ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಾರೆ...; ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡ್ರೂ ತ್ರಿವಿಕ್ರಮ್‌ನ ನಾಮಿನೇಟ್ ಮಾಡಿದ ಮಂಜು!

ನಾಮಿನೇಷನ್‌ನಿಂದ ಪಾರಾಗಲು ಮ್ಯಾಚ್‌ ಫಿಕ್ಸಿಂಗ್ ಮಾಡಿಕೊಂಡ ತ್ರಿವಿಕ್ರಮ್. ಮಂಚು ಡಬಲ್ ಗೇಮ್‌ನಿಂದ ನೇರವಾಗಿ ನಾಮಿನೇಟ್‌ ಆಗಿದ್ದು ಒಳ್ಳೆಯದ್ದೆ ಎಂದ ನೆಟ್ಟಿಗರು..... 

Bigg boss Ugram manju and Trivikram match fixing nomination gets complicated

ಬಿಗ್ ಬಾಸ್ ಸೀಸನ್ 11 ಇದೀಗ 15ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದಲ್ಲಿ ಟೆಕೆಟ್‌ ಟು ಫಿನಾಲೆ ಪಡೆಯುವ ಅವಕಾಶವಿದೆ. ಹೀಗಾಗಿ ಬಿಗ್ ಬಾಸ್ ಚೆಂಡಿನ ಸುರಿಮಳೆ ಟಾಸ್ಕ್‌ ನೀಡಿದ್ದರು. ಟಾಸ್ಕ್‌ ಶುರುವಾಗುವ ಮುನ್ನವೇ 'ಬಿಟ್ಟರೆ ಕೆಟ್ವಿ ನಾವು ಇಬ್ಬರೂ ಮಾತನಾಡಿಕೊಂಡಿದ್ದೀವಿ ಅಂತ ಗೊತ್ತಾಗಬಾರದು' ಎಂದು ಮಂಜು ಹೇಳಿದ್ದರು.'ಗೊತ್ತಾದರೂ ಪರ್ವಾಗಿಲ್ಲ. ಸ್ಟ್ರಾಟೆಜಿ ತುಂಬಾ ಮುಖ್ಯ' ಎಂದು ತ್ರಿವಿಕ್ರಮ್ ಹೇಳುತ್ತಾರೆ.  ಅಲ್ಲಿಗೆ ಸುಮ್ಮನಾಗದ ಮಂಜು 'ವಾದ ವಿವಾದಕ್ಕೆ ಕರೆಕ್ಟ್‌ ಪಾಯಿಂಟ್ ಇಟ್ಟರೆ ಕಣ್ಣಲ್ಲಿ ನೀರು ಬಂದುಬಿಡಬೇಕು' ಎಂದು ಟೀಕೆ ಮಾಡುತ್ತಾರೆ. ಮ್ಯಾಚ್ ಫಿಕ್ಸಿಂಗ್ ಪ್ರಕಾರ ಇಬ್ಬರೂ 4 ಸುತ್ತುಗಳಲ್ಲಿ ಸಖತ್ ಸೇಫ್ ಆಗಿ ಆಟವಾಡಿಕೊಂಡು ಬರುತ್ತಾರೆ ಆದರೆ 5ನೇ ಸುತ್ತಿನಲ್ಲಿ ಗೌತಮಿ ಜಾದವ್ ಗೆಲುವು ಸಾಧಿಸುತ್ತಾರೆ. ಆಗ ಮಂಜು ತಮ್ಮ ಗೇಮ್ ಬದಲಾಯಿಸುತ್ತಾರೆ. 

ಮ್ಯಾಚ್ ಫಿಕ್ಸಿಂಗ್ ಪ್ರಕಾರ ತ್ರಿವಿಕ್ರಮ್ ಎಲ್ಲಿಯೂ ಮಂಜುನ ಬಿಟ್ಟು ಕೊಡಲಿಲ್ಲ ಆದರೆ ಮಂಜು ಮಾತ್ರ ಹನುಮಂತುನ ಸೇಫ್ ಮಾಡಿಕೊಂಡು ತ್ರಿವಿಕ್ರಮ್‌ನ ಟಾರ್ಗೆಟ್ ಮಾಡುತ್ತಾರೆ. 'ವ್ಯಕ್ತಿತ್ವದ ವಿಚಾರದಲ್ಲಿ ತ್ರಿವಿಕ್ರಮ್‌ಗಿಂತ ಹನುಮಂತು ಮೇಲಿದ್ದಾನೆ. ಕೆಲವೊಂದು ವಿಚಾರಗಳಲ್ಲಿ ತ್ರಿವಿಕ್ರಮ್‌ ಅಲ್ಲಿಂದ ಇಲ್ಲಿಗೆ ಹೇಳಿದ್ದಾನೆ. ಟಾಸ್ಕ್‌ನಲ್ಲಿ ತ್ರಿವಿಕ್ರಮ್ ತೂಕ ಜಾಸ್ತಿ ಇದೆ ಆದರೆ ಎಂಟರ್‌ಟೇನ್ಮೆಂಟ್‌ನಲ್ಲಿ ಹನುಮಂತು ತೂಕ ಜಾಸ್ತಿ ಇದೆ' ಎಂದು ಮಂಜು ಹೇಳುತ್ತಾರೆ. ಆಗಲೂ ಕೂಡ 'ನಾನು ಯಾರ ಹೆಸರು ತೆಗೆದುಕೊಂಡಿಲ್ಲ' ಎಂದು ತ್ರಿವಿಕ್ರಮ್ ಹೇಳುತ್ತಾರೆ. 

