ಬಿಗ್ ಬಾಸ್ ಸೀಸನ್‌ 4ರ ನಂತರ ಎಲ್ಲಿಯೂ ಕಾಣಿಸಿಕೊಳ್ಳದ ಸಂಜನಾ ಚಿದಾನಂದ್‌ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿ ಮೂಲಕ ಮತ್ತೆ ಕಮ್‌ ಬ್ಯಾಕ್ ಮಾಡಿದ್ದಾರೆ. ಸಿನಿಮಾ ನಟಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಸಂಜನಾ ಇತ್ತಿಚಿಗೆ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ತಮಾಷೆ ಮಾಡಲು ಹೋಗಿ ನಟಿ ಸಂಜನಾಗೆ ನೆಟ್ಟಿಗರು ಕೇಳಿರುವ ಪ್ರಶ್ನೆ ನೋಡಿ....

ಕನ್ನಡಿ ನೋಡಿಕೊಳ್ಳುತ್ತಲೇ ಫೇಮಸ್ ಆದ ಸಂಜನಾ; ಈಗ 'ಬ್ರಹ್ಮಗಂಟು' ಗೊಂಬೆ!

'ಫಸ್ಟ್ ನೈಟ್‌ಗೆ ಬೇಕಿರೋ 3 ಮುಖ್ಯವಾದ ವಸ್ತುಗಳು ಏನು? ಈ ಇದಕ್ಕೆ ಉತ್ತರ ಕೊಡಿ...' ಎಂದು ಪ್ರಶ್ನೆ ಕೇಳಿದ್ದಾರೆ. ' ಹುಡುಗ, ಹುಡುಗಿ ಮತ್ತೆ ಜಾಗ ಸಾಕು' ಎಂದು ಸಂಜನಾ ಉತ್ತರ ನೀಡಿದ್ದಾರೆ. ಈ ಸ್ಟೋರಿಯ ಸ್ಕ್ರೀನ್‌ ಶಾಟ್‌ ತೆಗೆದುಕೊಂಡು ಎಲ್ಲಾ ಟ್ರೋಲ್‌ ಪೇಜ್‌ಗಳಲ್ಲಿಯೂ ಪೋಸ್ಟ್‌ ಮಾಡಲಾಗುತ್ತಿದೆ.

ನೆಟ್ಟಿಗರ ರಿಯಾಕ್ಷನ್: 
ಕಿಚ್ಚ ಸುದೀಪ್ ಅಥವಾ ಪ್ರತಿ ಸ್ಪರ್ಧಿಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ಏನೂ ತೆಳಿಯದ ಮುಗ್ಧಳಂತೆ ಉತ್ತರ ನೀಡುತ್ತಿದ್ದ ಸಂಜನಾ ನಿಜಕ್ಕೂ ದಡ್ಡಿ ಎಂದು ಪ್ರೂವ್ ಮಾಡೋಕೆ ಈ ಉತ್ತರ ಒಂದು ಸಾಕು ಎಂದಿದ್ದಾರೆ ನೆಟ್ಟಿಗರು. 'ಮೇಡಂ ಅವನ್ಯಾರೋ ವಸ್ತು ಕೇಳಿದ್ದು..ನಿಮಗೆ ಯಾವಾಗಿಂದ ಹುಡುಗ, ಹುಡುಗಿ ವಸ್ತು ಆಗಿದ್ದು,' ಎಂದು ಕಾಲೆಳೆದಿದ್ದಾರೆ.