ಬಿಗ್ ಬಾಸ್ ಸೋನು ಗೌಡ ಬ್ರಾ ವಿಡಿಯೋ ವೈರಲ್, ಓನ್ಲೀ ಫಾರ್ ಲೇಡೀಸ್ ಅಂದ್ರೂ ಪಡ್ಡೆ ಹೈಕ್ಳು ಮುಗಿಬಿದ್ರು!

ಬಿಗ್ ಬಾಸ್ ಖ್ಯಾತಿಯ ಸೋನು ಗೌಡ ಆಗಾಗ ಸುದ್ದಿಯಲ್ಲಿರುವ ನಟಿ. ಇವರ ಕೆಲ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಸದ್ಯ ಸೋನು ಗೌಡ ಹೊಸ ವೀಡಿಯೋವೊಂದನ್ನು ಶೇರ್ ಮಾಡ್ಕೊಂಡಿದ್ದು, ಬ್ರಾ ಬಗ್ಗೆ ಮಾಹಿತಿ ಶೇರ್ ಮಾಡ್ಕೊಂಡಿದ್ದಾರೆ.

Only For Ladies, Bigg Boss Sonu Gowda Bra Video Viral Vin

ಸೋಷಿಯಲ್ ಮೀಡಿಯಾ ಚೆಲುವೆ, ಟ್ರೋಲ್ ಕ್ವೀನ್ ಸೋನು ಶ್ರೀನಿವಾಸ ಗೌಡ ಆಗಾಗ ಸುದ್ದಿಯಲ್ಲಿರುತ್ತಾರೆ. ಸೋನು ಶ್ರೀನಿವಾಸ್ ಗೌಡ ಓಟಿಟಿ ಬಿಗ್ ಬಾಸ್ ಸೀಸನ್ 1ರಲ್ಲಿ ಸ್ಪರ್ಧಿಸಿದ್ದರು. ಫಿನಾಲೆ ವಾರ ತಲುಪಿ ಫಿನಾಲೆ ರೌಂಡ್‌ನಲ್ಲಿ ಎಲಿಮಿನೇಟ್ ಆಗಿದ್ದರು. ಆ ನಂತರ ಅವರು ನೀಡೋ ಬೋಲ್ಡ್‌ ಸ್ಟೇಟ್‌ಮೆಂಟ್ ಆಗಾಗ ಸುದ್ದಿಯಾಗುತ್ತದೆ. ಈ ಹಿಂದೆ ಸೋನು ಗೌಡ ಯೂಟ್ಯೂಬ್‌ನಲ್ಲಿ ವೀಡಿಯೋವೊಂದನ್ನು ಶೇರ್ ಮಾಡ್ಕೊಂಡಿದ್ದು ಓನ್ಲೀ ಫಾರ್ ಲೇಡೀಸ್, ಹುಡುಗರು ನೋಡ್ಬೇಬೇಡಿ ಎಂದಿದ್ದರು. ಇದರಲ್ಲಿ ಬ್ರಾ ಹೇಗೆ ಧರಿಸುವುದು ಎಂಬ ವಿಡಿಯೋ ಮಾಡಿದ್ದರು. ಹೆಣ್ಣುಮಕ್ಕಳು (Girls) ಹೇಗೆ ಬ್ರಾ ಹಾಕಬೇಕು ಹಾಗೂ ಯಾವ ರೀತಿಯ ಬ್ರಾ ತೆಗೆದುಕೊಳ್ಳಬೇಕು ಎಂಬುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಸೂಚಿಸಿದ್ದರು. ಜೊತೆಗೆ ಅದನ್ನು ಯಾವ ರೀತಿ ಹಾಕಬೇಕು ಎಂಬುವುದರ ಬಗ್ಗೆ ಕೂಡ ವಿಡಿಯೋ ಮೂಲಕ ತಿಳಿಸಲಾಗಿತ್ತು.

ಇದೀಗ ಹೊಸ ವಿಚಾರವೊಂದನ್ನು ಸೋನು ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಮಹಿಳೆಯರ (Woman) ಬ್ರಾದ ಕುರಿತಾದ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಹಿಳೆಯರಿಗೆ ಮಾತ್ರ, ಬೈ 2 ಗೆಟ್ 3 ಫ್ರೀ ಎಂದು ಹಾಕಿಕೊಂಡಿದ್ದಾರೆ. ಕಂಪನಿಯೊಂದರ ಜಾಹಿರಾತಿಗೆ (Advertisement) ಈ ವೀಡಿಯೋ ಮಾಡಿದ್ದಾಗಿ ಸೋನು ಗೌಡ ಹೇಳಿಕೊಂಡಿದ್ದಾರೆ.

