ಬಿಗ್​ಬಾಸ್​ ವರ್ತೂರು ಮದುವೆ: ತನಿಷಾ ವಿಷ್ಯ ಹೇಳುತ್ತಲೇ ಭಾವಿ ಪತ್ನಿಯ ಗುಟ್ಟು ರಟ್ಟು ಮಾಡಿದ ಸಂತೋಷ್​

ಬಿಗ್​ಬಾಸ್​ ವರ್ತೂರು ಸಂತೋಷ್​ ಅವರು ಮದುವೆಗೆ ಸಿದ್ಧರಾಗಿದ್ದು, ಹುಡುಗಿ ಯಾರು ಎಂದು ತಿಳಿಸಿದ್ದಾರೆ. ಅವರು ಹೇಳಿದ್ದೇನು?
 

Bigg Boss Varthur Santosh has revealed that he is ready for marriage and who the girl is suc

ಬಿಗ್​ಬಾಸ್​ 10ರಲ್ಲಿ ಕೊನೆಯವರೆಗೂ ಮಿಂಚಿದ ವರ್ತೂರು ಸಂತೋಷ್​ ಅವರು ಹಳ್ಳಿಕಾರ್​ ಎಂದೇ ಫೇಮಸ್​ ಆದವರು. ಇವರು ಇನ್ನಷ್ಟು ಫೇಮಸ್​ ಆಗಲು ಕಾರಣ, ಇವರು ಧರಿಸಿದ್ದ ಹುಲಿಯ ಪೆಂಡೆಂಟ್​ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದರಿಂದ. ಬಿಗ್​ಬಾಸ್​  ಮನೆಯಿಂದ ಜೈಲಿಗೂ ಹೋಗಿ ರಾಜಕೀಯ ವಲಯದಲ್ಲಿಯೂ ಕೋಲಾಹಲ ಸೃಷ್ಟಿಸಿದ್ದು ಈಗ ಎಲ್ಲವೂ ಇತಿಹಾಸ. ಇಂತಿಪ್ಪ ವರ್ತೂರು ಫೇಮಸ್​ ಆಗ್ತಿದ್ದಂತೆಯೇ ಅವರ ವೈಯಕ್ತಿಯ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆ, ಸುದ್ದಿ, ಗುಲ್ಲುಗಳು ಹರಡಿದ್ದವು. ಯುವತಿಯೊಬ್ಬರ ಜೊತೆ ವರ್ತೂರು ಸಂತೋಷ್​ ಇರುವ ಫೋಟೋ ಸೋಷಿಯಲ್​  ಮೀಡಿಯಾದಲ್ಲಿ ಹರಿದಾಡಿ ವರ್ತೂರು ಅವರಿಗೆ ಮದುವೆಯಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದೇ ಸದ್ದು ಮಾಡಿತು. ಅಲ್ಲಿಯವರೆಗೆ,  ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿ ಹೀರೋ ಆಗಿದ್ದ ವರ್ತೂರು ಅವರ ಸುತ್ತ ಮದುವೆಯ ವಿವಾದ ಹುಟ್ಟಿಕೊಂಡಿತ್ತು.

ಕೊನೆಗೂ ಈ ಬಗ್ಗೆ ಬಿಗ್​ಬಾಸ್​​ನಿಂದ ಹೊರಕ್ಕೆ ಬಂದ ಮೇಲೆ ಸ್ಪಷ್ಟನೆ ಕೊಟ್ಟಿದ್ದರು ವರ್ತೂರು.  ಪತ್ನಿಗೆ ಇವರು ಕಿರುಕುಳ ಕೊಟ್ಟಿದ್ದರಿಂದ ಅವರು ದೂರವಾಗಿದ್ದಾರೆ ಎಂಬೆಲ್ಲಾ ಆರೋಪ ಇವರ ಮೇಲೆ ಬಂದಿತ್ತು. ಕೊನೆಗೆ ವರ್ತೂರು ಅವರು,  ಕಾಲಾಯ ತಸ್ಮೈ ನಮಃ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.  ಮದುವೆ  ಎನ್ನುವುದು ವೈಯಕ್ತಿಕ ವಿಷಯ. ನಾನು ಎಲ್ಲಿಯೂ ನನ್ನ ಮದ್ವೆಯಾಗಿಲ್ಲ ಎಂದು ಹೇಳಿಲ್ಲ.  ಈಗಲೂ ನನ್ನ ಮಾತು ಒಪ್ಪಿ ಬಂದರೆ ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ. ಎಲ್ಲೂ ಯಾರ ಮೇಲೂ ನಾನು ಆರೋಪ ಹೊರಿಸುತ್ತಿಲ್ಲ ಎಂದಿದ್ದರು. ಕೊನೆಗೆ ಆ ವಿಷಯ ಅಲ್ಲಿಯೇ ತಣ್ಣಗಾಯಿತು. ಅದರ ನಡುವೆಯೇ,  ವರ್ತೂರು ಸಂತೋಷ್ ಹಾಗೂ ಬಿಗ್​ಬಾಸ್​ನ ಇನ್ನೋರ್ವ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಮಧ್ಯೆ ಕುಚ್ ಕುಚ್​ ನಡೆಯುತ್ತಿದೆ ಎಂದೇ ಸದ್ದು ಮಾಡಿತ್ತು.

