Asianet Suvarna News Asianet Suvarna News

ದರ್ಶನ್ ಸಿನಿ ಜೀವನ 2027ಕ್ಕೆ ಅಂತ್ಯ ಎಂದ ಜೋತಿಷ್ಯ ಶಾಸ್ತ್ರ! ಸಿನೆಮಾ ಬಿಟ್ಟು ದಾಸನ ಹೊಸ ಜರ್ನಿ ಆರಂಭ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಅವರ ಭವಿಷ್ಯದ ಬಗ್ಗೆ ಜೋತಿಷ್ಯ ಶಾಸ್ತ್ರ ಏನು ಹೇಳುತ್ತದೆ? ದರ್ಶನ್ ಮತ್ತೆ ಸಿನಿಮಾದಲ್ಲಿ ನಟಿಸುತ್ತಾರಾ? ಅಥವಾ ಬೇರೆಯದೇ ಹಾದಿ ಹಿಡಿಯುತ್ತಾರಾ?

actor darshan film career end in 2027 says astrologer prashant kini gow
Author
First Published Aug 31, 2024, 6:23 PM IST | Last Updated Aug 31, 2024, 10:50 PM IST

ಬೆಂಗಳೂರು (ಆ.31): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ ಸದ್ಯ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ.  ದರ್ಶನ್ ಕನ್ನಡಕ್ಕೆ ಸಿಕ್ಕಿದ್ದ ಸೂಪರ್ ಸ್ಟಾರ್. 60ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಮಾಸ್ ಹೀರೋ.. ಆದ್ರೆ ಆ ಒಂದು ಕೊಲೆ ದರ್ಶನ್ ಬಣ್ಣದ ಭವಿಷ್ಯವನ್ನೇ ಮುಗಿಸಿ ಬಿಡ್ತಾ? ಹೌದು ಎನ್ನುತ್ತಿದೆ ಜೋತಿಷ್ಯ ಶಾಸ್ತ್ರ. ಹಾಗಾದ್ರೆ ದರ್ಶನ್ 'ಮತ್ತೆ ಸಿನಿಮಾದಲ್ಲಿ ನಟಿಸಲ್ವಾ? ಸಿನಿಮಾ ಬಿಟ್ಟು ದರ್ಶನ್‌ಗೆ ಬದುಕೋಕೆ ಆಗುತ್ತಾ?

ನಟ ದರ್ಶನ್ ಕನ್ನಡ ಬೆಳ್ಳಿತೆರೆ ಮೇಲೆ ಮಿನುಗುತ್ತಿದ್ದ ಮುನುಗುತಾರೆ. ಅಪ್ಪ ತೂಗುದೀಪ ಶ್ರೀನಿವಾಸ್ ದೊಡ್ಡ ಖಳನಟನಾಗಿ ಹೆಸರು ಮಾಡಿದ್ರು, ಅಪ್ಪನ ಹೆಸರು ಹೇಳದೇ ಸ್ವಂತ ಪ್ರತಿಭೆ ನಂಬಿ ಒಬ್ಬ ಲೈಟ್ ಬಾಯ್ ಆಗಿ ಕೆಲಸ ಮಾಡಿಕೊಂಡು, ಸಪೋರ್ಟಿಂಗ್ ರೋಲ್ ಮಾಡುತ್ತಾ ಹಿರೋ  ಆಗಿ ಬೆಳೆದಾತ.

ಬಿಸ್ಕತ್, ಡ್ರೈ ಫ್ರೂಟ್ಸ್, ಬಟ್ಟೆಯೊಂದಿಗೆ ದರ್ಶನ್ ನೋಡಲು ಬಳ್ಳಾರಿ ಜೈ ...

