ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ತಮಿಳು ನಟಿ ರೈಜಾ ವಿಲ್ಸನ್‌ ಕೆಲವು ದಿನಗಳ ಹಿಂದೆ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ವೈದ್ಯೆ ಭೈರವಿ ಬಳಿ ಫೇಷಿಯಲ್ ಮಾಡಿಸಿಕೊಂಡಿದ್ದಾರೆ. ತಜ್ಞೆಯ ಎಡವಟ್ಟಿನಿಂದ ತಮ್ಮ ಮುಖ ಕೆಟ್ಟಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿರುವ ಕಾರಣ ವೈದ್ಯೆ ದೂರು ನೀಡಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. 

ರೈಜಾ ವಾದ:
ಮುಖ ಊದಿಕೊಂಡಿರುವ ಫೋಟೋ ಹಂಚಿಕೊಂಡ ರೈಜಾ 'ನಾನು ಬೇಡ ಬೇಡವೆಂದರೂ ಒತ್ತಾಯ ಮಾಡಿ ನನಗೆ ಹೊಸ ಟ್ರೀಟ್‌ಮೆಂಟ್ ಪ್ರಯೋಗ ಮಾಡಿದರು. ಇದರ  ಅಡ್ಡ ಪರಿಣಾಮದಿಂದ ನನ್ನ ಸೌಂದರ್ಯ ಹಾಗೂ ಮುಖ ಕೆಟ್ಟು ಹೋಗಿದೆ. ಅದಕ್ಕಾಗಿ ಆ ವೈದ್ಯರು ಹಾಗೂ ಕ್ಲನಿಕ್‌ ಮ್ಯಾನೇಜ್‌ಮೆಂಟ್‌ ನನಗೆ ಒಂದು ಕೋಟಿ  ಪರಿಹಾರ ನೀಡಬೇಕಿದೆ,' ಎಂದು ರೈಜಾ ಹೇಳಿದ್ದರು.

ವೈದ್ಯೆ ಭೈರವಿ ಮಾತು:
'ಈವರೆಗೂ ರೈಜಾ ನನ್ನ ಬಳಿ ಮೂರು ವಿಭಿನ್ನ ಟ್ರೀಟ್‌ಮೆಂಟ್‌ಗಾಗಿ ಭೇಟಿ ನೀಡಿದ್ದರು. ಮೊದಲ ಬಾರಿ ಪಡೆದ ಚಿಕಿತ್ಸೆ ಜುಲೈ 18,2020ರಲ್ಲಿ ಎರಡನೇ ಸಲ ಮಾರ್ಚ್‌ 25,2021 ಹಾಗೂ ಮೂರನೇ ಸಲ ಏಪ್ರಿಲ್ 16. ಅಮೇಲೆ ಇನ್‌ಸ್ಟಾಗ್ರಾಂನಲ್ಲಿ ಚಿಕಿತ್ಸೆ ತಪ್ಪಾಗಿದೆ, ಎಂದು ಆರೋಪಿಸಿರುವ ವಿಡಿಯೋ ನೋಡಿದೆ. ಅದು ನಮ್ಮಿಂದ ಆಗಿಲ್ಲ. ರೈಜಾ ಮುಖಕ್ಕೆ ಚಿಕಿತ್ಸೆ ಪಡೆದುಕೊಂಡಿಲ್ಲ. ಚರ್ಮಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದರು. ಚಿಕಿತ್ಸೆ ನಂತರ ಯಾವುದೇ ರೀತಿಯ ಅಭ್ಯಾಸಗಳು ಹಾಗೂ ಚರ್ಮದ ಸಮಸ್ಯೆಗೆ ಕಾರಣವಾಗುವ ವ್ಯಾಯಾಮಗಳನ್ನು ಮಾಡಬೇಡಿ, ಎಂದು ತಾವು ಅವರಿಗೆ ಸಲಹೆ ನೀಡಿದ್ದೇವೆ.. ಉಲ್ಲಂಘಿಸಿದ ಕಾರಣ ಕೆನ್ನೆಯ ಮೇಲೆ, ಕಣ್ಣಿನ ಕೆಳಗ ಕೆಂಪು ಬಣ್ಣ ಆಗಿದೆ,' ಎಂದು ಭೈರವಿ ಹೇಳಿದ್ದಾರೆ.

ಫೇಷಿಯಲ್‌ ಮಾಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ಬಿಗ್‌ಬಾಸ್‌ ರೈಜಾ! 

ಸುಮಾರು 10 ವರ್ಷಗಳಿಂದ ರೈಜಾ ವೈದ್ಯೆ ಭೈರವಿ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಬೇರೆ ವೈದ್ಯರ ಬಳಿಯೂ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಾಡಿದ ಎಡವಟ್ಟಿನಿಂದ ಪಾರಾಗಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಭೈರವಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ರೈಜಾ ಮದ್ರಾಸ್ ಕೋರ್ಟ್‌ನಲ್ಲಿ 1 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಎಂದು ವರದಿಯಾಗಿತ್ತು. ಆದರೆ ವೈದ್ಯೆ ಭೈರವಿ ತಿರುಗೇಟು ನೀಡಿ, 5 ಕೋಟಿ ಮಾನನಷ್ಟ ಮೊಕದ್ದಮೆ ಪ್ರಕರಣ ಹೂಡಿರುವುದಾಗಿ ಹೇಳಿದ್ದಾರೆ.