Asianet Suvarna News Asianet Suvarna News

Rakhi Sawanth Birthday: ಅಭಿಮಾನಗಳಿ ಹೊಸ ಶಾಕ್ ನೀಡಿದ ರಾಖಿ

ಬಿಗ್ ಬಾಸ್ ಮೂಲಕ ಪಬ್ಲಿಕ್‌ನಲ್ಲಿ ಪತಿಯನ್ನು ಪರಿಚಯಿಸಿಕೊಡುತ್ತಿರುವ ರಾಖಿ. ಫೇಕ್‌ ಎಂದು ಕರೆದವರ ಬಾಯಿಗೆ ಬೀಗ ಹಾಕುವೆ ಎಂದು ರಸ್ತೆಯಲ್ಲಿಯೇ ವಾರ್ನಿಂಗ್.....
 

Bollywood Rakhi Sawant to enter Bigg boss 15th season with husband Ritesh  vcs
Author
Bangalore, First Published Nov 25, 2021, 2:30 PM IST
  • Facebook
  • Twitter
  • Whatsapp

ಹಿಂದಿ ಸಿನಿಮಾ (Bollywood)ಕ್ಷೇತ್ರದಲ್ಲಿ ಕಡಿಮೆ ಹೆಸರು ಮಾಡಿದರೂ ಕಿರುತೆರೆ ಹಾಗೂ ಪ್ಯಾಪರಾಜಿಗಳ (Paparazi) ಜೊತೆ ಕಾಣಿಸಿಕೊಂಡು ಸದಾ ಸುದ್ದಿಯಲ್ಲಿರುವ ಚೆಲುವೆ ರಾಖಿ ಸಾವಂತ್ (Rakhi Sawanth). ಅವರ ಹುಟ್ಟಿದಬ್ಬದಂದು ಮತ್ತೆ ಸುದ್ದಿಯಲ್ಲಿದ್ದಾರೆ. ಪಟಪಟ ಅಂತ ರಾಖಿ ಮಾತನಾಡಬೇಕು. ಆಗ ಸುತ್ತಮುತ್ತಲ್ಲಿರುವ ಜನರು ವೀಡಿಯೋ ಸೆರೆ ಹಿಡಿದು ವೈರಲ್ ಮಾಡುತ್ತಾರೆ. ಆರಂಭದಲ್ಲಿ ಇದರ ಬಗ್ಗೆ ಬೇಸರ ಮಾಡಿಕೊಳ್ಳುತ್ತಿದ್ದ ರಾಖಿ, ದಿನ ಕಳೆಯುತ್ತಿದ್ದಂತೆ ತನ್ನಿಂದ ಕೆಲವರ ಜೀವನ ನಡೆಯುತ್ತಿದ್ದರೆ ನಡೆಯಲಿ, ಎಂದು ಸುಮ್ಮನಾದರು. ಹೀಗೆ ರಾಖಿ ವಿಡಿಯೋ ಒಂದರಲ್ಲಿ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. 

ಕೆಲವು ವರ್ಷಗಳ ಹಿಂದೆ ರಾಖಿ ಮತ್ತು ದೀಪಕ್ (Deepak) ಮದುವೆಯಾಗಿದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಸುದ್ದಿಯೊಂದು ಹರಿದಾಡಿತ್ತು. ರಾಖಿ ಮಾಡುವ ಅವಾಂತರಕ್ಕಿಂತ ಒಂದು ಕೈ ಜಾಸ್ತಿ ಮಾಡುತ್ತಿದ್ದರು ಈ ದೀಪಕ್. ಮಾಡೆಲ್ (Model) ಎಂದು ಹೇಳಿಕೊಂಡರು. ಆನಂತರ ಆತ ಟ್ರ್ಯಾನ್ಸ್ (Trans) ಎಂದು ಹೇಳಿ ಏನ್ಏನೋ ಕಥೆ ಕಟ್ಟಿದರು. ಅದು ಬಿಡಿ, ಈಗ ನಟಿ ರಾಖಿ ರಿತೇಷ್ ಎಂಬುವವರನ್ನು ಮದುವೆ ಆಗಿರುವೆ ಎಂದು ಹೇಳುವ ಮೂಲಕ ಮತ್ತೊಂದು ಶಾಕ್ ನೀಡಿದ್ದಾರೆ. 

Bollywood Rakhi Sawant to enter Bigg boss 15th season with husband Ritesh  vcs

'ಹೌದು! ನನಗೆ ಮದುವೆ ಆಗಿದೆ. ಕೊನೆಗೆ ಇಡೀ ಪ್ರಪಂಚ ನನ್ನ ಪತಿಯನ್ನು ನೋಡಲಿದೆ. ನಾನು ಆತನೊಂದಿಗೆ ಬಿಗ್ ಬಾಸ್ ಮನೆ ಪ್ರವೇಶಿಸುತ್ತಿರುವೆ. ಆತನೊಂದಿಗೆ ಕಾಣಿಸಿಕೊಳ್ಳುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಕಾತುರದಿಂದ ಕಾಯುತ್ತಿರುವೆ. ನಾನು ಈ ಸೀಸನ್‌ನಲ್ಲಿ ಪಕ್ಕಾ ಟ್ರೋಫಿಯನ್ನು (Trophy) ಮನೆಗೆ ತೆಗೆದುಕೊಂಡು ಬರುವೆ. ಟ್ರೋಫಿ ಗೆಲ್ಲಲ್ಲು ಏನು ಮಾಡಬೇಕೋ, ಅವೆಲ್ಲವನ್ನೂ ಮಾಡುವೆ,' ಎಂದು ರಾಖಿ ಮಾತನಾಡಿದ್ದಾರೆ. 

