ಹೈದರಾಬಾದ್[ಮಾ.06]: ಬಿಗ್ ಬಾಸ್ ವಿನ್ನರ್ ಒಬ್ಬರ ಮೇಲೆ ಪಬ್ ನಲ್ಲಿ ನಡೆದ ದಾಳಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಹೌದು ತೆಲುಗು ಬಿಗ್ ಬಾಸ್ ಸೀಜನ್ 3ರ ವಿಜೇತರಾಗಿದ್ದ, ಗಾಯಕ ರಾಹುಲ್ ಸಿಪ್ಲಿಗುಂಜ್ ಮೇಲೆ ಈ ದಾಳಿ ನಡೆದಿದೆ. ಈ ದಾಳಿ ನಡೆದಿದ್ದೇಕೆ? ಮುಂದಿದೆ ವಿವರ

ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಬುಧವಾರದಂದು ರಾಹುಲ್ ಪಬ್ ಒಂದಕ್ಕೆ ತೆರಳಿದ್ದು, ಈ ವೇಳೆ ಕೆಲ ಜನರಿದ್ದ ಗುಂಪೊಂದು ಅವರನ್ನು ಸುತ್ತುವರೆದು ದಾಳಿ ನಡೆಸಿದೆ. ಈ ವೇಳೆ ವ್ಯಕ್ತಿಯೊಬ್ಬ ರಾಹುಲ್ ತಲೆಗೆ ಬಾಟಲಿಯಿಂದ ಹೊಡೆದಿದ್ದಾನೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ಸದ್ಯ ಟ್ವಿಟರ್ ನಲ್ಲಿ ಹರಿದಾಡುತ್ತಿದ್ದು, ಭಾರೀ ವೈರಲ್ ಆಗಿದೆ.

ಬಿಗ್‌ಬಾಸ್‌ ಪ್ರಥಮ್‌ 99 ಲಕ್ಷ​ಕ್ಕೊ​ಬ್ಬ, 'ನಟ ಭಯಂಕರ'ನ ಮತ್ತೊಂದು ಸಾಹಸ!

ಇನ್ನು ದಾಳಿಯ ವೇಳೆ ರಾಹುಲ್ ಜೊತೆ ಇದ್ದ ಗೆಳೆಯನಿಗೂ ಈ ದುಷ್ಕರ್ಮಿಗಳು ಥಳಿಸಿದ್ದಾರೆನ್ನಲಾಗಿದೆ. ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ರಾಹುಲ್ 'ಕೆಲ ಜನರು ಜಗಳವಾಡಲಾರಂಭಿಸಿದ್ದು, ನೋಡ ನೋಡುತ್ತಿದ್ದಂತೆಯೇ ಹಲ್ಲೆ ನಡೆಸಲಾರಂಭಿಸಿದರು. ನಾನು ಅವರನ್ನು ವಿರೋಧಿಸಿದಾಗ ಇದು ಅತಿರೇಕಕ್ಕೆ ಹೋಯ್ತು. ಈ ದಾಳಿಯಲ್ಲಿ ನನಗೆ ಗಾಯ ಕೂಡಾ ಆಗಿದೆ' ಎಂದಿದ್ದಾರೆ. ಹಲ್ಲೆ ನಡೆಯುತ್ತಿದ್ದಾಗ ಅಲ್ಲಿದ್ದ ಜನರು ಸೆಕ್ಯೂರಿಟಿಗೆ ಈ ಮಾಹಿತಿ ನೀಡಿ, ತಡೆಯಲು ಯತ್ನಿಸಿದ್ದಾರೆ. 

ಸದ್ಯ ಗಚಿಬೋವಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಇನ್ನು ಗಾಯಕ  ರಾಹುಲ್ ಸಿಪ್ಲಿಗುಂಜ್ ತೆಲುಗು ಬಿಗ್ ಬಾಸ್ ಸೀಜನ್ 3ರ ವಿಜೇತರಾಗಿದ್ದು, 50 ಲಕ್ಷ ರೂ. ಗೆದ್ದಿದ್ದರು. 2009ರಲ್ಲಿ ತಮ್ಮ ಹಾಡಿನ ಮೂಲಕ ಫೇಮಸ್ ಅಗಿದ್ದ ರಾಹುಲ್, ಸಿನಿಮಾಗಳಲ್ಲೂ ನಟಿಸಿದ್ದಾರೆ.

ಮದುವೆ ಆಯ್ತು, ಹನಿಮೂನ್‌ಗೆ ಹೊರಟಾಯ್ತು; ನಿವೇದಿತಾ- ಚಂದನ್‌ ನ್ಯೂ ಲೈಫ್‌!