ಏನಿದು ಥು ಥು ಥು ಭಾಷೆ? ಅಸಹ್ಯ ಮಾತಾಡುವ ಸೋನು ಗೌಡಗೆ ಸುದೀಪ್ ಸಖತ್ ಕ್ಲಾಸ್

ವೀಡಿಯೋದಲ್ಲಿ ಬ್ರಾ ಎಂದರೇನು, ಇದರಿಂದ ಹೆಣ್ಣುಮಕ್ಕಳಿಗೆ ಏನು ಯೂಸ್, ಯಾವೆಲ್ಲಾ ತರದ ಬ್ರಾ ಇದೆ ಮೊದಲಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬ್ರಾದಲ್ಲಿ ಹಲವು ವಿಧಗಳಿವೆ. ಪ್ಯಾಡೆಡ್ ಬ್ರಾ, ಪ್ಯಾಡೆಡ್‌ ವಯರ್ಡ್‌ ಬ್ರಾ, ಫ್ಯಾಷನ್ ಬ್ರಾ, ಟೀ ಶರ್ಟ್ ಬ್ರಾ ಈ ತರ ಹಲವು ಬ್ರಾಗಳಿವೆ. ಹೆವಿ ಬಸ್ಟ್‌ ಇರುವವರು ಎಂಥಾ ಬ್ರಾ ಹಾಕಬೇಕು, ಪ್ರತನಿತ್ಯ ಆಫೀಸ್ ಹೋಗುವವರು ಹಾಕಲು ಯಾವ ಬ್ರಾ ಕಂಫರ್ಟೆಬಲ್ ಎಂಬುದನ್ನು ಸಹ ತಿಳಿಸಿಕೊಟ್ಟಿದ್ದಾರೆ. ಕೆಲವೊಂದು ನೈಟ್‌ ವೇರ್‌ಗಳ ಬಗ್ಗೆಯೂ ಸೋನು ಗೌಡ ಮಾಹಿತಿ ನೀಡಿದ್ದಾರೆ. 

ಹುಡುಗಿಯರು ಯಾವ ಬ್ರಾ ಹಾಕ್ಬೇಕು ಅಂತ ವಿಡಿಯೋ ಮಾಡಿದ ಸೋನು ಗೌಡ
ಈ ಹಿಂದೆ ಮಾಡಿದ್ದ ವೀಡಿಯೋದ ಆರಂಭದಲ್ಲಿಯೇ ಇದು ಕೇವಲ ಹುಡುಗಿಯರಿಗಾಗಿ ಇರುವ ವೀಡಿಯೋ. ಹುಡುಗರಿಗಾಗಿ (Boys) ಅಲ್ಲ ಎಂದು ಹೇಳಿದ್ದರು. ಹುಡುಗಿಯರಿಗೆ ಬ್ರಾ ಧರಿಸುವಾಗ ಹಲವು ಗೊಂದಲಗಳು ಇರುತ್ತವೆ. ಕೆಲವರಿಗೆ ಬಸ್ಟ್ ಹೆವಿಯಾಗಿ ಕಾಣಲಿ ಎಂದಿರುತ್ತೆ. ಇನ್ನು ಕೆಲವರಿಗೆ ಹೆವಿಯಾಗಿ ಕಾಣದಿರಲಿ ಎಂದಿರುತ್ತೆ. ಹೀಗಿರುವಾಗ ಯಾವ ರೀತಿಯ ಬ್ರಾ ಧರಿಸಬೇಕು ಎಂದು ಸೋನುಗೌಡ ಸೂಚಿಸಿದ್ದಾರೆ. ಹೀಗಿರುವಾಗ ಪ್ಯಾಡೆಡ್ ಬ್ರಾ ಹಾಕಬೇಕಾ ಅಥವಾ ನಾನ್‌-ಪ್ಯಾಡೆಡ್ ಬ್ರಾ ಹಾಕಬೇಕಾ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ. ಕೇವಲ ಬ್ರಾ ಬಗ್ಗೆ ಮಾತ್ರವಲ್ಲ ಪ್ಯಾಂಟಿ ಬಗ್ಗೆಯೂ ಅನೇಕರಿಗೆ ಗೊಂದಲಗಳಿವೆ (Confusion). ಅದನ್ನು ತಿಳಿಸಿಕೊಡಲು ಈ ವೀಡಿಯೋ ಮಾಡಿದ್ದಾಗಿ ಸೋನುಗೌಡ ತಿಳಿಸಿದ್ದಾರೆ.

Bigg boss Ott ಹುಡುಗರಿಗೆ ಪ್ರೋಟಿನ್‌ ಪೌಡರ್ ಕಳಿಸ್ತಾರೆ ಅಮ್ಮ ನನಗೆ ಹಾರ್ಲಿಕ್ಸ್‌ ಕಳುಹಿಸಿ: ಸೋನು ಗೌಡ

ಕೆಲವು ಹುಡುಗಿಯರಿಗೆ ಟೀ ಶರ್ಟ್ ಹಾಕಿದಾಗ ಕಂಫರ್ಟ್ ಇರಲ್ಲ. ಹೀಗಾಗಿ ಮೇಲೆ ವೇಲ್ ಹಾಕ್ಕೊಂಡು ಓಡಾಡುತ್ತಾರೆ. ಕೆಲವರು ಬ್ರಾ ಹಾಕಿದರೆ ನಿಪ್ಪಲ್ ಶೋ ಆಗುತ್ತೆ. ಇಂಥಾ ಸಮಸ್ಯೆಗಳನ್ನು ಹಲವು ಹುಡುಗಿಯರು ಎದುರಿಸುತ್ತಾರೆ. ಏನು ಮಾಡಬೇಕೆಂದು ಗೊತ್ತಿರುವುದಿಲ್ಲ. ಹೀಗಾಗಿ ಮಾಹಿತಿ ನೀಡಿರುವಾಗಿ ಸೋನುಗೌಡ ಹೇಳಿದ್ದಾರೆ. ಇದು ಓನ್ಲಿ ಫಾರ್ ಲೇಡೀಸ್ ಎಂದು ಆರಂಭದಲ್ಲೇ ಹೇಳಿದ್ದಾನೆ. ಹೀಗಾಗಿ ಬ್ಯಾಡ್ ಕಮೆಂಟ್ಸ್ ಹಾಕಬೇಡಿ ಬಾಯ್ಸ್ ಎಂದು ಸೋನುಗೌಡ ಹೇಳಿದ್ದಾರೆ. ಹುಡುಗಿಯರಿಗೆ ತುಂಬಾ ಪ್ರಯೋಜನವಾಗುವ ಕಾರಣ ಈ ವೀಡಿಯೋ ಮಾಡಿದ್ದಾಗಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios