Bigg Boss Ranjith Family Files Complaint ಕಿರುತೆರೆ ನಟ ರಂಜಿತ್ ವಿರುದ್ಧ ಅವರ ಬಾವ ಜಗದೀಶ್ ಜೀವ ಬೆದರಿಕೆ ಆರೋಪದ ಮೇಲೆ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫ್ಲ್ಯಾಟ್‌ಗೆ ಸಂಬಂಧಿಸಿದ ಈ ಜಗಳದಲ್ಲಿ ಅಕ್ಕ-ತಮ್ಮನ ನಡುವೆ ಗಲಾಟೆಯಾಗಿದೆ.

ಬೆಂಗಳೂರು (ಸೆ.18): ಕಳೆದ ಆವೃತ್ತಿಯ ಬಿಗ್‌ಬಾಸ್‌ ವೇಳೆ ಜಗದೀಶ್‌ ಮೇಲೆ ಹಲ್ಲೆಗೆ ಯತ್ನಿಸಿ ಅರ್ಧದಲ್ಲೇ ಸೀಸನ್‌ನಿಂದ ಹೊರಬಿದ್ದಿದ್ದ ಕಿರುತೆರೆ ನಟ ರಂಜಿತ್‌ ವಿರುದ್ಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರನ್ನು ದಾಖಲಿಸಿರುವುದು ಅವರ ಬಾವ ಜಗದೀಶ್‌. ರಂಜಿತ್‌ನಿಂದ ನನಗೆ ಜೀವ ಬೆದರಿಕೆ ಇದೆ ಎನ್ನುವ ಆರೋಪದಲ್ಲಿ ಜಗದೀಶ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2018 ರಿಂದ ಅಮೃತಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಜಗದೀಶ್‌ ಅವರ ಕುಟುಂಬ ವಾಸವಿದೆ. 2025 ರಿಂದ ಇದೇ ಫ್ಲ್ಯಾಟ್ ನಲ್ಲಿ ಅಕ್ಕ ಭಾವನ ಜೊತೆ ರಂಜಿತ್‌ ವಾಸವಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದೀಗ ಈ ಮನೆ ನಂದು ಎಂದು ಅಕ್ಕ ಹಾಗೂ ತಮ್ಮನ ನಡುವೆ ಗಲಾಟೆ ಶುರುವಾಗಿದೆ. ರಂಜಿತ್ , ರಂಜಿತ್ ಪತ್ನಿ ಹಾಗು vs ರಂಜಿತ್ ಅಕ್ಕ ನ ನಡುವೆ ನಡೆದಿರುವ ಗಲಾಟೆಯ ವಿಡಿಯೋ ಕೂಡ ವೈರಲ್‌ ಆಗಿದೆ. ಗಲಾಟೆ ವೇಳೆ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ ಎಂದೂ ಆರೋಪಿಸಲಾಗಿದೆ. ಮನೆ ಬಿಟ್ಟು ಹೋಗದೆ ನಂದೆ ಮನೆ ಅಂತಾ ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜಗದೀಶ್‌ ದೂರಿನಲ್ಲಿ ತಿಳಿಸಿದ್ದಾರ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎನ್ ಸಿ ಆರ್ ದಾಖಲಾಗಿದ್ದು, ಮನೆಯಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಳ್ಳುವ ವೀಡಿಯೊ ಲಭ್ಯವಾಗಿದೆ.

ತಂದೆಯ ಫ್ಲ್ಯಾಟ್‌ನಲ್ಲಿ ಪಾಲಿಗಾಗಿ ಜಗಳ

ಅಕ್ಕ ತಮ್ಮನ ಜಗಳಕ್ಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ತಂದೆ ಫ್ಲಾಟ್ ನಲ್ಲಿ ಇಬ್ಬರಿಗೂ ಪಾಲು ಬೇಕು ಎಂದು ಪರಸ್ಪರ ದೂರು ದಾಖಲಿಸಿದ್ದಾರೆ. ದೂರು ಪಡೆದು ಪೊಲೀಸರು ಎನ್‌ಸಿಆರ್‌ ದಾಖಲಿಸಸಿದ್ದಾರೆ. ಫ್ಲಾಟ್ ವಿಚಾರ ( ಸಿವಿಲ್ ವ್ಯಾಜ್ಯ) ಹೀಗಾಗಿ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ಹಿಂದೆ ಪೂರ್ತಿ ಕುಟುಂಬ ಅದೇ ಫ್ಲಾಟ್ ನಲ್ಲಿ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಅಕ್ಕ ಬೇರೆ ಹೋಗಿದ್ದಾರೆ. ಈ ಮನೆಯಲ್ಲಿ ತನಗೂ ಪಾಲಿದೆ ಎಂದು ಇಬ್ಬರು ವಾದ ಮಾಡಿದ್ದು, ಪರಿಹಾರ ಮಾಡಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವೇಳೆ ಪೊಲೀಸರು ಇಬ್ಬರಿಗೂ ಬುದ್ದಿ ಹೇಳಿ ಕೋರ್ಟ್‌ನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

