Asianet Suvarna News Asianet Suvarna News

ನಾಳೆ ತೆಲುಗು ಬಿಗ್‌ಬಾಸ್ ಸೀಸನ್ 8, ಇಂದು ಸ್ಪರ್ಧಿಗಳ ಪಟ್ಟಿ ಲೀಕ್, ಕನ್ನಡದವರಿಗೂ ಚಾನ್ಸ್!

ತೆಲುಗು ಬಿಗ್‌ಬಾಸ್ ಸೀಸನ್ 8 ಸೆಪ್ಟೆಂಬರ್ 1 ರಂದು ಪ್ರಾರಂಭವಾಗಲಿದ್ದು, ಸ್ಪರ್ಧಿಗಳ ಪಟ್ಟಿ ಲೀಕ್ ಆಗಿದೆ ಎನ್ನಲಾಗಿದೆ. ಅಭಯ್ ನವೀನ್, ನಿಖಿಲ್ ಮಲಿಯಕ್ಕಲ್ ಸೇರಿದಂತೆ ಒಟ್ಟು 18 ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.

Bigg Boss Telugu season 8 Contestants List Leaked participant name here gow
Author
First Published Aug 31, 2024, 7:58 PM IST | Last Updated Sep 1, 2024, 1:52 PM IST

ಕಲರ್ಸ್ ಕನ್ನಡದಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್ 11   ಶೀಘ್ರದಲ್ಲೇ ಪ್ರಸಾರವಾಗಲಿದ್ದು,  ಕ್ಷಣ ಗಣನೆ ಆರಂಭವಾಗಿದೆ.   ಇದೆಲ್ಲದ ನಡುವೆ ತೆಲುಗು ಬಿಗ್‌ಬಾಸ್  ಸೀಸನ್ 8ರ  ಸೆಪ್ಟೆಂಬರ್ 1 ಅಂದರೆ ನಾಳೆ ಪ್ರಸಾರವಾಗಲಿದೆ. ಈ ಬಾರಿ ಕೂಡ ತೆಲುಗಿನ ಫೇಮಸ್‌ ನಟ ನಾಗಾರ್ಜುನ ಅವರು ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ  ಶೋಗೆ ಸಂಬಂಧಿಸಿದ ಪ್ರೋಮೋಗಳು ರಿಲೀಸ್ ಆಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಯಾರೆಕ್ಕ ಬರಬಹುದು ಎಂಬ ಚರ್ಚೆಗಳು ಕಳೆದ ಒಂದು ತಿಂಗಳಿನಿಂದ ನಡೆಯುತ್ತಿತ್ತು. ಈ ಬಾರಿ ಒಟ್ಟು 18 ಸ್ಪರ್ಧಿಗಳು ಇರಲಿದ್ದು, ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಇದೀಗ ಶೋ ನಡೆಯುವ  ಒಂದು ದಿನಕ್ಕೆ ಮುಂಚಿತವಾಗಿ ಸ್ಪರ್ಧಿಗಳ ಲಿಸ್ಟ್ ಲೀಕ್ ಆಗಿದೆ.

ದರ್ಶನ್ ಸಿನಿ ಜೀವನ 2027ಕ್ಕೆ ಅಂತ್ಯ ಎಂದ ಜೋತಿಷ್ಯ ಶಾಸ್ತ್ರ! ಸಿನೆಮಾ ಬಿಟ್ಟು ದಾಸನ ಹೊಸ ಜರ್ನಿ ಆರಂಭ!

ತೆಲುಗು ಸಿನೆಮಾಳ ನಟ ಅಭಯ್ ನವೀನ್, ತೆಲುಗು ಕಿರುತೆರೆ ನಟ ನಿಖಿಲ್ ಮಲಿಯಕ್ಕಲ್, ದೂರದರ್ಶನ ನಟ ನಾಗ ಮಣಿಕಂಠ, ರೇಡಿಯೋ ಜಾಕಿ ಮತ್ತು ವಿಡಿಯೋ ಜಾಕಿಯಾಗಿ  ಶೇಖರ್ ಬಾಷಾ , ನಟಿ ಮತ್ತು ನೃತ್ಯಗಾರ್ತಿ ನೈನಿಕಾ ಅನರುಸು, ನಟ ಕಿರಾಕ್ ಸೀತಾ, ಡಿಜಿಟಲ್‌ ಮಾಧ್ಯಮದಲ್ಲಿ ಹಾಸ್ಯದ ಕಂಟೆಂಟ್‌ಗಳಿಂದ ಫೇಮಸ್‌ ಆಗಿರುವ ಬೆಜವಾಡ ಬೇಬಕ್ಕ, ಕಿರುತೆರೆ ನಟಿ ವಿಷ್ಣುಪ್ರಿಯಾ ಭೀಮನೇನಿ, ಹಿರಿಯ ನಟ ಆದಿತ್ಯ ಓಂ, ನಟಿ ಸೋನಿಯಾ ಆಕುಲಾ,  ಪೋಷಕ ನಟ ಖಯ್ಯೂಮ್ ಅಲಿ ಇಷ್ಟು ಜನರ ಹೆಸರು ಈಗ ಲೀಕ್ ಆಗಿದೆ ಎಂದು ತೆಲುಗು ಮಾಧ್ಯಮಗಳು ಸುದ್ದಿ ಮಾಡಿದೆ.