ಬೆಂಗಳೂರಿನಲ್ಲಿ ಎರಡು ಸೈಟ್ ಖರೀದಿಸಿದ ಸೋನು ಶ್ರೀನಿವಾಸ್ ಗೌಡ; ಈ ವರ್ಷ ಮನೆ ಕಟ್ಟಿಸೋದು ಕನ್ಫರ್ಮ್‌ ಅಂತೆ

ನಾಮಿನೇಷನ್‌ ಮಾತುಕತೆಯಲ್ಲಿ 'ತ್ರಿವಿಕ್ರಮ್ ಹೆಣ್ಣುಮಕ್ಕಳ ಬಗ್ಗೆ ಮಾತನಾಡಿದ್ದಾರೆ' ಎಂಬ ಪಾಯಿಂಟ್ ಮಂಜು ಹೇಳುತ್ತಾರೆ. ಈಗಾಗಲೆ ಮೋಕ್ಷಿತಾ ಬಳಿ ಕ್ಷಮೆ ಕೇಳಿದ್ದೀನಿ ಅಂತ ಕೂಡ ತ್ರಿವಿಕ್ರಮ್ ಪಾಯಿಂಟ್ ಮಾಡುತ್ತಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ವರಸೆ ಬದಲಾಯಿಸಿದ ಮಂಜು 'ನಾನು ಎಂಟರ್‌ಟೇನ್ಮೆಂಟ್ ವಿಚಾರದಲ್ಲಿ ಬೆಸ್ಟ್‌. ನಿನಗಿಂತ ಒಂದು ಲೆವೆಲ್‌ಗೆ ನಾನು ಟಾಸ್ಕ್‌ ಆಡಿದ್ದೀನಿ' ಎನ್ನುತ್ತಾರೆ. 'ಅಯ್ಯೋ ಅದಿಕ್ಕೆ ನೀನು ಆಡಿರುವ ಟಾಸ್ಕ್‌ ಎಲ್ಲವೂ ರದ್ದಾಗಿರುವುದು ನೀನು ಎಲ್ಲದರಲ್ಲೂ ಗ್ರೇ ಏರಿಯಾ ಮಾಡಿಕೊಂಡಿದ್ಯಾ' ಎನ್ನುತ್ತಾರೆ ತ್ರಿವಿಕ್ರಮ್. 'ಇನ್ನೋವೇಟಿವ್ ಆಗಿ ಥಿಂಕ್ ಮಾಡಿದ್ದೀನಿ. ಜೋಕರ್ ವೇಷ ಹಾಕಿದ್ದೀನಿ' ಎಂದು ಮಂಜು ವಾದ ಮಾಡುತ್ತಿರುತ್ತಾರೆ. ಆದರೆ ಇಲ್ಲಿ ನಾಮಿನೇಟ್ ಆಗಿದ್ದು ತ್ರಿವಿಕ್ರಮ್.

Bigg boss Ugram manju and Trivikram match fixing nomination gets complicated

ಹೆತ್ತವರ ಹೆಣಕ್ಕೆ ಬೆಂಕಿ ಇಡಲು ಗಂಡು ದಿಕ್ಕಿಲ್ಲದ ಮನೆ ಎಂದು ಅವಮಾನ ಮಾಡಿದ್ದಾರೆ: ಕಣ್ಣೀರಿಟ್ಟ ಚೈತ್ರಾ ಕುಂದಾಪುರ

ಬಹುಷ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳದೆ ಇದ್ದರೆ ತ್ರಿವಿಕ್ರಮ್‌ ನಿಯತ್ತಿನಿಂದ ಈ ಟಾಸ್ಕ್‌ ಗೆದ್ದು ಸೇಫ್ ಆಗುತ್ತಿದ್ದರು. ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕೆ ಈ ವೀಕೆಂಡ್‌ನಲ್ಲಿ ಉಗ್ರಂ ಮಂಜು ಕೂಡ ನಾಮಿನೇಟ್ ಎಂದು ಕಿಚ್ಚ ಸುದೀಪ್ ತಿಳಿಸಿಬೇಕು ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.

ಯಾರ ಬಾಲವನ್ನು ಹಿಡಿಯೋಕೆ ಹೋಗ್ಬೇಡ,ಅವಳ ಜೊತೆಯಲ್ಲಿರೋದು ಬೇಡ; ಉಗ್ರಂ ಮಂಜುಗೆ ಸಹೋದರಿ ವಾರ್ನಿಂಗ್

Latest Videos
Follow Us:
Download App:
  • android
  • ios