ಗೀತಾಗೆ ಮಕ್ಳಾಗಿ ಆ ಮಕ್ಳಿಗೆ ಮಗು ಆಗೋವರೆಗೂ ಈ ಸೀರಿಯಲ್ ನಡಿತಿರುತ್ತೆ ಅನ್ಸುತ್ತೆ
ವೇಳೆ ಬದಲಾದ ಬಳಿಕ ಕಥೆಯಲ್ಲಿ ಹೊಸ ತಿರುವು ಕಾಣಿಸುತ್ತಿದೆ. ಪಾತ್ರಗಳಿಗೆ ಬಂದ ಸಮಸ್ಯೆಗೆ ಪರಿಹಾರವಾಗಿ ಧಾರಾವಾಹಿಯಲ್ಲಿ ವಾಮಾಚಾರ ಬಂದಿದೆ. ಆದರೆ ಅದನ್ನು ವೀಕ್ಷಕರು ಒಪ್ಪುತ್ತಿಲ್ಲ. ಬೇರೆ ಯಾವುದಾದರೂ ದಾರಿಯಲ್ಲಿ ಕಥೆಗಾರರು ಸಮಸ್ಯೆಗೆ ಪರಿಹಾರ ಹುಡುಕಬೇಕಿತ್ತು, ಆದರೆ ಅದಕ್ಕೆ ವಾಮಾಚಾರ ತಂದು ಅದನ್ನು ಪ್ರಮೋಟ್ ಮಾಡುವುದು ಎಳ್ಳಷ್ಟೂ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಕಲರ್ಸ್ ಕನ್ನಡದಲ್ಲಿ ಸಂಜೆ 6.00 ಗಂಟೆಗೆ ಪ್ರಸಾರ ಕಾಣುತ್ತಿರುವ ಗೀತಾ ಧಾರಾವಾಹಿಯಲ್ಲಿ ಹೊಸದೊಂದು ಅಧ್ಯಾಯ ಶುರುವಾಗಿದೆ. ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತದ ಅವಕಾಶ ಬಿಟ್ಟು, ಭಾನುಮತಿ ವಾಮಾಚಾರದ ಮೊರೆ ಹೋಗಿದ್ದಾರೆ. ಈ ಸೀರಿಯಲ್ ಸಮಯ ಬದಲಾಗಿದ್ದು, ಜತೆಜತೆಗೆ ಈ ಸೀರಿಯಲ್ ಕಥೆಯಲ್ಲೂ ಹೊಸ ಬದಲಾವಣೆ ಗೋಚರಿಸತೊಡಗಿದೆ. ಈ ಸೀರಿಯಲ್ ನೋಡುತ್ತಿರುವ ವೀಕ್ಷಕರು, ಸೀರಿಯಲ್‌ನಲ್ಲಿ ವಾಮಾಚಾರ ನೋಡಿ ಶಾಕ್ ಆಗಿದ್ದಾರೆ.
ಗೀತಾ ಕಥೆಯಲ್ಲಿ ವಾಮಾಚಾರ ಬರುತ್ತಿರುವ ಬಗ್ಗೆ ಕೋಪಗೊಂಡಿರುವ ಹಲವು 'ಗೀತಾ'ಪ್ರಿಯರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ. ಕೆಲವರು ಸಿಟ್ಟಿನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರೆ ಇನ್ನೂ ಹಲವರು ತಮಾಷೆಯಾಗಿ ರಿಯಾಕ್ಟ್ ಮಾಡುತ್ತಿದ್ದಾರೆ. "ಬನ್ನಿ, ಕನ್ನಡದ ಜನತೆ ಮಾಟಮಂತ್ರ ಮಾಡ್ಸಿ ಈ ಧಾರಾವಾಹಿ ಮುಗ್ಸೋಣ" ಎಂದು ಕಾಮೆಂಟ್ ಹಾಕಿದ್ದರೆ, ಇನ್ನೊಬ್ಬರು "ಗೀತಾಗೆ ಮಕ್ಳಾಗಿ ಆ ಮಕ್ಳಿಗೆ ಮಗು ಆಗೋವರೆಗೂ ಈ ಸೀರಿಯಲ್ ನಡಿತಿರತ್ತೆ ಅನ್ಸುತ್ತೆ' ಎಂದು ಕಾಮೆಂಟ್ ಹಾಕಿದ್ದಾರೆ. ಇಷ್ಟೇ ಅಲ್ಲ, ಹಲವರು ಹಲವು ರೀತಿಯಲ್ಲಿ ಟೀಕೆಟಿಪ್ಪಣೆ ಮಾಡಿದ್ದಾರೆ.
