ಅಬ್ಬಬ್ಬಾ! ಮಾಲ್‌ನಲ್ಲಿ ಬರ್ತಡೇ ಶಾಪಿಂಗ್ ಮಾಡಿದ ಸೋನು ಗೌಡ; ಖರ್ಚು ಎಷ್ಟಾಗಿತ್ತು ನೋಡಿ!

ಹಲವು ದಿನಗಳ ನಂತರ ಮಾಲ್‌ಗೆ ಎಂಟ್ರಿ ಕೊಟ್ಟು ಬರ್ತಡೇ ಶಾಪಿಂಗ್ ಮಾಡಿದ ಸೋನು ಗೌಡ. ಬ್ರ್ಯಾಂಡ್‌ ಬಿಡಿ ಎಂದು ಮನವಿ ಮಾಡಿದ ಅಭಿಮಾನಿಗಳು....
 

Bigg boss Sonu Gowda share birthday shopping updates with friends vcs

ಸೋಷಿಯಲ್ ಮೀಡಿಯಾದಲ್ಲಿ ಟಿಕ್‌ ಟಾಕ್‌ ಮತ್ತು ರೀಲ್ಸ್‌ ಮೂಲಕ ಟ್ರೆಂಡ್‌ ಕ್ರಿಯೇಟ್ ಮಾಡಿದ ಸೋನು ಶ್ರೀನಿವಾಸ್ ಗೌಡ ಕನ್ನಡ ಬಿಗ್ ಬಾಸ್ ಓಟಿಟಿ ಸೀಸನ್‌ನಲ್ಲಿ 1ರಲ್ಲಿ ಸ್ಪರ್ಧಿಸಿದ್ದರು. ಆನಂತರ ಕನ್ನಡ ಕಿರುತೆರೆ ವೀಕ್ಷಕರಿಗೆ ತುಂಬಾ ಹತ್ತಿರವಾಗಿಬಿಟ್ಟರು. ಬಿಗ್ ಬಾಸ್‌ ನಂತರ ಯುಟ್ಯೂಬ್ ಚಾನೆಲ್‌ ಆರಂಭಿಸಿದ ಸೋನು ತಮ್ಮ ದಿನಚರಿ, ಮನೆ, ರೀಲ್ಸ್‌ ಮತ್ತು ಲೈಫ್‌ಸ್ಟೈಲ್‌ ಬಗ್ಗೆ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿರುತ್ತಾರೆ. 

ಬರ್ತಡೇ ಶಾಪಿಂಗ್: 

ಕೆಲವು ದಿನಗಳ ಹಿಂದೆ ಸೋನು ಗೌಡ ಬರ್ತಡೇ ಆಚರಿಸಿಕೊಂಡು. ಸದಾ ಬ್ರ್ಯಾಂಡ್‌ ಬಟ್ಟೆಗಳನ್ನು ಹಾಕುವುದು ನಾನು ಎನ್ನುವ ಸೋನು ಈ ಸಲ ವಿಡಿಯೋ ಮಾಡುವ ಮೂಲಕ ತಮ್ಮ ಶಾಪಿಂಗ್‌ನ ಜನರಿಗೆ ತೋರಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್‌ನಲ್ಲಿ H&M ಎನ್ನುವ ಬ್ರ್ಯಾಂಡ್‌ನಲ್ಲಿ ಬಟ್ಟೆ ಖರೀದಿಸಿದ್ದಾರೆ. ಒಂದು ಜೀನ್ಸ್‌ ಪ್ಯಾಂಟಿಗೆ ಇಲ್ಲಿ 3 ಸಾವಿರ ರೂಪಾಯಿ. ಒಮ್ಮೆ ನೋಡಿ ಗಾಬರಿ ಆದ ಸೋನು ಸುಮ್ಮನಾಗಿ ಬಜೆಟ್ ಶಾಪಿಂಗ್ ಆರಂಭಿಸುತ್ತಾರೆ. ಮೂರ್ನಾಲ್ಕು ಬಟ್ಟೆಗಳನ್ನು ಟ್ರಯಲ್ ಮಾಡಿ ಸುಮಾರು 6 ಸಾವಿರ ರೂಪಾಯಿ ಬಿಲ್ ಮಾಡುತ್ತಾರೆ. ಜನರು ನಂಬುವುದಿಲ್ಲ ಎಂದು ಬಿಲ್‌ ಕೂಡ ತೋರಿಸಿದ್ದಾರೆ. 