ದಾಸನ ಸಿನಿ ಜೀವನ ನಿರ್ಧರಿಸುತ್ತಾ ಒಂದು ಕೊಲೆ?
ದರ್ಶನ್ ಸ್ಟಾಂಡಲ್‌ವುಡ್‌ನಲ್ಲಿ ತನ್ನದೇ ಬ್ಯಾಂಡ್ ಸೃಷ್ಟಿಸಿಕೊಂಡು ಬಾಕ್ಸಾಫೀಸ್ ಸುಲ್ತಾನ ಅಂತಾನೆ ಹೆಸರು ಪಡೆದಿದ್ದ. ಆದ್ರೆ ರೇಣುಕಾ ಸ್ವಾಮಿ ಒಂದು ಕೊಲೆ ದರ್ಶನ್ ಬ್ಯಾಂಡ್ ವ್ಯಾಲ್ಕು ಕಳೆದುಕೊಳ್ಳೋ ಹಾಗೆ ಮಾಡಿದೆ. ದಚ್ಚು ಈಗ ಜೈಲು ಹಕ್ಕಿ. ಇನ್ನೇನು ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತೆ. ದಾಸ ಆಚೆ ಬರ್ತಾನೆ. ಮತ್ತೆ ಆನೆ ನೆಡೆದಿದ್ದೇ ದಾರಿ, ಬಾಸ್ ಸಿನಿಮಾ ಮಾಡ್ತಾರೆ ಅಂತ ಫ್ಯಾನ್ಸ್ ಆಸೆಗಣ್ಣಿನ ಗೋಪುರ ಕಟ್ಟಿಕೊಂಡು ಕಾಯುತ್ತಿದ್ದಾರೆ. ಆದ್ರೆ ದರ್ಶನ್ ಸಿನಿ ಖರಿಯರ್ ಎಂಡ್ ಆಗುತ್ತೆ ಅನ್ನೋ ಬೆಂಕಿ ಬಿರುಗಾಳಿಯಂತಾ ಸುದ್ದಿಯೊಂದು ಸ್ಯಾಂಡಲ್‌ವುಡ್‌ನ ಆವರಿಸಿದೆ.

ದರ್ಶನ್‌ಗೆ ಬಳ್ಳಾರಿ ಬೇಡ ತಿಹಾರ್ ಜೈಲಿಗೆ ಕಳುಹಿಸಿ, ಅತ್ಯಂತ ಕೆಟ್ಟ ಸೆರೆಮನೆ ಕಿರಣ್ ಬೇಡಿಯಿಂದ ಬದಲಾಯ್ತು

2027 ವರೆಗೂ ದರ್ಶನ್‌ಗಿದೆಯಂತೆ ಸಂಕಷ್ಟಗಳ ಸರಮಾಲೆ!
ನಟ ದರ್ಶನ್‌ ಗೆ ಕೆಟ್ಟ ಸಮಯ. ಕೊಲೆ ಆರೋಪದ ಸುಳಿಗೆ ಸಿಕ್ಕಿ ಒದ್ದಾಡುತ್ತಿರುವ ದರ್ಶನ್‌ ಗೆ ಹೇಗಾದ್ರು ಮಾಡಿ ಹೊರ ಬರಬೇಕು ಅನ್ನೋ ಹಂಬಲ, ಆದ್ರೆ ಅದಕ್ಕೆ ಸದ್ಯಕ್ಕೆ ಸರಿಯಾದ ಸಮಯ ಇಲ್ವಂತೆ.  ದರ್ಶನ್‌ ಜೀವನದ ಸರಿಯಾದ ಟೈಂ ಶುರುವಾಗೋದು 2027ಕ್ಕೆ ಅಂತೆ.  ಅಲ್ಲಿವರೆಗೂ ದರ್ಶನ್ ಜೈಲಿನಿಂದ ಹೊರಬರಲ್ವಾ ಅಂತ ಚಿಂತೆ ಬೇಡ, ಜೈಲಿನಿಂದ ಹೊರ ಬಂದ್ರೂ ಈ ಕೊಲೆ ಕೇಸ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿ ಟಾರ್ಚರ್ ಮಾಡುತ್ತೆ ಅಂತ ಕಾನೂನು ತಜ್ಞರು ಹೇಳುತ್ತಿದ್ದಾರೆ. ಇದಕ್ಕೆ ಸರಿಯಾಗಿ ಜೋತಿಷ್ಯಿ ಒಬ್ಬರು, ದರ್ಶನ್‌ಗೆ ರೈಟ್ ಟೈಂ ಬರೋದು 2027ಕ್ಕೆ ಎಂದಿದ್ದಾರೆ. ಅದು ಕೂಡ ದರ್ಶನ್ ಚಿತ್ರರಂಗವನ್ನ ತೊರೆದು ಕಂಪ್ಲೇಟ್ ರಾಜಕೀಯಕ್ಕೆ ಬರುತ್ತಾರೆ ಅಂತ ಪ್ರಶಾಂತ್ ಕಿಣಿ ಹೆಸರಿನ ಜೋತಿಷಿ  ಭವಿಷ್ಯ ನುಡಿದಿದ್ದಾರೆ.

