ನಟಿ ಸುಶ್ಮಿತಾ ಸೇನ್‌ ಅವರ ನಾದಿನಿ ಈಗ ಮುಂಬೈ ಬಿಟ್ಟು ಹಳ್ಳಿ ಸೇರಿದ್ದಾರೆ. ಇದಕ್ಕೆ ಆರ್ಥಿಕ ಸಮಸ್ಯೆಯೇ ಕಾರಣ ಅಂತೆ.  

ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ಮನೆಯ ವಿಷಯ ಈಗಾಗಲೇ ಸಾಕಷ್ಟು ಬಾರಿ ಬೀದಿಗೆ ಬಂದಿದೆ. ರಾಜೀವ್‌ ತನ್ನ ಪತ್ನಿ ವಿರುದ್ಧ ಆರೋಪ ಮಾಡೋದು, ಪತ್ನಿ ರಾಜೀವ್‌ ವಿರುದ್ಧ ಆರೋಪ ಮಾಡೋದು, ಡಿವೋರ್ಸ್‌ ಕೊಡೋದು, ಮತ್ತೆ ಒಂದಾಗೋದು ಇದೇ ಆಗಿತ್ತು. ಈಗ ಚಾರು ಆಸೋಪ ಮುಂಬೈ ಬಿಟ್ಟು ಊರು ಸೇರಿದ್ದು, ಅಲ್ಲಿ ಬಟ್ಟೆ ಮಾರುತ್ತಿದ್ದಾರೆ.

ಯಾಕೆ ಮುಂಬೈ ಬಿಟ್ರು? 
ಆರ್ಥಿಕ ಸಂಕಷ್ಟದಿಂದಾಗಿ ಮುಂಬೈ ಬಿಟ್ಟು, ರಾಜಸ್ಥಾನದ ಬಿಕಾನೇರ್‌ಗೆ ಅವರು ಶಿಫ್ಟ್‌ ಆಗಿದ್ದಾರೆ. ಚಾರು ಅವರು ಆನ್‌ಲೈನ್‌ಲ್ಲಿ ಸಲ್ವಾರ್ ಕಮೀಜ್ ಮಾರಾಟ ಮಾಡುತ್ತಿರುವ ವಿಡಿಯೋ ಸದ್ದು ಮಾಡ್ತಿದೆ. ಚಾರು ಹೊಸ ಪ್ರಯತ್ನಕ್ಕೆ ಅವರ ಅಭಿಮಾನಿಗಳು ಶುಭ ಹಾರೈಸಿದರೆ, ಇನ್ನೂ ಕೆಲವರು ಈ ರೀತಿ ಮಾಡಲು ಕಾರಣ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. 

ಸುಶ್ಮಿತಾ ಸೇನ್ ಅವರ ಮಾಜಿ ಅತ್ತಿಗೆ ಚಾರು ಅಸೋಪಾ ಆನ್‌ಲೈನ್‌ನಲ್ಲಿ ಬಟ್ಟೆಗಳನ್ನು ಮಾರಾಟ ಮಾಡಿ, ಆರ್ಥಿಕ ಸಂಕಷ್ಟದಿಂದಾಗಿ ಮುಂಬೈ ತೊರೆದರು. ಚಾರು ಅಸೋಪಾ, "ನನ್ನ ಯೋಜನೆಗಳ ಬಗ್ಗೆ ರಾಜೀವ್‌ಗೆ ಮೆಸೇಜ್‌ ಮಾಡಿದ್ದೇನೆ" ಎಂದು ಹೇಳಿದರು.

