ಹಿಂದಿ ಆಯ್ತು ಈಗ ತೆಲುಗು ಬಿಗ್ ಬಾಸ್ ಕೂಡ ಓಟಿಟಿಯಲ್ಲಿ? ವೀಕ್ಷಕರ ನಿರೀಕ್ಷೆ ಹಚ್ಚಿಸಿದೆ ಪ್ರೋಮೋ...
ಕಿರುತೆರೆ ವೀಕ್ಷಕರಿಗೆ ಪ್ರೈಮ್ ಟೈಮಲ್ಲಿ ನಾನ್ ಸ್ಟಾಪ್ ಮನೋರಂಜನೆ ನೀಡುವುದು ಬಿಗ್ ಬಾಸ್ (Bigg Boss). ಆರಂಭದಲ್ಲಿ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಈ ರಿಯಾಲಿಟಿ ಶೋ (Reality Show) ಈಗ ಸುಮಾರು 7-8 ಭಾಷೆಗಳಲ್ಲಿ ಬರುತ್ತಿವೆ. ಹಿಂದಿ ನಂತರ ಕನ್ನಡ ಮತ್ತು ತೆಲುಗು ಬಿಗ್ ಬಾಸ್ ಹೆಚ್ಚಿನ ಗಮನ ಸೆಳೆದಿತ್ತು. ಹೀಗಾಗಿ ವರ್ಷಕ್ಕೊಂದು ಸೀಸನ್ ಮಾಡಿದ್ದರೂ ತುಂಬಾನೇ ಸ್ಪೆಷಲ್ ಅಗಿರುತ್ತದೆ.
ತೆಲುಗು ಬಿಗ್ ಬಾಸ್‌ನ ಒಟ್ಟು 5 ಸೀಸನ್‌ಗಳನ್ನು ನಟ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ನಿರೂಪಣೆ ಮಾಡಿದ್ದಾರೆ. ಡಿಸೆಂಬರ್ 2021ರಲ್ಲಿ ಬಿಗ್ ಬಾಸ್ ಓಟಿಟಿಯಲ್ಲೂ ಪ್ರಸಾರವಾಗಲಿದೆ. ಆದರೆ ಟಿವಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಂಡ ಮಾಹಿತಿ ನೀಡಿತ್ತು. ಇದೇ ಮೊದಲ ಬಾರಿ ಓಟಿಟಿಯಲ್ಲಿ (OTT) ಶುರುವಾಗುತ್ತಿರುವ ಕಾರಣ ನಾಗಾರ್ಜುನ್ ಅವರೇ ನಿರೂಪಣೆ ಮಾಡಿದ್ದರೆ ಕಡಿಮೆ ಅವಧಿಯಲ್ಲಿ ಫೇಮ್ ಕೂಡ ಸಿಗಬಹುದು, ಎನ್ನವ ಲೆಕ್ಕಾಚಾರ ಮಾಡಲಾಗಿತ್ತು.
ಕೆಲವು ಮೂಲಗಳಿಂದ ಕೇಳಿ ಬಂದಿರುವ ಮಾಹಿತಿ ಪ್ರಕಾರ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಇದೇ ಫೆಬ್ರವರಿ 26ರಂದು ಪ್ರಸಾರವಾಗಲಿದೆ. 'ಈ ವಿಚಾರ ನನಗೆ ಹೇಳಿದಾಗ ನಾನು ಶಾಕ್ ಆದೆ. ಕಾರಣ ಆಗಷ್ಟೆ ಸೀಸನ್ 5 ಮುಕ್ತಾಯವಾಗಿತ್ತು. ಅನುಮಾವಿದೆ ಇದೆಲ್ಲಾ ವರ್ಕ್ ಆಗುತ್ತೋ ಇಲ್ಲವೋ ಅಂತ. ಸ್ಟಾರ್ ಮಾ (Star Maa) ವಾಹಿನಿಯವರು ನನ್ನನ್ನು ಒಪ್ಪಿಸಿದ್ದರು, ಓಟಿಟಿಯಲ್ಲಿ ಬರುವ ಫಾರ್ಮ್ಯಾಟ್ (BB Format) ಸಂಪೂರ್ಣವಾಗಿ ಬದಲಾಗುತ್ತದೆ ಎಂದು. ಟಿವಿಯಲ್ಲಿ ಪ್ರಸಾರವಾದ ಫಿನಾಲೆಯನ್ನು 5-6 ಕೋಟಿ ಜನರು ವೀಕ್ಷಿಸಿದ್ದಾರೆ, ಅದು ತುಂಬಾನೇ ದೊಡ್ಡ ನಂಬರ್. ಹೀಗಾಗಿ ಟಿಆರ್‌ಪಿ (TRP) ಹೆಚ್ಚು ಬಂದಿರುತ್ತದೆ. ಈಗ ಹೊಸ ಚಾಲೆಂಜ್ ನನ್ನ ಎದುರಿಗಿದೆ. ನಾನು ಕೂಡ ಕಾಯುತ್ತಿರುವೆ,' ಎಂದು ನಟ ನಾಗಾರ್ಜುನ ಓಟಿಟಿ ಬಿಬಿ ಬಗ್ಗೆ ಮಾತನಾಡಿದ್ದರು.