2027ರ ಅಕ್ಟೋಬರ್ ವರೆಗೂ ದಚ್ಚು ಸಿನಿ ಕರಿಯರ್ ಸೂಪರ್!
ದರ್ಶನ್ ರಾಜಕೀಯಕ್ಕೆ ಬರುತ್ತಾರಂತೆ, 2027ರಿಂದ ದರ್ಶನ್ ರಾಜಕೀಯ ಜೀವನ ಶುರುವಾಗುತ್ತಂತೆ. ಮುಂಬರುವ ಲೋಕಸಭೆ ಎಲೆಕ್ಷನ್‌ನಲ್ಲಿ ದರ್ಶನ್ ರಾಜಕಾರಣಿ ಆಗುತ್ತಾರೆ ಅಂತ ಜೋತಿಷಿ ಪ್ರಶಾಂತ್ ಕಿಣಿ ಟ್ವಿಟ್ ಮಾಡಿ ಭವಿಷ್ಯ ಹೇಳಿದ್ದಾರೆ. ಇದೇ ಟೈಂನಲ್ಲಿ ದರ್ಶನ್ ಸಿನಿ ಖರಿಯರ್ ಬಗ್ಗೆಯೂ ಹೇಳಿರೋ ಜೋತಿಷಿ, 2024ರ ಆಗಸ್ಟ್‌ನಿಂದ 2027ರ ಅಕ್ಟೋಬರ್ ವರೆಗು ದಚ್ಚು ಸಿನಿ ಜೀವನ ಸೂಪರೋ ಸೂಪರ್. ಆ ನಂತ್ರ ಕಥಮ್ ಎಂದಿದ್ದಾರೆ.

ದರ್ಶನ್ ಸಿನಿ ಲೈಫ್ ಮುಗಿದು ಆಗೋಕೆ ಸಾಧ್ಯನಾ? ಅದನ್ನ ಊಹಿಸೋಕು ಆಗುವುದಿಲ್ಲ. ಯಾಕಂದ್ರೆ, ದರ್ಶನ್ ಸಿನಿಮಾದಲ್ಲೇ ದುಡಿದು ಹೆಸರು ಮಾಡಿ, ಸಿನಿಮಾಗೇ ಉಸಿರಾಡುತ್ತೇನೆ ಅಂದಾತ. ಈ ಸಿನಿ ಜೀವನ ಕಟ್ಟಿಕೊಳ್ಳೋಕೆ ದಾಸನ ಪ್ರಯತ್ನಗಳು ಅಷ್ಟಿಷ್ಟಲ್ಲ. ಅವಕಾಶಕ್ಕಾಗಿ ಅನೇಕರ ಮನೆ ಅಲೆದಿದ್ದ. ದರ್ಶನ್ ತೂಗುದೀಪ ಶ್ರೀನಿವಾಸ್ ಅನ್ನೋ ದೊಡ್ಡ ಹಿನ್ನೆಲೆ ಇದೂ ಸಣ್ಣ ಪುಟ್ಟ ಪಾತ್ರ ಮಾಡುತ್ತಾ ಹೀರೋ ಆಗೋ ಕನಸು ಕಂಡ ಹುಡುಗ ದರ್ಶನ್. ಕೊನೆಗೆ ಅದು ಸಾಧ್ಯವಿಲ್ಲ ಅಂತ ಗೊತ್ತಾಗಿ ಚಿತ್ರರಂಗದ ಸಹವಾಸವೇ ಬೇಡ ಮೈಸೂರು ಸೇರಿದ್ದ.