ಸುಶ್ಮಿತಾ ಸೇನ್ ಸಹೋದರನ ದಾಂಪತ್ಯ ಕಲಹ; ಭಾವುಕ ಪೋಸ್ಟ್ ಹಂಚಿಕೊಂಡ ರಾಜೀವ್ ಪತ್ನಿ ಚಾರು ಅಸೋಪ

ಚಾರು ನೀಡಿದ ಕಾರಣ ಏನು? 
"ಮುಂಬೈನಲ್ಲಿ ವಾಸ ಮಾಡೋದು ಸುಲಭವಲ್ಲ, ಅದಕ್ಕೆ ಹಣ ಬೇಕು. ನನಗೆ, ಮುಂಬೈನಲ್ಲಿ ತಿಂಗಳಿಗೆ ₹1 ಲಕ್ಷ -1.5 ಲಕ್ಷ ರೂಪಾಯಿ ಬೇಕಿತ್ತು. ಬಾಡಿಗೆ, ಕರೆಂಟ್‌, ದಿನಸಿ ಎಂದು ಸಾಕಷ್ಟು ಖರ್ಚುಗಳಿತ್ತು. ಮುಂಬೈನಲ್ಲಿ ಶೂಟಿಂಗ್‌ ಮಾಡುವಾಗ ಜಿಯಾನಾರನ್ನು ದಾದಿಯೊಂದಿಗೆ ಒಂಟಿಯಾಗಿ ಬಿಡಲು ಇಷ್ಟ ಇರಲಿಲ್ಲ. ಇದು ತುಂಬಾ ಕಷ್ಟ ಆಗ್ತಿತ್ತು. ಮನೆಗೆ ಹೋಗಿ ಸ್ವಂತ ಕೆಲಸ ಮಾಡೋಣ ಅಂತ ಪ್ಲ್ಯಾನ್‌ ಮಾಡಿದ್ದೆ. ಅದು ಆತುರದ ನಿರ್ಧಾರ ಆಗಿರಲಿಲ್ಲ. ಹೊಸದನ್ನು ಶುರು ಮಾಡಿದಾಗ ಎಲ್ಲರೂ ಕಷ್ಟಪಡುತ್ತಾರೆ. ನನ್ನ ವಿಷಯದಲ್ಲಿ ಏನು ವಿಭಿನ್ನವಾಗಿದೆ? ಆರ್ಡರ್ ತೆಗೆದುಕೊಳ್ಳುವುದರಿಂದ ಹಿಡಿದು ಪ್ಯಾಕೇಜ್ ಕಳುಹಿಸುವವರೆಗೆ ಸ್ಟಾಕ್ ಪಡೆಯುವವರೆಗೆ ಎಲ್ಲವನ್ನೂ ನಾನೇ ಮಾಡ್ತಿದ್ದೇನೆ. ನಟಿಸಬೇಕು ಅಂತ ಮುಂಬೈಗೆ ಬಂದಾಗ ಅಷ್ಟು ಸುಲಭ ಇರಲಿಲ್ಲ. ಹೆಸರು ಮಾಡಲು ನಾನು ಹೆಣಗಾಡಿದ್ದಲ್ಲದೆ, ನಾನು ಅದನ್ನು ಹೇಗೋ ನಿಭಾಯಿಸಿದೆ. ಈಗ ನಾನು ಈ ಉದ್ಯಮ ಶುರು ಮಾಡಿದ್ದೇನೆ. ಈಗ ನಾನು ಮಗು ಕಡೆ ಕೂಡ ಗಮನ ಕೊಡಬಹುದು" ಎಂದು ಚಾರು ಅಸೋಪ ಹೇಳಿದ್ದಾರೆ. 

15 ವರ್ಷ ಚಿಕ್ಕವ, 12 ವರ್ಷ ದೊಡ್ಡವ ಸಾಕಾಯ್ತು... ಹೊಸ ಎಂಟ್ರಿಗೆ ಸುಷ್ಮಿತಾ ಸೇನ್​ ರೆಡಿ- ನಟಿ ಹೇಳಿದ್ದೇನು?