ಇಟ್ಕೊಂಡಿಲ್ಲ ಬಿಡೋಕೆ ಲವ್‌ನಿಂದ ಏನ್ ಸಿಗುತ್ತೆ ಅಸಹ್ಯ: ಕನಸಿನ ರಾಜನ ಬಗ್ಗೆ ಸೋನು ಗೌಡ ಟ್ವಿಸ್ಟ್‌

ಅದಾದ ಮೇಲೆ ಅತಿ ದುಬಾರಿ ಕಾಫಿಗಳನ್ನು ಮಾರು ಸ್ಟಾರ್‌ಬಗ್ಸ್‌ಗೆ ಭೇಟಿ ನೀಡಿ ತಮ್ಮ ನೆಚ್ಚಿನ ಕಾಫಿ ಕುಡಿದಿದ್ದಾರೆ. ಸೋನು ಡಯಟ್ ಮಾಡುತ್ತಿರುವ ಕಾರಣ ಅಲ್ಲಿದ್ದ ರುಚಿ ರುಚಿ ಆಹಾರ ತಿನ್ನುವುದಕ್ಕೆ ಆಗಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ. ಕಾಫಿ ಕುಡಿದರೆ ತುಂಬಾ ಖುಷಿಯಾಗುತ್ತದೆ ಆದರೆ ಅದರಲ್ಲಿರುವ ನೊರೆ ಕಂಡರೆ ನನಗೆ ಆಗುವುದಿಲ್ಲ ಎಂದು ಬೇಸರ ಕೂಡ ಮಾಡಿಕೊಂಡಿದ್ದಾರೆ. 

ಈ ವಿಡಿಯೋ ಕಾಮೆಂಟ್‌ ಬಾಕ್ಸ್‌ನಲ್ಲಿ ಯಾರೊಬ್ಬರೂ ನೆಗೆಟಿವ್ ಕಾಮೆಂಟ್ ಮಾಡಿಲ್ಲ ಬದಲಿಗೆ ಬರ್ತಡೇ ವಿಶ್ ಮಾಡಿದ್ದಾರೆ. ಆದರೆ ಇದೇ ವಿಡಿಯೋ ಫೇಸ್‌ಬುಕ್‌ನಲ್ಲಿದ್ದು ಅದಕ್ಕ ಸಾಕಷ್ಟು ನೆಗೆಟಿವ್ ಕಾಮೆಂಟ್ ಬಂದಿದೆ. ಬ್ರ್ಯಾಂಡ್ ಬ್ರ್ಯಾಂಡ್ ಎನ್ನುವ ವ್ಯಕ್ತಿ ಯಾಕೆ ಡಬ್ಬ ಕಂಪನಿಯ ಬ್ರ್ಯಾಂಡ್ ಬಟ್ಟೆ ಹಾಕಿ ರೀಲ್ಸ್ ಮಾಡುವುದು ಎಂದು ಕಾಲೆಳೆದಿದ್ದರು.

ಬಿಬಿ ಮನೆಯಲ್ಲಿ ವಿಡಿಯೋ ಕಾಲ್ ಚರ್ಚೆ:

ಹೌದು....ಹುಡುಗನನ್ನು ನಂಬಿ ಮಾಡಿದ ವಿಡಿಯೋ ಕಾಲ್ ಲೀಕ್ ಆಗಿರುವ ಬಗ್ಗೆ ಸೋನು ಗೌಡ ಸತ್ಯ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ರೀತಿ ತಪ್ಪು ಮಾಡಬೇಡಿ ಎಂದು ಹುಡುಗಿಯರಿಗೆ ಕರೆ ಕೊಟ್ಟಿದ್ದಾರೆ. ತಪ್ಪು ಮಾಡಿದ್ದೀನಿ. ಅದನ್ನು ಒಪ್ಪಿಕೊಳ್ತೇನೆ. ಹುಡುಗಿಯರು ನನ್ನ ರೀತಿ ಸ್ಟ್ರಾಂಗ್​ ಆಗಿರಿ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ ಎಂದು  ಮನವಿ ಮಾಡಿದ್ದಾರೆ.ವಿಡಿಯೋ ಕಾಲ್‌ ಮಾಡಿ ಅದನ್ನ ರೆಕಾರ್ಡ್ ಮಾಡಿಕೊಂಡು ಬಳಿಕ ಬ್ಯ್ಲಾಕ್ ಮೇಲ್‌ ಮಾಡಿದ ಉದಾಹರಣೆಗಳನ್ನ ನೋಡಬಹುದು. ಇದೀಗ ಅದೇ ತರ ಸೋನು ಗೌಡಗೂ ಆಗಿದ್ದು, ಇಂತಹ ತಪ್ಪು ಮಾಡಬೇಡಿ ಎಂದು ಹುಡುಗಿಯರು ಹೇಳಿದ್ದಾರೆ. 

ಬಿಗ್ ಬಾಸ್ ಸೋನು ಗೌಡ ಬ್ರಾ ವಿಡಿಯೋ ವೈರಲ್, ಓನ್ಲೀ ಫಾರ್ ಲೇಡೀಸ್ ಅಂದ್ರೂ ಪಡ್ಡೆ ಹೈಕ್ಳು ಮುಗಿಬಿದ್ರು!

ನನಗೆ ಗೊತ್ತಿರುವ ವ್ಯಕ್ತಿ ನನ್ನ ಜೊತೆ ಮೂರು ವರ್ಷ ಇದ್ದ. ಅವನು ಎಂಎಸ್ಸಿ ಮುಗಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ. ನಂತರ ಪ್ರಪೋಸ್​ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್​ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್​ ಮಾಡಿದೆ ಎಂದು ತಮ್ಮ ವಿಡಿಯೋ ಲೀಕ್‌ ಬಗ್ಗೆ ಸತ್ಯಾಂಶವನ್ನು ಬಿಚ್ಚಿಟ್ಟಿದ್ದಾರೆ.

Latest Videos
Follow Us:
Download App:
  • android
  • ios