ತಗ್ದು ತಟ್ ಬಿಡ್ತೀನಿ; ದತ್ತು ತೆಗೆದುಕೊಂಡು ಹಳ್ಳಿ ಹುಡುಗಿ ಮೇಲೆ ಸೋನು ಗೌಡ ಗರಂ!

ರಾಯಚೂರಿನ ಹುಡುಗಿಯನ್ನು ದತ್ತು ತೆಗೆದುಕೊಂಡ ಸೋನು ಗೌಡ. ವಿಡಿಯೋದಲ್ಲಿ ಹೊಡಿತೀನಿ ಬಡಿತೀನಿ ಅನ್ನೋ ಪದಗಳನ್ನು ಕೇಳಿ ನೆಟ್ಟಿಗರು ಗರಂ............
 

Bigg Boss Sonu Gowda adopts village girl Sevanthi to provide education vcs

ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸಖತ್ ಫೇಮ್ ಆದ ಸೋನು ಗೌಡ ಈಗ ಪುಟ್ಟ ಹುಡುಗಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಓಟಿಟಿ ಸೀನ್ 1ರಲ್ಲಿ ಮಿಂಚಿದ ನಂತರ ಸೋನು ಹಣೆಬರಹ ಬದಲಾಗಿದೆ. ಹೇಗೋ ದುಡಿಮೆ ಮಾಡಿಕೊಂಡು ಫಸ್ಟ್‌ ಕ್ಲಾಸ್ ಆಗಿ ಬದುಕುತ್ತಿರುವ ಸೋನು ಗೌಡ ಈಗ ಪುಟ್ಟ ಹುಡುಗಿಯನ್ನು ದತ್ತು ತೆಗೆದುಕೊಂಡು ಅಕೆಯ ಜೀವನಕ್ಕೆ ದಾರಿ ಮಾಡುತ್ತಿದ್ದಾಳೆ. 

ಹೇರೋಹಳ್ಳಿ ಬಳಿ ವಾಸಿಸುತ್ತೀರುವ ಸೋನು ಗೌಡ ತಮ್ಮ ಅಪಾರ್ಟ್‌ಮೆಂಟ್‌ ಬಳಿ ಕೂಲಿ ಕಾರ್ಮಿಕರು ಗುಡಿಸಿಲು ಕಟ್ಟಿಕೊಂಡಿದ್ದರು. ಅಲ್ಲಿದ್ದ ನಾಯಿಗಳಿಗೆ ಊಟ ಹಾಕಲು ಹೋಗುತ್ತಿದ್ದ ಸೋನುಗೆ ಸೇವಂತಿ ಅನ್ನೋ ಹುಡುಗಿ ಪರಿಚಯವಾಗಿದ್ದಾಳೆ. ಆಕೆಗೆ ತಿಂಡಿ ತಿನಿಸು, ಬಟ್ಟೆ ಮತ್ತು ಮೇಕಪ್ ಕೊಡಿಸುತ್ತಿದ್ದರು. ಹೀಗಾಗಿ ನನಗೆ ಸೋನು ಅಕ್ಕ ಅಂದ್ರೆ ತುಂಬಾ ಇಷ್ಟ ಸೋನು ಅಕ್ಕ ಬೇಕು ಎಂದು ಆ ಹುಡುಗಿ ಕೂಡ ಹಠ ಮಾಡಿದೆ. ಅಲ್ಲಿಂದ ಸೋನು ತಲೆಯಲ್ಲಿ ದತ್ತು ತೆಗೆದುಕೊಳ್ಳುವ ಯೋಚನೆ ಬರುತ್ತದೆ. ಹೀಗಂತ ಸ್ವತಃ ಸೋನುನೇ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಸುಮಾರು ಎರಡು ತಿಂಗಳ ಕಾಲ ಸೇವಂತಿ ಹುಡುಗಿ ಜೊತೆ ಸೋನು ಯಾವ ವಿಡಿಯೋ ಅಪ್ಲೋಡ್ ಮಾಡಿರಲಿಲ್ಲ. ಯುಟ್ಯೂಬ್‌ನಲ್ಲಿ ಹಣ ಮಾಡುವ ಆಸೆಗೆ ಆಕೆಯನ್ನು ಬಳಸಿಕೊಂಡಿದ್ದೀರಾ ಅಂತ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡಲು ಶುರು ಮಾಡಿದ್ದರು. ಅಲ್ಲಿ ಕೊಟ್ಟರು  ನೋಡಿ ಬಾಂಬ್. 

