದ್ದು ರಾಕ್ಷಸಿʼ ಎನ್ನುವ ಸಿನಿಮಾ ಕೂಡ ಮಾಡಿದ್ದರು. ಈ ಸಿನಿಮಾ ಈಗ ರಿಲೀಸ್‌ ಹಂತಕ್ಕೆ ಬಂದಿದೆ. ಡಿವೋರ್ಸ್‌ ಬಳಿಕವೂ ಈ ಜೋಡಿ ಒಟ್ಟಿಗೆ ಸಿನಿಮಾದಲ್ಲಿ ನಟಿಸಿತ್ತು. ಪ್ರೊಫೆಶನಲ್‌ ಆಗಿದ್ದಕ್ಕೆ ಇವರಿಬ್ಬರು ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದರು. 

View post on Instagram