ಜಿಯಾನಾ-ರಾಜೀವ್‌ ಭೇಟಿ ಆಗಬಹುದು!
"ನಾನು ಬಿಕಾನೇರ್‌ನಲ್ಲಿ ಮನೆ ಖರೀದಿಸಬೇಕು ಅಂತ ಪ್ಲ್ಯಾನ್‌ ಮಾಡಿದ್ದೇನೆ. ಜಿಯಾನಾ ಹಾಗೂ ಪಾಲಕರ ಜೊತೆ ಇದ್ದೇನೆ. ನನ್ನ ಎಲ್ಲ ವಸ್ತುಗಳನ್ನು ತಗೊಂಡು ಬರಲು ನಾನು ಮುಂಬೈಗೆ ಹೋಗಬೇಕಿದೆ" ಎಂದು ಚಾರು ಹೇಳಿದ್ದಾರೆ. 
ರಾಜೀವ್‌ ಅವರು ಯಾವಾಗ ಬೇಕಿದ್ರೂ ಮಗಳನ್ನು ನೋಡಲು ಬರಬಹುದು. ಮುಂಬೈಯಿಂದ ಹೊರಡುವ ಮೊದಲು, ನನ್ನ ಪ್ಲ್ಯಾನ್ ಬಗ್ಗೆ ಹೇಳಿದ್ದೇನೆ" ಎಂದು ಚಾರು ಹೇಳಿದ್ದರು. 2019 ರಲ್ಲಿ ಚಾರು ಅವರು ರಾಜೀವ್ ಸೇನ್‌ರನ್ನು ಮದುವೆಯಾದರು. ಆಮೇಲೆ ಮನಸ್ತಾಪ ಬಂದು ಜಗಳ ಮಾಡಿಕೊಂಡು ಡಿವೋರ್ಸ್‌ ಪಡೆದಿದ್ದಾರೆ. 

ರಾಜೀವ್‌ ಸೇನ್‌ ಹೇಳಿದ್ದೇನು?
ಈಗ ಈ ಬಗ್ಗೆ ಮಾತನಾಡಿರುವ ಮಾಜಿ ಪತಿ, ರಾಜೀವ್‌ ಸೇನ್‌ ಅವರು, “ಯಾವ ರೀತಿಯ ಆರ್ಥಿಕ ಸಮಸ್ಯೆ ಇಲ್ಲ. ಟ್ರಿಪ್‌ ಮಾಡೋಕೆ ಆಗ್ತಿಲ್ಲ ಅಂತ ಹೀಗೆ ಮಾಡಿದ್ದಾಳೆ ಅಷ್ಟೇ. ನನ್ನಿಂದ ಮಗಳನ್ನು ಹೇಗೆ ದೂರ ಇಡಬೇಕು ಅಂತ ಚಾರುಗೆ ಚೆನ್ನಾಗಿ ಗೊತ್ತಿದೆ. ಜಿಯಾನಾ ಮಾತ್ರ ಎಲ್ಲವನ್ನು ಕಳೆದುಕೊಳ್ಳುತ್ತಿದ್ದಾಳೆ. ಕಳೆದ ಜನವರಿಯಲ್ಲಿ ನಾನು ಮಗಳನ್ನು ಭೇಟಿ ಆಗಿದ್ದೆ. ನಾನು ಎಷ್ಟು ಮಿಸ್‌ಮಾಡಿಕೊಳ್ತಿದೀನೋ ಅಷ್ಟೇ ನನ್ನನ್ನು ಮಿಸ್‌ಮಾಡಿಕೊಳ್ತಿರ್ತಾಳೆ. ದೆಹಲಿಗೆ ಹೋದಾಗೆಲ್ಲ ನಾನು ಚಾರುಗೆ ಫೋನ್‌ಮಾಡಿ ಜಿಯಾನಾ ಸಿಗ್ತಾಳಾ ಅಂತ ಕೇಳಿದಾಗ ಅವಳು ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಎಲ್ಲರ ಎದುರು ಜಿಯಾನಾಳನ್ನು ನಾನು ಭೇಟಿ ಮಾಡಬಹುದು ಅಂತ ಚಾರು ಹೇಳಿದರೂ ಕೂಡ ಇದು ನಿಜ ಆಗತ್ತೆ ಅಂತ ನಾನು ಭಾವಿಸೋದಿಲ್ಲ” ಎಂದು ಹೇಳಿದ್ದಾರೆ. 

View post on Instagram