![]()
'ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ವಿಭಿನ್ನವಾಗಿರಲಿದೆ ಹಾಗೇ ಅದನ್ನು ಎಂದಿಗೂ ನಿಲ್ಲಿಸುವುದಿಲ್ಲ. ನಿಮ್ಮ ಸದಾ ಮನೋರಂಜಿಸಲು ಟಿವಿ ಬಿಬಿ ಇರಲಿದೆ. ಕ್ರಿಯೇಟಿವ್ ದೃಷ್ಟಿಯಿಂದ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿರುವುದು,' ಎಂದು ವಾಹಿನಿ ಮುಖ್ಯಸ್ಥರಾದ ಅಲೋಕ್ ಮಾತನಾಡಿದ್ದರು.
Bigg Boss: ಈ ಕಂಡೀಷನ್‌ಗೆ ಒಪ್ಪಿದ್ದರೆ ಸೀಸನ್ 16 ಹೋಸ್ಟ್ ಮಾಡುತ್ತಾರಂತೆ ಸಲ್ಮಾನ್!
ಡಿಸ್ನಿ ಹಾಟ್ ಸ್ಟಾರ್‌ನಲ್ಲಿ (Disney Hot Star) ಓಟಿಟಿ ಬಿಬಿ ಪ್ರಸಾರವಾಗುವುದು ಖಚಿತವಾಗಿದೆ. ಅನ್ನಪೂರ್ಣ ಸ್ಟುಡಿಯೋದಲ್ಲಿ (Annapurna Studio) ಸೆಟ್ ಹಾಕಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಣ್ಣ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ವರ್ಷ ಅಭಿಮಾನಿಗಳು ನಿರೀಕ್ಷಿಸಿದ ಕೆಲವೊಂದು ಹೆಸರುಗಳನ್ನು ಪಟ್ಟಿ ಮಾಡಿಕೊಂಡಿದ್ದಾರೆ. ವೈಷ್ಣವಿ ಚೈತನ್ಯಾ, ನಿರೂಪಕ ಶ್ರೀಮುಖಿ, ಕುಶಾಲ್, ಗೀತಾ ಮಾಧುರಿ, ಗಾಯಕ ಹೇಮಾ ಚಂದ್ರು, ಮೌನಿಕಾ ರೆಡ್ಡಿ ಸೇರಿದಂತೆ ಅನೇಕರ ಹೆಸರು ಕೇಳಿ ಬರುತ್ತಿವೆ.
Bigg Boss 15: ಶಿಲ್ಪಾ ತಂಗಿಗೆ ಆಂಟಿ ಅಂದಾಕೆ ಬಿಗ್‌ಬಾಸ್ ವಿನ್ನರ್! ಅಷ್ಟಕ್ಕೂ ಈ ತೇಜಸ್ವಿ ಪ್ರಕಾಶ್ ಯಾರು?
ಕೆಲವು ದಿನಗಳ ಹಿಂದೆ ತಮಿಳು ಓಟಿಟಿ ಬಿಗ್ ಬಾಸ್ ಆರಂಭವಾಗಿದ್ದು ಕಮಲ್ ಹಾಸನ್ (Kamal Hassan) ನಿರೂಪಣೆ ಮಾಡುತ್ತಿದ್ದಾರೆ. ತೆಲುಗು ಮತ್ತು ತಮಿಳು ಫಾರ್ಮ್ಯಾಟ್ ಡಿಫರೆಂಟ್ ಅಗಿದೆ. ಕನ್ನಡದಲ್ಲೂ ಓಟಿಟಿ ಮಾಡಬೇಕು ಎನ್ನು ಪ್ಲ್ಯಾನಿಂಗ್ ಮಾಡಲಾಗಿತ್ತು. ಆದರೆ ಈ ಬಗ್ಗೆ ಇದುವರೆಗೂ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಈ ವರ್ಷ ಸೀಸನ್ 9 ಆರಂಭವಾಗಲಿದ್ದು, ಕಿಚ್ಚ ಸುದೀಪ್ (Kiccha Sudeep) ನಿರೂಪಣೆ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