ಇದಲ್ಲದೆ, ಗಾಯಕ ಸಾಕೇತ್, ವಿಲನ್ ಪಾತ್ರಗಳ ಪ್ರಸಿದ್ದ ನಟ ಶಾಫಿ, ಸುದ್ದಿ ನಿರೂಪಕಿ ಕಲ್ಯಾಣಿ, ಆ್ಯಂಕರ್ ವಿಷ್ಣುಪ್ರಿಯಾ , ಯಶ್ಮಿ ಗೌಡ,   ತೇಜಸ್ವಿನಿ ಗೌಡ, ಪ್ರೇರಣಾ ಕಂಬಂ, ನಾಗ ಮಣಿಕಂಠ, ಪರಮೇಶ್ವರ್ ಹಿವ್ರಳೆ, ರಿಂಗ್ ರಿಯಾಜ್, ವರ್ಷಿಣಿ ಸುಂದರರಾಜನ್, ರಿತು ಚೌಧರಿ,   ಶೇಖರ್ ಬಾಷಾ, ಮಾಡೆಲ್ ರವಿತೇಜ, ನಿರ್ದೇಶಕ ಪರಮೇಶ್ವರ್, ಅಂಜಲಿ ಪವನ್, ನಿರೂಪಕಿ ಸೌಮ್ಯಾ ರಾವ್,  ಅಭಿರಾಮ್ ವರ್ಮಾ ಬಿಗ್ ಬಾಸ್‌ಗೆ ಪ್ರವೇಶಿಸಲಿದ್ದಾರೆ ಎಂದು ಕೇಳಿ ಬರುತ್ತಿರುವ ಹೆಸರು. ಇಷ್ಟು ಜನರಲ್ಲಿ ಯಾರು ಎಂಟ್ರಿ ಕೊಡಬಹುದು ಎಂಬುದನ್ನು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಕಿಚ್ಚ ದಿಢೀರ್ ಸುದ್ದಿಗೋಷ್ಠಿ: ಬಿಗ್‌ಬಾಸ್‌ ಕನ್ನಡ 11 ನಿರೂಪಣೆ ಬಗ್ಗೆ ಗೊಂದಲದ ಹೇಳಿಕೆ!

ಇದರಲ್ಲಿ ಯಶ್ಮಿ ಗೌಡ ಕನ್ನಡದಾಕೆ, ಇದರ ಜೊತೆಗೆ ತೇಜಸ್ವಿನಿ ಗೌಡ ಕೂಡ ಕನ್ನಡದವರೇ ಆಗಿದ್ದಾರೆ. ಇನ್ನು ಮೈಸೂರಿನ ನಿಖಿಲ್ ಮಲಿಯಕ್ಕಲ್ ಕೂಡ ಕನ್ನಡದವರೇ ಆಗಿದ್ದಾರೆ.  ಇನ್ನು ಶಿವಮೊಗ್ಗ ಮೂಲದ ಸೌಮ್ಯ ರಾವ್‌ ಕೂಡ ಕನ್ನಡದವರೇ ಆಗಿದ್ದಾರೆ, ಮೂಲತಃ ಕನ್ನಡದವರಾದ ಇವರೆಲ್ಲರೂ ತೆಲುಗಿನ ಧಾರವಾಹಿ, ಕಿರುತೆರೆಯಲ್ಲಿ  ಫೇಮಸ್ ಆಗಿದ್ದಾರೆ. ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ ಕೂಡ ಹೊಂದಿದ್ದಾರೆ. ತೆಲುಗು ಬಿಗ್‌ಬಾಸ್ ನಲ್ಲಿ ಇವರು ಸ್ಪರ್ಧಿಗಳು ಎಂದು ಹೇಳಲಾಗುತ್ತಿದೆ. ಇನ್ನು ಯಾರೆಲ್ಲ ಈ ಶೋನಲ್ಲಿ ಕಾಣಿಸಿಕೊಳ್ಳಬಹುದು ಎಂಬುದು ಬಿಗ್‌ಬಾಸ್‌ ಶೋ ಆರಂಭವಾದ ಬಳಿಕವಷ್ಟೇ ಗೊತ್ತಾಗಲಿದೆ.

ಬಿಗ್‌ಬಾಸ್‌ ಆರಂಭವಾದ 4 ಅಥವಾ 5 ನೇ ವಾರದಲ್ಲಿ ಹಿಂದಿನ ಸೀಸನ್‌ಗಳ ಮಾಜಿ ಸ್ಪರ್ಧಿ  ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಬಹುದು ಎನ್ನಲಾಗಿದೆ. ಭಾನುವಾರ  ಅಧಿಕೃತವಾಗಿ ಪ್ರಾರಂಭವಾಗಲಿರುವ ಕಾರಣ ಅದಕ್ಕೂ ಒಂದು ದಿನ ಮೊದಲೇ ಚಿತ್ರೀಕರಣ ನಡೆದಿದೆ. ಸ್ಪರ್ಧಿಗಳ  ನೃತ್ಯ ಕಾರ್ಯಕ್ರಮದ ಶೂಟಿಂಗ್ ಮುಗಿಸಲಾಗಿದೆಯಂತೆ. ಬಿಗ್ ಬಾಸ್ 8 ತೆಲುಗು ಸ್ಪರ್ಧಿಗಳ ಎಂಟ್ರಿ ಇಂದು (ಆಗಸ್ಟ್ 31) ಚಿತ್ರೀಕರಣ ನಡೆಲಿದೆ ಎನ್ನಲಾಗಿದೆ. ನಾಳೆ ರಾತ್ರಿಯಿಂದ ಪ್ರಸಾರವಾಗಲಿದೆ.

Latest Videos
Follow Us:
Download App:
  • android
  • ios