ಬಿಗ್​ಬಾಸ್​ ಇತಿಹಾಸದಲ್ಲೇ ಸಿಕ್ಕಿರದ ಗಿಫ್ಟ್​ ನನಗೆ ಸಿಕ್ಕಿದೆ: ಲೈವ್​ನಲ್ಲಿ ಬಂದು ಖುಷಿ ಹಂಚಿಕೊಂಡ ಐಶ್ವರ್ಯಾ
 
ಇದೀಗ ಎಲ್ಲ ವಿಷಯಗಳಿಗೂ ತೆರೆ ಎಳೆದಿರುವ ವರ್ತೂರು ಸಂತೋಷ್​ ಅವರು ಮತ್ತೊಂದು ಮದುವೆಗೆ ಸಿದ್ಧವಾಗಿರುವ ಬಗ್ಗೆ ಮಾತನಾಡಿದ್ದಾರೆ. ನ್ಯೂಸ್​ ಬೀಟ್​ ಕನ್ನಡ ಎನ್ನುವ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ವರ್ತೂರು ಅವರು, ನನ್ನ ಜೀವನದಲ್ಲಿ ಏನಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದೇನೋ ಹೇಳ್ತಾರಲ್ಲ, ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲುದೇ ಎಂದು. ಹಾಗೆ ಆಗಿದೆ ನನ್ನ ಜೀವನ. ಆದರೆ ನಾನು ಮುಂದಿನ ಹೆಜ್ಜೆ ಇಡುತ್ತಿದ್ದೇನೆ. ಮತ್ತೊಂದು ಮದುವೆಗೆ ಸಿದ್ಧನಾಗಿದ್ದೇನೆ. ಹುಡುಗಿಯೂ ನಮ್ಮ ಸಂಬಂಧಿಕಳೇ. ಅವಳ ಜೊತೆ ಒಡನಾಟವಿದೆ. ಶೀಘ್ರದಲ್ಲಿಯೇ  ಮದುವೆಯಾಗುತ್ತೇವೆ ಎಂದಿದ್ದಾರೆ ಸಂತೋಷ್​.

ಇದೇ ವೇಳೆ, ತನಿಷಾ ಕುಪ್ಪಂಡ ಅವರ ವಿಷಯವನ್ನೂ ತಿಳಿಸಿದ ವರ್ತೂರು ಅವರು, ನಾನು ಮದ್ವೆಯಾಗ್ತಿದ್ದೇನೆ ಎಂದು ಹೇಳಿದ ತಕ್ಷಣ ಮತ್ತೆ ತನಿಷಾ ಹೆಸರನ್ನು ಎಳೆದು ತರಬೇಡಿ ಪಾಪ. ಅವಳು ನನ್ನ ಫ್ರೆಂಡ್ ಅಷ್ಟೇ. ಈ ವಿಡಿಯೋ ನೋಡ್ತಿರೋರಿಗೆ ನಾನು ಸ್ಪಷ್ಟನೆ ಕೊಡುತ್ತಿದ್ದೇನೆ. ನಾನು ಮದ್ವೆಯಾಗ್ತಿರೋ ಹುಡುಗಿ ನನ್ನ ಸಂಬಂಧಿಕಳು. ಇಬ್ಬರೂ ಮೀಟ್​ ಆಗ್ತಾ ಇರ್ತೇವೆ, ಮತ್ತೆ ತನಿಷಾ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ. ಹುಡುಗನಿಗೆ ಹುಡುಗಿ ಇರಬೇಕು, ಹುಡುಗಿಗೆ ಹುಡುಗನೊಬ್ಬ ಇರಬೇಕು. ಅಂದ್ರೆ ಮಾತ್ರ ಜೀವನ ಆಗುವುದು. ಎಲ್ಲರಿಗೂ ಒಬ್ಬೊಬ್ಬರು ಇದ್ದೇ ಇರುತ್ತಾರೆ ಎಂದೂ ಹೇಳಿದ್ದಾರೆ ವರ್ತೂರು.  

ಉಪೇಂದ್ರ ಇರೋ ಕಡೆ ಬಿಗ್​ಬಾಸ್ ಯಾಕೆ? ಅವ್ರೊಂದು ಹೇಳಿದ್ರೆ, ಇವ್ರೊಂದು ಹೇಳ್ತಾರೆ- ಸುದೀಪ್​ ಮಾತು ಕೇಳಿ...

Latest Videos
Follow Us:
Download App:
  • android
  • ios