ಆದ್ರೆ ಹಣೆಬರಹ ಅಳಿಸೋಕೆ ಆಗುತ್ತಾ? ದರ್ಶನ್ ಹಣೆ ಮೇಲೆ ಹೀರೋ ಆಗಿ ಬಣ್ಣ ಬಳಿಯೋ ಟೈಂ ಬಂದಿತ್ತು. ಗಾಂಧಿನಗರದಲ್ಲಿ ಪಿ.ಎನ್ ಸತ್ಯ ಅನ್ನೋ ನಿರ್ದೇಶಕ ಮೆಜೆಸ್ಟಿಕ್ ಅನ್ನೋ ಸಿನಿಮಾ ಮಾಡುವ ಕನಸು ಕಂಡಿದ್ರು. ಆವತ್ತು ದಾಸ ಅನ್ನೋ ಪಾತ್ರವನ್ನ ಕಲ್ಪಿಸಿಕೊಂಡಿದ್ರು ನಿರ್ದೇಶಕ ಸತ್ಯ.  ಆ ಪಾತ್ರಕ್ಕಾಗಿ ಆರಡಿ ಎತ್ತರವಿರೋ ನಟನನ್ನ ಹುಡುಕುತ್ತಿದ್ರು. ಆಗ ದಾಸ ಸಿಕ್ಕಿದ್ದು ಮೈಸೂರಲ್ಲಿ.

ಮೆಜೆಸ್ಟಿಕ್ ಸಿನಿಮಾಗೆ ಎಷ್ಟೇ ಅಡೆ ತಡೆ ಆದ್ರು ದರ್ಶನ್ ಹೀರೋ ಆಗಿ ಲಾಂಚ್ ಆಗೋದು ಫಿಕ್ಸ್ ಆಗಿತ್ತು. ಯಾವುದೇ ಕಷ್ಟಕ್ಕೂ ಅಂಜದೆ, ಪ್ರಾಮಾಣಿಕವಾಗಿ ದುಡಿದಿದ್ದ ದರ್ಶನ್‌ಗೆ ಮೆಜೆಸ್ಟಿಕ್ ಕೈ ಹಿಡಿತು. ಅಂದಿನಿಂದ ದರ್ಶನ್ ಓಡೋ ಕದುರೆಯಾದ್ರು. ಇಂದು ದರ್ಶನ್ 60ಕ್ಕು ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಬೆಳ್ಳಿ ಪರದೆ ಮೇಲೆ ಬಾಕ್ಸಾಫೀಸ್ ಸುಲ್ತಾನ್ ಆಗಿ ಮೆರೆದಿದ್ದಾರೆ. ಇನ್ನೂ ಹತ್ತಾರು ಸಿನಿಮಾಗಳಲ್ಲಿ ಈ ಕರಿಯ ತನ್ನ ಖದರ್ ತೋರಿಸಬೇಕಿದೆ. ನಾನು ಮತ್ತೆ ಸಿನಿಮಾ ಮಾಡಬೇಕು ಅಂತ ಜೈಲ್ಲಿರೋ ದರ್ಶನ್ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆ. ಆದ್ರೆ ಅದು 2027ರ ವರೆಗೆ ಮಾತ್ರ ಅಂತ ಭವಿಷ್ಯವೊಂದು ಹೊರ ಬಂದಿದೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತೆ ದರ್ಶನ್ ಹಣೆ ಬರಹ ಕೆತ್ತಿದ ಆ ದೇವರಿಗೇ ಗೊತ್ತು.

 

Latest Videos
Follow Us:
Download App:
  • android
  • ios