Bigg Boss Kannada: ನಿನ್ನನ್ನು ಪರಿಚಯಿಸಲು ನಿನ್ನಪ್ಪ ಯಾಕೆ ಬಂದಿಲ್ಲ, ನಂಗೊತ್ತು ಆ ಗುಟ್ಟು ಎಂದ ಸುದೀಪ್
ವೇಳೆ ಬದಲಾದ ಬಳಿಕ ಕಥೆಯಲ್ಲಿ ಹೊಸ ತಿರುವು ಕಾಣಿಸುತ್ತಿದೆ. ಪಾತ್ರಗಳಿಗೆ ಬಂದ ಸಮಸ್ಯೆಗೆ ಪರಿಹಾರವಾಗಿ ಧಾರಾವಾಹಿಯಲ್ಲಿ ವಾಮಾಚಾರ ಬಂದಿದೆ. ಆದರೆ ಅದನ್ನು ವೀಕ್ಷಕರು ಒಪ್ಪುತ್ತಿಲ್ಲ. ಬೇರೆ ಯಾವುದಾದರೂ ದಾರಿಯಲ್ಲಿ ಕಥೆಗಾರರು ಸಮಸ್ಯೆಗೆ ಪರಿಹಾರ ಹುಡುಕಬೇಕಿತ್ತು, ಆದರೆ ಅದಕ್ಕೆ ವಾಮಾಚಾರ ತಂದು ಅದನ್ನು ಪ್ರಮೋಟ್ ಮಾಡುವುದು ಎಳ್ಳಷ್ಟೂ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದೇನೇ ಇರಲಿ, ಸದ್ಯಕ್ಕೆ ಸೀರಿಯಲ್‌ನಲ್ಲಿ ಪಾತ್ರಧಾರಿ ಭಾನುಮತಿ ತನ್ನ ಸಮಸ್ಯೆಗೆ ವಾಮಾಚಾರದ ಮೂಲಕ ಪರಿಹಾರ ಕಂಡುಕೊಳ್ಳುವ ಮಾರ್ಗ ಹಿಡಿದಿದ್ದಾಳೆ.
ರೆಡ್ ಕಾರ್ಪೆಟ್ ಮೇಲೆ ಬಿದ್ದು ಬಿಟ್ಟೆ, ಕ್ಯಾಮರಾಮ್ಯಾನ್‌ಗಳು ಮಾಡಿದ್ದು ನೋಡಿ ಶಾಕ್ ಆಗ್ಬಿಟ್ಟೆ: ಪ್ರಿಯಾಂಕಾ ಚೋಪ್ರಾ
ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ, ಗೀತಾ ಸೀರಿಯಲ್ ಸೋಮವಾರದಿಂದ ಶುಕ್ರವಾರ ಸಂಜೆ 6.00 ಗಂಟೆಗೆ ಪ್ರಸಾರ ಕಾಣುತ್ತಿದೆ. ಸೀರಯಲ್ ಶುರುವಾದಾಗ ಯಂಗ್ ಆಗಿದ್ದ ನಟನಟಿಯರು ಈಗ ವಯಸ್ಸಾದಂತೆ ಕಾಣುತ್ತಿದ್ದಾರೆ ಎಂಬ ಹಲವು ವೀಕ್ಷಕರ ಅಭಿಪ್ರಾಯಕ್ಕೂ ಬಗ್ಗದೇ ಸೀರಿಯಲ್ ಇನ್ನೂ ಮುಂದುವರಿಯುತ್ತಿದೆ.