ಲೇಟ್ ಮದುವೆ ನಿರ್ಧಾರ ತೆಗೆದುಕೊಳ್ಳುವ ಯುವತಿಯರಿಗೆ ಬಿಗ್ ಬಾಸ್ ಸಿರಿ ಕಿವಿ ಮಾತು; ಬೇಗ ಆದ್ರೆ ಈ ಸಮಸ್ಯೆ ದೂರವಾಗಲ್ವಾ?
ಸೈಲೆಂಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸರಿ. ಆತುರದ ಮದುವೆ ಬೇಗ ಎನ್ನುತ್ತಿರುವುದು ಯಾಕೆ?
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಸಿರಿ ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಬಿಬಿ ಮನೆಯಲ್ಲಿದ್ದಾಗ ಮದುವೆ ಬಗ್ಗೆ ಸಣ್ಣ ಪುಟ್ಟ ಅಭಿಪ್ರಾಯ ಹಂಚಿಕೊಂಡ ಸಿರಿ ಹೊರ ಬರುತ್ತಿದ್ದಂತೆ ಸೈಲೆಂಟ್ ಆಗಿ ಮದುವೆ ಮಾಡಿಕೊಂಡಿದ್ದಾರೆ. ದಿಢೀರ್ ಅಂತ ನಿರ್ಧಾರ ಬದಲಾಯಿಸಲು ಕಾರಣವೇನು? ಈಗಿನ ಯುವತಿಯರಿಗೆ ಮದುವೆ ಬಗ್ಗೆ ಕೊಟ್ಟ ಸಲಹೆ ಇಲ್ಲಿದೆ...
ಜೂನ್ 13ರಂದು ಸಿರಿ ಮತ್ತು ನಿರ್ದೇಶಕ ಕಮ್ ನಟ ಪ್ರಭಾಕರ್ ಬೋರೇಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಕೊಂಡರು, ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದರು.'ನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿರಲಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದು ಇತ್ತ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸಿರಿ ಮಾತನಾಡಿದ್ದಾರೆ.
ಏನಿದು ಹುಚ್ಚುತನ! ಟಿಕೆಟ್ ಬುಕ್ಕಿಂಗ್ ದಿನಾಂಕ ಮರೆತ ನಟಿ ನಿಹಾರಿಕಾ; ತಿಂಗಳು ಮುನ್ನವೇ ಹೋದ ವಿಡಿಯೋ ವೈರಲ್!
'ಇಷ್ಟು ದಿನ ನನಗೆ ಮದುವೆ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ನಮ್ಮ ತಾಯಿ ಬಿಟ್ಟರೆ ನಾನು ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಾನು ನನ್ನ ತಾಯಿಗೆ ಒಂದು ಮಾತು ಹೇಳುತ್ತ ಇದ್ದೆ...ನಿನ್ನ ಮಗಳು ಖುಷಿಯಾಗಿ ಇರಬೇಕು ಅದೇ ಮುಖ್ಯ ನೋಡು ಅಂತಿದ್ದೆ. ಆದರೆ ಬಿಗ್ ಬಾಸ್ ಆದ ಬಳಿಕ ಆಗಬೇಕು ಎಂಬ ಮನಸ್ಸು ಬಂತು ಆದರೆ ಒತ್ತಡ ಅಂತೇನಿಲ್ಲ. ಹೀಗೆ ಆಗಬೇಕು ಎಂದು ಅನ್ನಿಸಿತ್ತು. ಹೊರಗೆ ಬಂದ ಮೇಲೆ ಈ ಬಗ್ಗೆ ನಿರ್ಧಾರ ಮಾಡಿದೆ. ಬಳಿಕೆ ಇವರನ್ನು ಮದುವೆ ಆಗಬಹುದು ಎಂದು ಅನ್ನಿಸಿದ ಮೇಲೆ ನಾನು ಮದುವೆಯಾದೆ' ಎಂದು ಸಿರಿ ಹೇಳಿದ್ದಾರೆ.
'ನಾನು ಯಾವತ್ತೂ ಮದುವೆ ಬೇಡ ಎಂದು ಅಂದುಕೊಂಡಿಲ್ಲ. ನನ್ನ ಅರ್ಥ ಮಾಡಿಕೊಳ್ಳುವವರು ಸಿಗಬೇಕು ಎಂದೇ ಇತ್ತು. ಮದುವೆ ವಿರುದ್ಧನೂ ಅಲ್ಲ ನಾನು. ನನ್ನ ಹಣೆಬರಹದಲ್ಲಿ ಈಗ ಬರ್ದಿದೆ. ಮನೆಯಲ್ಲಿ ಪ್ರಯತ್ನ ಮಾಡಿದ್ದರು ಆದರೆ ಈಗ ಆ ಕಾಲ ಕೂಡಿ ಬಂದಿದೆ. ಮದುವೆ ಬೇಗ ಆಗಿ ಏನಾದರೂ ಸಮಸ್ಯೆ ಮಾಡಿಕೊಳ್ಳುವುದಕ್ಕಿಂತ ನಾನು ರೆಡಿ ಇದ್ದೀನಿ ಎಂದು ರೆಡಿ ಆದ ಮೇಲೆ ಮದುವೆಯಾಗೋದು ಸರಿ. ಯಾರಿಗಾದರೂ ಇದು ಡೊಡ್ಡ ನಿರ್ಧಾರ. ನನಗೆ ನನ್ನ ಪತಿ ಬದುಕು ಸೀರಿಯಲ್‌ನಿಂದ ಪರಿಚಯ ಇಬ್ಬರು ಸ್ನೇಹಿತರಾಗಿದ್ದೇವು ಬಳಿಕ ಮತ್ತೆ ವರ್ಷಗಳ ನಂತರ ಟಚ್‌ನಲ್ಲಿ ಬಂದೆವು. ನಂತರ ಇಬ್ಬರು ಮದುವೆಯಾಗೋಣ ಎಂದು ನಿರ್ಧಾರ ಮಾಡಿದೆವು. ಈಗಲೂ ಫ್ರೆಂಡ್ ಜೊತೆಗೆ ಇದ್ದೇನೆ ಎಂದು ಅನಿಸುತ್ತದೆ. ಇಬ್ಬರಲ್ಲೂ ಪ್ರಪೋಸ್ ಏನೂ ಆಗಿಲ್ಲ.ಮಾತುಕತೆ ಆಯ್ತು ಹಾಗೆ ಮದುವೆ ಆದೆವು' ಎಂದಿದ್ದಾರೆ ಸಿರಿ.