ಹಾಟ್ ರಾಖಿ ಸಾವಂತ್ ಅಜ್ಜಿಯಾದ್ರೆ ಹೇಗಿರ್ತಾರೆ ? ಇಲ್ಲಿದೆ ಉತ್ತರ

'ನಾನು ಉದ್ಯಮಿ ರಿತೇಷ್‌ರನ್ನು (Bussinessman Ritesh) ಮದುವೆ ಆಗಿರುವ ವಿಚಾರ ರಿವಿಲ್ ಮಾಡಿದಾಗ, ಯಾರೂ ನನ್ನನ್ನು ನಂಬಲಿಲ್ಲ. ನಾನು ಸುಳ್ಳು ಹೇಳುತ್ತಿರುವೆ. ಇದೆಲ್ಲಾ ಪಬ್ಲಿಸಿಟಿಗಾಗಿ (Publicity) ಮಾಡುತ್ತಿರುವೆ ಎಂದು ಹೇಳಿದ್ದರು. ಯಾವುದೇ ಫೋಟೋ ಮತ್ತು ವಿಡಿಯೋ ಇಲ್ಲದ ಕಾರಣ ಯಾರಿಗೂ ಸರಿಯಾಗಿ ಉತ್ತರ ನೀಡಲು ಆಗಲಿಲ್ಲ. ಮದುವೆ ತುಂಬಾ ಪ್ರೈವೇಟ್ (Private wedding) ಆಗಿದ್ದ ಕಾರಣ ಯಾರನ್ನೂ ಕರೆಯಲಿಲ್ಲ. ನನ್ನ ಪತಿ ರಿತೇಷ್ ತುಂಬಾನೇ ಒಳ್ಳೆಯ ವ್ಯಕ್ತಿ, ಸ್ವೀಟ್ ಹಾರ್ಟ್ (Sweetheart). ನಾನು ಕೇಳಿದೆ ಎಂದು ಬರಲು ಒಪ್ಪಿಕೊಂಡಿದ್ದಾರೆ,' ಎಂದು ರಾಖಿ ಹೇಳಿದ್ದಾರೆ. 

ರಾಖಿ ಸಾವಂತ್‌ನ ಬಾಯ್ತುಂಬ ಹೊಗಳಿದ ಬಾಲಿವುಡ್ ನಿರ್ದೇಶಕಿ

ಬಿಗ್ ಬಾಸ್ ಸೀಸನ್ 14ರಲ್ಲಿ (BB14) ರಾಖಿ ನೀಡಿದ ಮನೋರಂಜನೆಯನ್ನು ಈಗಲ್ಲೂ ವೀಕ್ಷಕರು ಮರೆಯುವುದಿಲ್ಲ.  ದಿನಕ್ಕೊಂದು ಡ್ರಾಮಾ ದಿನಕ್ಕೊಂದು ಸ್ಟಂಟ್ ಅಬ್ಬಾ! ಇದು ನಿಜಕ್ಕೂ ರಾಖಿನಾ ಎಂದು ಪ್ರಶ್ನೆ ಮಾಡುವ ಮಟ್ಟಕ್ಕೆ ಕನ್ಫ್ಯೂಸ್ ಆಗಿದ್ದರು. ಮನೆಯಲ್ಲಿದ್ದ ಗೊಂಬೆ, ಬಾಟಲ್, ಚೇರ್‌ಗಳ ಜೊತೆಯೂ ನಾನ್‌ ಸ್ಟಾಪ್ ಮಾತನಾಡುತ್ತಿದ್ದರು. 'ಬಿಬಿ ಸೀಸನ್ 14 ನನ್ನ ವೃತ್ತಿ ಜೀವನವನ್ನು ಬದಲಾಯಿಸಿದೆ. ಶೋ ಆದ ನಂತರ ಜನರು ನನಗೆ ತುಂಬಾನೇ ಪ್ರೀತಿ ತೋರಿಸಿದ್ದಾರೆ. ಇಡಿ ವರ್ಷ ನನ್ನ ಕೈಯಲ್ಲಿ ಕೆಲಸವಿತ್ತು. ಇಡೀ ವರ್ಷ ನಾನು ತುಂಬಾನೇ ಸಂತೋಷವಾಗಿದ್ದೆ. ಬಹುಶಃ ಬಿಗ್ ಬಾಸ್ 200ನೇ ಸೀಸನ್ ಮಾಡಿದಾಗಲೂ ನಾನು ಇರುವೆ ಎಂದೆನಿಸುತ್ತಿದೆ,' ಎಂದಿದ್ದಾರೆ ರಾಖಿ.

Follow Us:
Download App:
  • android
  • ios