ಬಿಗ್ ಬಾಸ್ ಫೈನಲಿಸ್ಟ್ ಸ್ಪರ್ಧಿಗೆ ಸನ್ಮಾನಿಸಿದ ಪಿಎಸ್‌ಐಗೆ ವರ್ಗಾವಣೆ ಶಿಕ್ಷೆ ಕೊಟ್ಟ ಪೊಲೀಸ್ ಇಲಾಖೆ
ಬಿಗ್ ಬಾಸ್ ರಿಯಾಲಿಟಿ ಶೋ ಫೈನಲ್ ಕಂಟೆಸ್ಟೆಂಟ್ ಅನ್ನು ಸನ್ಮಾನ ಮಾಡಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.
ಬೆಂಗಳೂರು (ಫೆ.10): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10ರ ಫೈನನ ಲಿಸ್ಟ್ ಸ್ಪರ್ಧಿಯನ್ನು ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನಿಸಿದ್ದಕ್ಕೆ ಸಬ್ ಇನ್ಸ್‌ಪೆಕ್ಟರ್ ಅನ್ನು ವರ್ಗಾವಣೆ ಮಾಡಲಾಗಿದೆ.
ಹೌದು ಬಿಗ್ ಬಾಸ್ ಸ್ಪರ್ಧಿಗೆ ಪೊಲೀಸ್ ಸಮವಸ್ತ್ರ ದಲ್ಲಿ ಸನ್ಮಾನ ಮಾಡಿದ್ದ ಸಬ್ ಇನ್ಸಪೇಕ್ಟರ್ ವರ್ಗಾವಣೆ ಮಾಡಲಾಗಿದೆ. ಬಿಗ್‌ಬಾಸ್ ಫೈನಲಿಸ್ಟ್ ವರ್ತೂರು ಸಂತೋಷ್ ಅವರಿಗೆ ಪಿಎಸ್‌ಐ ತಿಮ್ಮರಾಯಪ್ಪ ಸನ್ಮಾನ ಮಾಡಿದ್ದರು. ಆದ್ದರಿಂದ ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ಅವರು ಸಬ್ ಇನ್ಸಪೇಕ್ಟರ್ ಪಿ.ಎಸ್.ಐ ತಿಮ್ಮರಾಯಪ್ಪನನ್ನು ರಾತ್ರೋ ರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿರುವಾಗ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ಅವರನ್ನು ಬಂಧನ ಮಾಡಲಾಗಿತ್ತು. ನಂತರ, ನ್ಯಾಯಾಲಯದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದರು.
ಸಂತು-ಪಂತು ಬಿಗ್‌ಬಾಸ್ ಪಯಣ ಹೇಗಿತ್ತು? ತುಕಾಲಿ ಮಾತು ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಾ!
ಬಿಗ್ ಬಾಸ್ ಸ್ಪರ್ಧೆಯಲ್ಲಿ ಉತ್ತಮ ಆಟವಾಡಿದ್ದ ವರ್ತೂರು ಸಂತೋಷ್ ಅವರು ಕೋಟ್ಯಂತರ ಅಭಿಮಾನಿಗಳನ್ನು ಘಲಿಸಿದ್ದರು. ಆದರೆ, ಇವರು ಮನರಂಜನೆಯ ಹಿನ್ನೆಲೆಯಿಂದ ಪ್ರಸಿದ್ಧಿ ಗಳಿಸಿದ್ದರಿಂದ ಅವರನ್ನು ಸರ್ಕಾರಿ ಅಧಿಕಾರಿಗಳು ಕರ್ತವ್ಯದಲ್ಲಿರುವಾಗ ಗೌರವಿಸುವಂತಿಲ್ಲ. ಆದರೂ, ವರ್ತೂರು ಸಂತೋಷ್ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಾಗ ಅವರಿಗೆ ಸನ್ಮಾನಿಸಿದ್ದ ಪಿಎಸ್‌ಐ ಪೊಲೀಸ್ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದ್ದರು.
ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಪ್ರಕರಣದ ಆರೋಪಿಯೂ ಆಗಿರುವ ವರ್ತೂರು ಸಂತೋಷ್‌ಗೆ ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನಿಸಿದ್ದಕ್ಕೆ ಪಿಎಸ್‌ಐ ತಿಮ್ಮರಾಯಪ್ಪ ಅವರನ್ನು ವರ್ತೂರು ಪೊಲೀಸ್ ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮನರಂಜನೆಗೆ ಎಲ್ಲರೂ ದಾಸರೇ ಆಗಿದ್ದಾರೆ. ಯಾವುದೇ ವೃತ್ತಿ, ಉದ್ಯೋಗವಿದ್ದರೂ ಸಿನಿಮಾ, ಹಾಡು, ಧಾರಾವಾಹಿ ಹಾಗೂ ಟಿವಿಯಲ್ಲಿ ಪ್ರಸಾರವಾಗುವ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುವುದಕ್ಕೆ ಮಾತ್ರ ಯಾವುದೇ ನಿರ್ಬಂಧವಿಲ್ಲ. ವೃತ್ತಿ ಸಮಯದಲ್ಲಿ ಮನರಂಜನೆ ನೀಡುವವರನ್ನು ಅನುಕರಣೆ ಮಾಡುವುದು ಹಾಗೂ ಅವರ ಬಗೆಗಿನ ಅಭಿಮಾನವನ್ನು ತೋರಿಸುವುದಕ್ಕೆ ಅವಕಾಶವಿಲ್ಲ.
ತನಿಷಾ ಹೊಟೆಲ್‌ಗೆ ಬಂದ್ರು ವರ್ತೂರು ಸಂತೋಷ್; ತಿಂಡಿ ತಿಂದ್ರು, ಬಳಿಕ ಏನಂದ್ರು ನೋಡಿ..!
ಬಿಗ್ ಬಾಸ್ ಸಂತು-ಪಂತು ಮಾತಿಗೆ ಬಿದ್ದು ಬಿದ್ದು ನಗ್ತೀರಿ: ಸಂತು – ಪಂತು ಜೋಡಿಯಾದ ಇಬ್ಬರೂ ಆಡಿದ ಮಾತುಗಳಿಗೆ, ಆಡಿದ ಆಟಗಳಿಗೆ ಲೆಕ್ಕವೇ ಇಲ್ಲ. ಎಷ್ಟೇ ಮಾತುಗಳು ಕೇಳಿಬಂದರೂ ಅವರ ಸ್ನೇಹದಲ್ಲಿ ಬಿರುಕು ಬರಲೇ ಇಲ್ಲ. ಹಾಗೆಂದು ಭಿನ್ನಾಭಿಪ್ರಾಯಗಳಿಲ್ಲ ಎಂದಲ್ಲ. ಒಬ್ಬರಿಗೊಬ್ಬರು ಮಾತುಗಳಲ್ಲಿ ತಿವಿದುಕೊಂಡಿದ್ದು ಇದೆ, ಮುನಿಸಿಕೊಂಡಿದ್ದು ಇದೆ. ಆದರೆ ಮರುಕ್ಷಣದಲ್ಲಿಯೇ ಅದು ಸರಿಹೋಗಿ ಬಿಗ್‌ಬ್ಯಾಗ್ ಮೇಲೆ ಕೂತು ಹರಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಬಿಗ್‌ಬಾಸ್ ಸ್ಪರ್ಧಿಗಳ ಸಂದರ್ಶನ ನಡೆಸುತ್ತಿದ್ದು, ಅದರಲ್ಲಿ ಈಗ ಇಬ್ಬರು ಸಂತೋಷ್ ಅವರನ್ನು ಕರೆಸಲಾಗಿದೆ. ಬಿಗ್‌ಬಾಸ್ ಪಯಣದ ಕುರಿತು ಮೊದಲಿಗೆ ತುಕಾಲಿ ಸಂತೋಷ್ ಅವರಿಗೆ ಕೇಳಲಾಯಿತು. ಆದರೆ ವಿಶೇಷವೆಂದರೆ ಇಂಗ್ಲಿಷ್ನಲ್ಲಿ ಅನುಭವ ಹೇಳುವಂತೆ ಹೇಳಲಾಯಿತು.