ಅಬ್ಬಬ್ಬಾ! ಆ ಒಂದು ವಿಡಿಯೋದಿಂದ ಸೋನು ಗೌಡ ಜನಪ್ರಿಯತೆಯನ್ನೇ ಮೀರಿಸಿದ ಶಿಲ್ಪಾ ಗೌಡ ಯಾರು?

ಒಂದು ದಿನ ಸೋನು ಗೌಡ ತಮ್ಮ ಸಹೋದರನ ಜೊತೆ ನೇರವಾಗಿ ಸೇವಂತಿ ಹುಟ್ಟೂರಿಗೆ ಭೇಟಿ ನೋಡಿ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಬರುತ್ತಾರೆ. ಆಕೆಯನ್ನು ದತ್ತು ಕೊಡಲು ಫೋಷಕರು ಕೂಡ ಒಪ್ಪಿಗೆ ನೀಡಿರುವುದರ ಬಗ್ಗೆ ಫೋನ್ ಕಾಲ್ ಮತ್ತು ವಿಡಿಯೋ ಕಾಲನ್ನು ಸಾಕ್ಷಿಯಾಗಿ ನೀಡಿದ್ದಾರೆ. ಅಲ್ಲಿದ ಕರೆದುಕೊಂಡು ಬಂದು ಈಗ ಸ್ಕೂಲ್‌ಗೆ ಸೇರಿಸಲು ಓಡಾಡುತ್ತಿದ್ದಾರೆ. ಆದರೆ ಜನರ ಗರಂ ಆಗಿರುವುದು ಸೋನು ಮಾತನಾಡುವ ಶೈಲಿಗೆ. ಸೋನು ಮಾತುಗಳು ಸ್ವಲ್ಪ ಹೊರಟು ಅಂತ ಬಿಗ್ ಬಾಸ್ ನೋಡಿರುವ ಪ್ರತಿಯೊಬ್ಬರಿಗೂ ಗೊತ್ತಿದೆ ಆದರೆ ಯುಟ್ಯೂಬ್ ವೀಕ್ಷಕರಿಗೆ ಕಿರಿಕಿರಿ ಆಗಿದೆ. ಆ ಪುಟ್ಟ ಹುಡುಗಿ ಸಣ್ಣ ಪುಟ್ಟ ತಪ್ಪು ಮಾಡಂಗಿಲ್ಲ ಆಗಲೇ ತೆಗ್ದು ತಟ್ಟು ಬಿಡುತ್ತೀನಿ...ಹೊಡೆಯುತ್ತೀನಿ ಅಂತ ಗದರುವುದು ಸರಿ ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. 

ಏನ್ ಆಗಿಲ್ಲ ಗುರು, ಆಸ್ಪತ್ರೆಗೂ ಹೋಗಿಲ್ಲ; ಆಕ್ಸಿಡೆಂಟ್ ಬಗ್ಗೆ ಸ್ಪಷ್ಟನೆ ಕೊಟ್ಟ ಸೋನು ಗೌಡ!

ನಾನು ಸೇವಂತಿಯನ್ನು ದತ್ತು ತೆಗೆದುಕೊಂಡಿರುವೆ. ಆಕೆಯ ಜೀವನ ನನ್ನ ಕೈಯಲ್ಲಿದೆ. ಸರಿಯಾಗಿ ಓದಿಲ್ಲ ಮಾಡಿಲ್ಲ ಅಂದ್ರೆ ನಾನೇ ಬುದ್ಧಿ ಹೇಳ ಬೇಕು. ನಾನು ಹೇಗೆ ಇರಬೇಕು ಎಂದು ಹೇಳುವ ಅಧಿಕಾರ ನಿಮಗೆ  ಇಲ್ಲ. ಇದು ನಮ್ಮ ಜೀವನ ಆಕೆಯನ್ನು ಹೇಗೆ ನೋಡಿಕೊಳ್ಳಬೇಕು ಎಂದು ಅವರ ಅಪ್ಪ ಅಮ್ಮ ಮತ್ತು ನನಗೆ ಗೊತ್ತಿದೆ ಎಂದು ವಿಡಿಯೋ ಒಂದರಲ್ಲಿ ನೇರವಾಗಿ ಉತ್ತರ ಕೊಟ್ಟಿದ್ದಾರೆ. 

 

Latest Videos
Follow Us:
Download App:
  • android
  • ios