'ನಾನು ಊಟ ಬೇಡ ಅಂತೀನಿ.. ಮುದ್ದು ಮಾಡಿಯೇ ತಿನ್ನಿಸ್ಬೇಕು..' ಸಂಗೀತಾಗೆ ಲಾರ್ಡ್‌ ಪ್ರಥಮ್‌ ಆರ್ಡರ್‌!

ಮನೆಯ ಸದಸ್ಯರಿಂದ ಸೇವೆ ತೆಗೆದುಕೊಂಡು ಪ್ರಥಮ್ ಬಳಿಕ ಅವರ 'ಸರಿ-ತಪ್ಪು'ಗಳ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿ ಅಲ್ಲಿಂದ ಹೋಗಿದ್ದಾರೆ. ಪ್ರಥಮ್ ಹೋದ ಬಳಿಕ ಮನೆಯ ವಾತಾವರಣ ಬದಲಾಗಿದೆ. ಈ ಮೂಲಕ ಅಲ್ಲಿಗೆ ಪ್ರಥಮ್ ಬಂದಿದ್ದು ಸಾರ್ಥಕವಾಯಿತು ಎಂಬಂತಾಗಿದೆ. ಪ್ರಥಮ್ ಸರ್ವಾಧಿಕಾರಿಯಂತೆ ಬಂದು ಮನೆಯನ್ನೆಲ್ಲ ಬದಲಾಯಿಸಿ ಹೋಗಿದ್ದಾರೆ.

Bigg Boss season 4 winner Pratham visited to this season house srb

ಬಿಗ್ ಬಾಸ್ ಮನೆಗೆ ಪ್ರಥಮ್ ಬಂದಿದ್ದಾರೆ. ಈ ಮೊದಲು ಬಿಗ್ ಬಾಸ್ 'ಸೀಸನ್‌ 4'ನ ವಿನ್ನರ್ ಆಗಿರುವ ಪ್ರಥಮ್ ಈ ಸೀಸನ್‌ ಬಿಗ್ ಬಾಸ್ ಮನೆಗೆ Dictator' ಆಗಿ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಆದೇಶದಂತೆ, ಲಾರ್ಡ್‌ ಆಗಿ ಬಂದ ಪ್ರಥಮ್ ಮೊಟ್ಟಮೊದಲು ಮನೆಯನ್ನೆಲ್ಲ ಓಡಾಡಿ ಸೂಪರ್‌ವೈಸ್ ಮಾಡಿದ್ದಾರೆ. ಹೌಸ್‌ ಕೀಪಿಂಗ್ ಮತ್ತು ಮನೆ ನೋಡಿಕೊಳ್ಳುವ ಜವಾಬ್ದಾರಿ ಬಗ್ಗೆ ಸ್ಪರ್ಧಿಗಳ ಜತೆ ಮಾತನಾಡಿ, ಅವರಿಗೆ ತಮ್ಮ ಜವಾಬ್ದಾರಿಗಳನ್ನು ತಿಳಿಸಿದ್ದಾರೆ. ಬಿಗ್ ಬಾಸ್ ಆದೇಶದಂತೆ ದೊಡ್ಮನೆಯಲ್ಲಿ ಅರ್ಧ ದಿನ ಕಳೆದು ಪ್ರಥಮ್ ಬಂದ ದಾರಿಯಲ್ಲಿ ವಾಪಸ್ ಆಗಿದ್ದಾರೆ. 

ದೊಡ್ಮನೆಯಲ್ಲಿ ಸಂಗೀತಾ ಲಾರ್ಡ್‌ ಪ್ರಥಮ್‌ಗೆ ಊಟ ತಿನ್ನಿಸಿದ್ದಾರೆ. ನಿಧಾನಕ್ಕೆ ಮುದ್ದುಮಾಡಿ ತಿನ್ನಿಸಬೇಕು ಎಂದು ಪ್ರಥಮ್ ಸಂಗೀತಾಗೆ ಆಜ್ಞೆ ಮಾಡಿದ್ದಾರೆ. 'ಕೈ ನೋಯ್ತಿದೆ, ಸ್ವಲ್ಪ ಒತ್ತಿ' ಎಂದು ಹೇಳಿ ತುಕಾಲಿ ಸಂತು ಬಳಿ ಕೈ ಒತ್ತಿಸಿಕೊಂಡಿದ್ದಾರೆ. ಬಳಿಕ ತುಕಾಲಿ ಸಂತೋಷ್‌ಗೆ 'ಮನೆಯಲ್ಲಿರುವ ಎಲ್ಲಾ ಬಲ್ಬ್‌ಗಳನ್ನು ಲೆಕ್ಕಹಾಕಿ ತಿಳಿಸುವಂತೆ ಕೇಳಿದ್ದಾರೆ ಪ್ರಥಮ್. ಸಂತು ಲೆಕ್ಕ ಹಾಕಲು ಹೋದಾಗಲೂ ಕಾರ್ತಿಕ್ ಮಹೇಶ್‌ಗೆ ಕೈ ಒತ್ತುವಂತೆ ಹೇಳಿ ಒತ್ತಿಸಿಕೊಂಡಿದ್ದಾರೆ ಪ್ರಥಮ್. 

ಬಗೆಬಗೆಯಾಗಿ ಮನೆಯ ಸದಸ್ಯರಿಂದ ಸೇವೆ ತೆಗೆದುಕೊಂಡು ಪ್ರಥಮ್ ಬಳಿಕ ಅವರ 'ಸರಿ-ತಪ್ಪು'ಗಳ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿ ಅಲ್ಲಿಂದ ಹೋಗಿದ್ದಾರೆ. ಪ್ರಥಮ್ ಹೋದ ಬಳಿಕ ಮನೆಯ ವಾತಾವರಣ ಬದಲಾಗಿದೆ. ಈ ಮೂಲಕ ಅಲ್ಲಿಗೆ ಪ್ರಥಮ್ ಬಂದಿದ್ದು ಸಾರ್ಥಕವಾಯಿತು ಎಂಬಂತಾಗಿದೆ. ಪ್ರಥಮ್ ಸರ್ವಾಧಿಕಾರಿಯಂತೆ ಬಂದು ಮನೆಯನ್ನೆಲ್ಲ ಬದಲಾಯಿಸಿ ಹೋಗಿದ್ದು, ಇದೀಗ ಮನೆ ಹೊಸ ಹುರುಪು-ಕಳೆ ತುಂಬಿಕೊಂಡು ಜೀವಕಳೆಯಿಂದ ಕಂಗೊಳಿಸುತ್ತಿದೆ. ಇದೀಗ ಅಲ್ಲಿರುವ ಸ್ಪರ್ಧಿಗಳು ಹೊಸ ಹೊಸ ರೂಲ್ಸ್ ಬಗ್ಗೆ ಮಾತಾಡುತ್ತಿದ್ದಾರೆ; ಫಾಲೋ ಮಾಡುತ್ತಿದ್ದಾರೆ. 

ಬಿಗ್​ಬಾಸ್​ಗೆ ಹೋಗ್ತೀರಾ ಎಂದಾಗ ಡ್ರೋನ್​ ಪ್ರತಾಪ್ ಹಿಂದೆ​ ಹೇಳಿದ್ದೇನು? ವಿಡಿಯೋ ವೈರಲ್- ಸಕತ್​ ಟ್ರೋಲ್​​

ಬಿಗ್ ಬಾಸ್ ಮನೆಯಲ್ಲಿ ಹೌಸ್ ಕೀಪಿಂಗ್ ಮತ್ತು ಕಿಚನ್ ಡಿಪಾರ್ಟ್ಮೆಂಟ್ ನೋಡಿಕೊಳ್ಳುವ ಬಗ್ಗೆ ಆಗಾಗ ಜಗಳಗಳು ನಡೆಯುತ್ತವೆ. ಇನ್ನುಮುಂದೆ ಇಂಥ ಜಗಳಗಳು ನಿಲ್ಲಬಹುದು ಎಂದು ವೀಕ್ಷಕರು ಭಾವಿಸಬಹುದು. ಹಾಗೇ ಆಗಬಹುದು ಅಂತೇನಿಲ್ಲ. ಇನ್ನು ಮುಂದೆ ಬಿಗ್ ಮನೆಯ ಸದಸ್ಯರು ಯಾವೆಲ್ಲ ರೀತಿಯಲ್ಲಿ 'ಡಿಸಿಪ್ಲೇನ್' ಮೆಂಟೇನ್ ಮಾಡುತ್ತಾರೆ, ಏನೆಲ್ಲ ಕೇರ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

ನಾನು ಹಾಗಂದಿಲ್ಲ ಬ್ರೋ ಎಂದ 'ಡ್ರೋನ್ ಪ್ರತಾಪ್‌'ಗೆ ಹಿಗ್ಗಾಮುಗ್ಗಾ ಬೈದ ವಿನಯ್ ಗೌಡ!

ನಟ ಪ್ರಥಮ್ ಬಿಗ್ ಬಾಸ್ ಕನ್ನಡ ಸೀಸನ್ 4 ವಿನ್ನರ್. ಅದಕ್ಕೂ ಮೊದಲು ಕನ್ನಡನಾಡಲ್ಲಿ ಅಷ್ಟೇನೂ ಹೆಸರು ಮಾಡಿರಲಿಲ್ಲ. ಆದರೆ, ಬಿಗ್ ಬಾಸ್ ಗೆದ್ದ ಬಳಿಕ, ಪ್ರಥಮ್ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಸಿನಿಮಾದಲ್ಲಿ ನಟಿಸಿದ್ದಲ್ಲದೇ ಆಗಾಗ ಕೆಲವು ಸಾಮಾಜಿಕ ಕಳಕಳಿ ಕೂಡ ಪ್ರದರ್ಶಿಸಿ ತಮ್ಮದೇ ಆದ ವಿಶಿಷ್ಠ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಿನಲ್ಲಿ, ಪ್ರದೀಪ್ ಈಶ್ವರ್ ಆಯ್ತು, ಪ್ರಥಮ್ ಆಯ್ತು, ಬಿಗ್ ಬಾಸ್ ಮನೆಗೆ ಇನ್ನೂ ಯಾರೆಲ್ಲ ಬಂದು ಹೋಗಲಿದ್ದಾರೆ ಎಂಬ ಸಂಗತಿ ಕುತೂಹಲ ಕೆರಳಿಸುತ್ತಿದೆ. ಅಂದಹಾಗೆ,ವೀಕ್ಷಕರು ಈ 'ಬಿಗ್ ಬಾಸ್‌ ಕನ್ನಡ ಸೀಸನ್ 10' ಶೋವನ್ನು ದಿನದ 24 ಗಂಟೆಯೂ 'ಜಿಯೋ ಸಿನಿಮಾ'ದಲ್ಲಿ ವೀಕ್ಷಿಸಬಹುದು. ಸೋ, ಸ್ಟೇ ಟ್ಯೂನ್ಡ್‌ ವಿತ್ 'ಜಿಯೋ ಸಿನಿಮಾ'.

Latest Videos
Follow Us:
Download App:
  • android
  • ios