ಒಂದೇ ಫ್ಲ್ಯಾಟ್‌ಗಾಗಿ ಅಕ್ಕ-ತಮ್ಮ ಜಗಳ

ಅಮೃತಹಳ್ಳಿಯ ಸಾಯಿ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ ಅಲ್ಲಿ ಕುಟುಂಬ ವಾಸವಿದೆ. ಐದು ಅಂತಸ್ತಿನಲ್ಲಿ 24 ಫ್ಲಾಟ್ ಇರುವ ಸಾಯಿ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನ ಮೊದಲ ಮಡಿಯ ಫ್ಲ್ಯಾಟ್‌ನಲ್ಲಿ ರಂಜಿತ್‌ ಹಾಗೂ ಪತ್ನಿ ವಾಸವಿದೆ. ಇಲ್ಲಿಯೇ ಮೂರನೇ ಮಹಡಿಯ ಫ್ಲಾಟ್ ನಲ್ಲಿ ರಂಜಿತ್ ಅಕ್ಕ ರಶ್ಿ ವಾಸವಿದ್ದಾರೆ.

ರಂಜಿತ್ ಮದುವೆಗೂ ಮೊದಲು ಮೊದಲನೇ ಮಹಡಿಯ ಫ್ಲ್ಯಾಟ್‌ನಲ್ಲಿ ರಂಜಿತ್‌ ಹಾಗೂ ಅವರ ಸಹೋದರಿ ವಾಸವಿದ್ದರು. ರಂಜಿತ್ ಮದುವೆ ನಂತರ ಮೂರನೇ ಮಹಡಿ ಫ್ಲಾಟ್‌ಗೆ ರಂಜಿತ್‌ ಸೋದರಿ ರಶ್ಮಿ ಶಿಫಟ್‌ ಆಗಿದ್ದರು. ಸದ್ಯ ರಂಜಿತ್ ವಾಸವಿರೋ ಮೊದಲ ಪ್ಲೋರ್ ನ ಫ್ಲ್ಯಾಟ್‌ನಲ್ಲಿ ನನಗೂ ಪಾಲು ಬೇಕೆಂದು ಜಗಳ ಆರಂಭಿಸಿದ್ದಾರೆ.

ಸದ್ಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ರಂಜಿತ್ ಹಾಗೂ ಸಹೋದರಿ ರಶ್ಮಿರಿಂದ ದೂರು ಪ್ರತಿದೂರು ದಾಖಲಾಗಿದೆ. ಮೊದಲ ಮಹಡಿಯ ಫ್ಲ್ಯಾಟ್‌ ರಂಜಿತ್ ತಾಯಿ ಹಾಗೂ ಸಹೋದರಿ ಒಡೆತನದಲ್ಲಿದೆ. ರಂಜಿತ್ ಮದುವೆ ನಂತರ ಮೊದಲ ಮಹಡಿಯ ಸ್ವಂತ ಫ್ಲಾಟ್ ಬಿಟ್ಟು ಮೂರನೇ ಮಹಡಿಯಲ್ಲಿರುವ ಬಾಡಿಗೆ ಫ್ಲ್ಯಾಟ್‌ಗೆ ರಶ್ಮಿ ಶಿಫ್ಟ್‌ ಆಗಿದ್ದರು.

ಸದ್ಯ ನನ್ನ ತಾಯಿ ಹಾಗೂ ನನ್ನ ಒಡೆತನದ ಪ್ಲಾಟ್‌ನಲ್ಲಿ ನನ್ನ ಪತ್ನಿಯ ತಮ್ಮ ವಾಸವಿದ್ದಾರೆ. ನನ್ನ ಮನೆಯೂ ಅವನಿಗೆ ಸೇರಿದ್ದು ಎನ್ನುತ್ತಿದ್ದು, ಮನೆಯನ್ನು ಬಿಡುವಂತೆ ಕುಟುಂಬಸ್ಥರಿಗೆ ಅವಾಚ್ಯವಾಗಿ ಬೈದು ಜೀವಬೆದರಿಕೆ ಹಾಕಿದ್ದಾರೆಂದು ರಶ್ಮಿ ಪತಿ ಜಗದೀಶ್ ದೂರು ದಾಖಲಿಸಿದ್ದಾರೆ. ಮೊದಲ ಮಹಡಿಯ ಫ್ಲಾಟ್ ಖರೀದಿ ವೇಳೆ ನಾವು ಹಣ ಹೂಡಿಕೆ ಮಾಡಿದ್ದೇವೆ. ನಮಗೂ ಸೇರಬೇಕು ಎಂದು ರಂಜಿತ್‌ ದೂರು ನೀಡಿದ್ದಾರೆ.